ಪುಲ್ವಾಮಾದಲ್ಲಿ ಸೇನೆ ಎನ್‍ಕೌಂಟರ್ -3 ಲಷ್ಕರ್ ಉಗ್ರರ ಹತ್ಯೆ

Team Newsnap
1 Min Read

ಜಮ್ಮು ಮತ್ತು ಕಾಶ್ಮೀರ ರಾಜ್ಯದ ಪುಲ್ವಾಮಾದ ದ್ರಾಬ್ಗಾಮ್ ಪ್ರದೇಶದಲ್ಲಿ ಪೋಲಿಸರು ಹಾಗೂ ಭಾರತೀಯ ಸೇನಾ ಪಡೆ ನಡೆಸಿದ ಎನ್‍ಕೌಂಟರ್ ನಲ್ಲಿ ಮೂವರು ಭಯೋತ್ಪಾದಕರನ್ನು ಗುಂಡಿಟ್ಟು ಕೊಲ್ಲಲಾಗಿದೆ.

ಹತ್ಯೆಗೀಡಾದ ಮೂವರು ಭಯೋತ್ಪಾದಕರು ಸ್ಥಳೀಯರು. ಭಯೋತ್ಪಾದಕ ಸಂಘಟನೆ ಎಲ್‍ಇಟಿ ಜೊತೆ ನಂಟು ಹೊಂದಿದ್ದರು. ಅವರಲ್ಲಿ ಓರ್ವನನ್ನು ಜುನೈದ್ ಶೀರ್ಗೋಜ್ರಿ ಎಂದು ಗುರುತಿಸಲಾಗಿದೆ.

ಇದನ್ನು ಓದಿ – ವಿಧಾನ ಪರಿಷತ್​ನ 4 ಕ್ಷೇತ್ರಗಳಿಗೆ ನಾಳೆ ಮತದಾನ: 2.84 ಲಕ್ಷ ಮತದಾರರು, 49 ಮಂದಿ ಚುನಾವಣಾ ಕಣದಲ್ಲಿ

ಮೇ 13 ರಂದು ನಮ್ಮ ಸಹೋದ್ಯೋಗಿ ಹುತಾತ್ಮ ರೆಯಾಜ್ ಅಹ್ಮದ್ ಹತ್ಯೆಯಲ್ಲಿ  ಭಾಗಿಯಾಗಿದ್ದಾನೆ ಎಂದು ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ ತಿಳಿಸಿದ್ದಾರೆ.

Share This Article
Leave a comment