ಬೆಂಗಳೂರಿನಲ್ಲಿ ಮತ್ತೊಂದು ನಿಗೂಢ ಸ್ಫೋಟ : ಮೂವರ ಸಾವು, ಐವರಿಗೆ ಗಂಭೀರ ಗಾಯ

Team Newsnap
1 Min Read

ಬೆಂಗಳೂರಲ್ಲಿ ಮತ್ತೆ ನಿಗೂಢ ಸ್ಫೋಟಕ್ಕೆ ಮೂವರು ಸಾವನ್ನಪ್ಪಿ, ಐವರು ಗಾಯಗೊಂಡ ಘಟನೆ ಗುರುವಾರ ಮಧ್ಯಾಹ್ನ ಜರುಗಿದೆ.

ಬೆಂಗಳೂರಿನ ಚಾಮರಾಜ ಪೇಟೆಯ ನ್ಯೂ ನಗರ್ತಪೇಟೆಯಲ್ಲಿರುವ ಪತ್ರಕಾಳಿ ಲಾರಿ ಸರ್ವೀಸ್​​ನಲ್ಲಿ ನಿಗೂಢ ಸ್ಫೋಟ ಸಂಭವಿಸಿದೆ.


ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ದುರ್ಘಟನೆಯು ಮಧ್ಯಾಹ್ನ 12.05 ರ ಸುಮಾರಿಗೆ ನಡೆದಿದೆ. ಘಟನೆಯಲ್ಲಿ ಇಬ್ಬರು ಉತ್ತರ ಭಾರತದವರು ಎನ್ನಲಾಗಿದೆ. ಇನ್ನು ಸ್ಫೋಟದ ತೀವ್ರತೆಗೆ 10 ವಾಹನಗಳಿಗೆ ಹಾನಿಯಾಗಿದೆ. ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದೆ ಅನ್ನೋ ಮಾಹಿತಿ ಸಿಕ್ಕಿದೆ.

ಘಟನೆ ಸಂಭವಿಸಿದ ಕೂಡಲೇ ವಿವಿ ಪುರಂ ಠಾಣೆ ಪೊಲೀಸರ ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Share This Article
Leave a comment