ಈ ಬಾರಿ ದಸರಾಗೆ ಪುಟಾಣಿ ಆನೆ ಸೇರಿ 15 ಆನೆಗಳು ಭಾಗಿ : ದಸರಾ ಕಾರ್ಯಕ್ರಮದ ವಿವರ

Team Newsnap
1 Min Read

ಈ ಬಾರಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2022ರಲ್ಲಿ 14 ಅಲ್ಲ 15 ಆನೆಗಳು ಪಾಲ್ಗೊಳ್ಳಲಿವೆ.
ಸೆಪ್ಟೆಂಬರ್ 26 ರಿಂದ ದಸರಾ ಆರಂಭ ಆಗಲಿದೆ. ಮೈಸೂರು ದಸರಾ’ವನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಘಾಟಿಸಲಿದ್ದಾರೆ.

ಈಗಾಗಲೇ ಕಾಡಿನಿಂದ ನಾಡಿಗೆ ಗಜಪಡೆಗಳು ಆಗಮಿಸಿವೆ. ಇದೇ ವೇಳೆ ಕಾಡಿನಿಂದ ಆಗಮಿಸಿದ್ದ ಲಕ್ಷ್ಮಿ ಆನೆ, ಗಂಡು ಮರಿಗೆ ಜನ್ಮ ನೀಡಿದ್ದು, ಈ ಹಿನ್ನೆಲೆಯಲ್ಲಿ ತಾಯಿಯೊಂದಿಗೆ ಮರಿ ಆನೆ ಕೂಡ ಭಾಗಿಯಾಗಲಿದೆ ಎಂಬ ಮಾಹಿತಿ ಇದೆ.

ಮೈಸೂರು ಅರಮನೆಯ ಕೋಡಿ‌ ಸೋಮೇಶ್ವರ‌ ದೇಗುಲ ಬಳಿ ಲಕ್ಷ್ಮಿ ಆನೆ ಗಂಡು ಮರಿ ಆನೆಗೆ ಜನ್ಮ ನೀಡಿರುವುದು ವಿಶೇಷವಾಗಿದೆ. ಈ ಮರಿ ಆನೆಗೆ ಮಾಜಿ ಕ್ಯಾಪ್ಟನ್​ ಅರ್ಜುನ್​ ಆನೆ ತಂದೆಯಾಗಿದೆ. ಹೆರಿಗೆಯ ಬಳಿಕ ತಾಯಿ ಆನೆ ಲಕ್ಷ್ಮಿ ಹಾಗೂ ಮರಿ ಆನೆ ಇಬ್ಬರು ಆರೋಗ್ಯವಾಗಿದ್ದಾರೆ.

ಸೆಪ್ಟೆಂಬರ್ 26 ರಂದು ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ನ ಪೂಜಾ ಕಾರ್ಯ ನಡೆಯುವ ಹಿನ್ನೆಲೆ ಸೆ.26 ರಂದು ಬೆಳಿಗ್ಗೆ 10 ರಿಂದ 1.30 ಗಂಟೆ ತನಕ ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ ಮಾಡಲಾಗಿದೆ. 

ಗ್ಯಾಸ್ಟ್ರಿಕ್ ಗೆ ಬಳಕೆ ಮಾಡುವ Rantac , Zinetac ಸೇರಿದಂತೆ 26 ಔಷಧಿಗಳ ನಿಷೇಧ – ಕ್ಯಾನ್ಸರ್ ಬರುವ ಶಂಕೆ

ಅರಮನೆಯಲ್ಲಿ ಅ.4 ರಂದು ರಾಜವಂಶಸ್ಥ ಯದುವೀರ್ ಅವರ ಆಯುಧ ಪೂಜೆ ನೆರವೇರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅ.4 ರಂದು ಬೆಳಿಗ್ಗೆ 10 ರಿಂದ 1.30 ಗಂಟೆ ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ ಮಾಡಲಾಗಿದೆ.

 ಅ.5 ರಂದು ಅರಮನೆಯಲ್ಲಿ ಯದುವೀರ್ ವಿಜಯದಶಮಿಯ ಪೂಜಾ ಕೈಂಕರ್ಯ ನಡೆಯುವ ಕಾರಣ ಇಡೀ ದಿನ ಮೈಸೂರು ಅರಮನೆಗೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. 

ಅ.20 ರಂದು ಸಿಂಹಾಸನ ವಿಸರ್ಜನೆ ನಡೆಯುವ ಕಾರಣ, ಅ.20 ರಂದು ಮೈಸೂರು ಅರಮನೆಗೆ ‌ಬೆಳಿಗ್ಗೆ 10 ರಿಂದ 1.30 ಗಂಟೆ ತನಕ ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ ಮಾಡಲಾಗಿದೆ.

Share This Article
Leave a comment