October 17, 2021

Newsnap Kannada

The World at your finger tips!

ಕಾಂಗ್ರೆಸ್ ನ 20 ಮಂದಿ ಶಾಸಕರನ್ನು ಬಿಜೆಪಿಗೆ ಕರೆತರುವ ಹೊಣೆ ಸಚಿವ ಮುನಿರತ್ನಗೆ- ಕಟೀಲ್

Spread the love

ಕಾಂಗ್ರೆಸ್​ನಿಂದ 20 ಶಾಸಕರನ್ನು ಬಿಜೆಪಿಗೆ ಕರೆದು ತರುವ ಜವಾಬ್ದಾರಿ ಯನ್ನು ಸಚಿವ ಮುನಿರತ್ನಗೆ ವಹಿಸಲಾಗಿದೆ. ಬೆಂಗಳೂರಿನಲ್ಲಿ ನಡೆದ ಒಬಿಸಿ ಮೋರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈ ಬಾಂಬ್ ಸಿಡಿಸಿದ್ದಾರೆ.

ಕಾಂಗ್ರೆಸ್ ಪಕ್ಷದ 20 ಜನ ಶಾಸಕರು ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ. ಆ ಇಪ್ಪತ್ತು ಶಾಸಕರನ್ನು ಕರೆತರುವ ಜವಾಬ್ದಾರಿಯನ್ನು ಮುನಿರತ್ನಗೆ ನೀಡಲಾಗಿದೆ‌ ಎಂದರು.

ಕಾಂಗ್ರೆಸ್​ನಲ್ಲಿ ಹಿಂದುಳಿದ ವರ್ಗದ ಶಾಸಕರಿಗೆ ಭವಿಷ್ಯವಿಲ್ಲ. ಈಗಾಗಲೇ ಕಾಂಗ್ರೆಸ್​ನಿಂದ 17 ಶಾಸಕರು ಬಿಜೆಪಿಗೆ ಬಂದಿದ್ದಾರೆ, ಮುಂದೆ ಇನ್ನಷ್ಟು ಹಿಂದುಳಿದ ಕಾಂಗ್ರೆಸ್​ ನಾಯಕರು ಬಿಜೆಪಿಗೆ ಬರುತ್ತಾರೆ ಎಂದು ಹೇಳಿದ್ದಾರೆ.

error: Content is protected !!