ಮೈ ಶುಗರ್ ಆಡಳಿತ ಮಂಡಳಿಗೆ ನಿರಾಣಿ ಅಧ್ಯಕ್ಷರನ್ನಾಗಿ ನೇಮಿಸಿ!

Team Newsnap
2 Min Read
  • ವಿಧಾನಪರಿಷತ್ ನಲ್ಲಿ ಪಕ್ಷಾತೀತವಾಗಿ ಸದಸ್ಯರಿಂದ ಒತ್ತಾಯ
  • ಸರ್ಕಾರ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಲಿ
  • ನಿರಾಣಿ ಅಧ್ಯಕ್ಷರಾದರೆ, ಮೈಶುಗರ್ ಕಾರ್ಖಾನೆ ಲಾಭದತ್ತ, ಮಂಡ್ಯ ಜಿಲ್ಲೆ ಮೈಶುಗರ್ ಆಡಳಿತ ಮಂಡಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರನ್ನು ಅಧ್ಯಕ್ಷರನ್ನಾಗಿ ರಾಜ್ಯ ಸರ್ಕಾರ ನೇಮಿಸಬೇಕು ಎಂದು ಪಕ್ಷಬೇದ ಮರೆತು ಸದಸ್ಯರು ಒತ್ತಾಯಿಸಿದ ಪ್ರಸಂಗ ಮಂಗಳವಾರ ವಿಧಾನ ಪರಿಷತ್ ನಲ್ಲಿ ಜರುಗಿತು.

ನಿಯಮ 330 ರ ಅಡಿ ಮೈಶುಗರ್ ಕಾರ್ಖಾನೆ ಕುರಿತಾಗಿ ಸದಸ್ಯರು ಪ್ರಸ್ತಾಪಿಸಿದ ಸಂದರ್ಭದಲ್ಲಿ ಸಚಿವ ನಿರಾಣಿ ಅವರು ಒಬ್ಬ ಯಶಸ್ವಿ ಉದ್ಯಮಿ. ಅವರನ್ನು ಈ ಕಾರ್ಖಾನೆಯ ಆಡಳಿತ ಮಂಡಳಿಯ ‌ಅಧ್ಯಕ್ಷರನ್ನಾಗಿ ನೇಮಿಸಿದರೆ, ಪುನಶ್ಚೇತನವಾಗಲಿದೆ ಎಂಬ ವಿಶ್ವಾಸವನ್ನು ಬಹುತೇಕ ಸದಸ್ಯರು ವ್ಯಕ್ತಪಡಿಸಿದರು.

ವಿಧಾನಪರಿಷತ್ ನ ಪ್ರತಿಪಕ್ಷದ ನಾಯಕ ಎಸ್.ಆರ್ ಪಾಟೀಲ್ ಅವರು ಮಾತನಾಡಿದ ಸಂದರ್ಭದಲ್ಲಿ ನಿರಾಣಿ ಅವರಿಗೆ ಸಾಕಷ್ಟು ಅನುಭವವಿದೆ. ಅವರ ಮಾರ್ಗದರ್ಶನದಲ್ಲೇ ಮೈಶುಗರ್ ಕಾರ್ಖಾನೆ ಸರ್ಕಾರದ ಒಡೆತನದಲ್ಲಿ ಇರಬೇಕು. ಅದರಿಂದ ಸಚಿವರಿಗೆ ಒಳ್ಳೆಯ ಹೆಸರು ಬರುತ್ತದೆ ಎಂದು ಸರ್ಕಾರಕ್ಕೆ ಸಲಹೆ ಮಾಡಿದರು.

