September 26, 2021

Newsnap Kannada

The World at your finger tips!

ದೆಹಲಿಯಲ್ಲಿ 6 ಮಂದಿ‌ ಉಗ್ರರರ ಬಂಧನ‌ – ಭಾರಿ ಅನಾಹುತಕ್ಕೆ ಸಿದ್ದತೆ

Spread the love

ದೆಹಲಿ ಪೊಲೀಸ್ ಸ್ಪೆಷಲ್ ಸೆಲ್ ಇಂದು ಮಹಾ ಕಾರ್ಯಾಚರಣೆ ಯಲ್ಲಿ 6 ಮಂದಿ ಉಗ್ರರನ್ನು ಬಂಧಿಸಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸ್ಪೆಷಲ್ ಸೆಲ್ ಅಧಿಕಾರಿಗಳು ನಾಲ್ವರು ಉಗ್ರರ ಫೋಟೋಗಳನ್ನು ಬಿಡುಗಡೆ ಮಾಡಿದೆ.

ಜೀಷನ್ ಕಮಾರ್, ಒಸಾಮಾ, ಜನ್ ಮೊಹಮ್ಮದ್ ಅಲಿ ಶೇಖ್, ಮೊಹಮ್ಮದ್ ಅಬುಬಕ್ಕರ್ ಬಂಧಿತ ಉಗ್ರರು.

ಸಮೀರ್ ಹೆಸರಿನ ಓರ್ವ ಉಗ್ರನನ್ನು ಬಂಧಿಸಿದ್ದೇವೆ. ಇಬ್ಬರನ್ನು ದೆಹಲಿಯಲ್ಲಿ ಮತ್ತು ಮೂವರನ್ನು ಉತ್ತರ ಪ್ರದೇಶದಲ್ಲಿ ಬಂಧಿಸಿದ್ದೇವೆ ಎಂದಿದ್ದಾರೆ.

ಬಂಧಿತರಲ್ಲಿ ಇಬ್ಬರನ್ನು ಮುಸ್ಕಟ್ ಮೂಲಕ ಪಾಕಿಸ್ತಾನಕ್ಕೆ ಕರೆದೊಯ್ದು ಸ್ಫೋಟಕಗಳು, ಬಂದೂಕುಗಳು ಮತ್ತು ಎ.ಕೆ. 47 ಬಳಕೆಗೆ ಸಂಬಂಧಿಸಿದಂತೆ 15 ದಿನಗಳ ಕಾಲ ಟ್ರೈನಿಂಗ್ ನೀಡಲಾಗಿತ್ತು ಎಂದು ಹೇಳಿದ್ದಾರೆ.

ಈ ಉಗ್ರರಿಗೆ ದಾವುದ್ ಸಹೋದರ ಆರ್ಥಿಕ ನೆರವು ನೀಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಬಂಧಿತರು ತಮ್ಮ ಗುಂಪಿನಲ್ಲಿ 14-15 ಮಂದಿ ಬಾಂಗ್ಲಾ ಮಾತನಾಡುವವರೂ ಇದ್ದಾರೆಂದು ಬಾಯ್ಬಿಟ್ಟಿದ್ದಾರೆ. ಅವರಿಗೂ ಸಹ ಟ್ರೈನಿಂಗ್ ನೀಡಿರಬಹುದು. ಈ ಉಗ್ರರು ಬಾರ್ಡರ್ ಸಮೀಪದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು ಎನ್ನಲಾಗಿದೆ.

error: Content is protected !!