ನಮ್ಮ ಹಿರಿಯರು ಸಾಕಷ್ಟು ಆಸ್ತಿಯನ್ನು ಮಾಡಿದ್ದಾರೆ/ಅದನ್ನು ನಡೆಸಿಕೊಂಡು ಹೋಗಲು ಆಗಿಲ್ಲ ಎಂದ ಹೇಗೆ.?ಆಸ್ತಿ ಹೆಚ್ಚು ಮಾಡವುದು ಬೇಡ. ಸಚಿವ ನಿರಾಣಿ ಅವರಿಗೆ ಒಂಬತ್ತು ಕಾರ್ಖಾನೆಗಳಿವೆ. ಅವರನ್ನು ಆಡಳಿತ ಮಂಡಳಿಯ ಅಧ್ಯಕ್ಷರಾಗಿ ನೇಮಿಸಬಹುದಲ್ಲವೇ ಎಂದು ಹೇಳಿದರು.

ಜೆಡಿಎಸ್ ನ ಹಿರಿಯ ಸದಸ್ಯ ಶ್ರೀಕಂಠೇಗೌಡ ಕೂಡ ಇದಕ್ಕೆ ಬೆಂಬಲ ಸೂಚಿಸಿ, ಕರ್ನಾಟಕ ಗೃಹ ಮಂಡಳಿಗೆ ವಸತಿ ಸಚಿವರೇ ಅಧ್ಯಕ್ಷರಾಗುತ್ತಾರೆ. ಅದೇ ರೀತಿ ರಾಜ್ಯ ಸರ್ಕಾರ ನಿರಾಣಿ ಅವರನ್ನು ಆಡಳಿತ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಿ. ಇದಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ ಎಂದು ಹೇಳಿದರು.

ಮೈಶುಗರ್ ಕಾರ್ಖಾನೆ ಸರ್ಕಾರದ ಒಡೆತನದಲ್ಲಿ ಇರಬೇಕು‌. ಇದು ಎಲ್ಲರ ಅಭಿಪ್ರಾಯವಾಗಿದೆ. ಹಾಗಾಗಿ ನಿರಾಣಿ ಅವರೇ ಕಾರ್ಖಾನೆಯ ಅಧ್ಯಕ್ಷರಾಗಬೇಕು. ಒಂದು ವರ್ಷದ ಯಶಸ್ವಿಯಾಗಿ ನಡೆಸಿ ತೋರಿಸಲಿ ಎಂದರು.

ಕೈಗಾರಿಕಾ ಸಚಿವರಾಗಿ ನೀವೇ ಅಧ್ಯಕ್ಷರಾಗಬಹುದು. ಇದರಿಂದ ಕಾರ್ಖಾನೆ ಸರ್ಕಾರದ ಒಡೆತನದಲ್ಲಿ ಇರುತ್ತದೆ. ನಿಮಗೂ ಸಾಕಷ್ಟು ಅನುಭವವಿದೆ. ಇದರಿಂದ ಮಂಡ್ಯ ಜಿಲ್ಲಾ ರೈತರಿಗೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಶ್ರೀಕಂಠೇಗೌಡ ಅವರ ಮಾತಿಗೆ ಬಿಜೆಪಿಯ ತೇಜಸ್ವಿನಿ ರಮೇಶ್ ಗೌಡ ಧ್ವನಿಗೂಡಿಸಿದರು.
ನಿರಾಣಿ ಅವರು ಒಬ್ಬ ಯಶಸ್ಸು ಉದ್ಯಮಿ.
ಮೈಶುಗರ್ ಗೆ ಅವರು ಅಧ್ಯಕ್ಷರಾದರೆ, ಖಂಡಿತವಾಗಿಯೂ ಕಾರ್ಖಾನೆ ಕೆಲವೇ ದಿನಗಳಲ್ಲಿ ಲಾಭದತ್ತ ಮುನ್ನಡೆಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಜೆಡಿಎಸ್ ನ ಅಪ್ಪಾಜಿಗೌಡ ಸೇರಿದಂತೆ ಬಹುತೇಕ ಸದಸ್ಯರು ಚರ್ಚೆಯ ಸಂದರ್ಭದಲ್ಲಿ ಆಡಳಿತ ಮಂಡಳಿಗೆ ನಿರಾಣಿ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಲಿ ಸರ್ಕಾರವನ್ನು ಒತ್ತಾಯಿಸಿದರು.

Share This Article
Leave a comment