ಅನಂತನಲ್ಲಿ ಲೀನವಾದ ಅನಂತಕುಮಾರ ಸ್ವಾಮೀಜಿ

Team Newsnap
1 Min Read

ಮಂಡ್ಯ
ಶಿಕ್ಷಣ, ಆಧ್ಯಾತ್ಮ ಕ್ಷೇತ್ರದಲ್ಲಿ ಅವಿಸ್ಮರಣೀಯ ಸೇವೆ ಮಾಡಿದ ಜನಾನುರಾಗಿ ಅನಂತಕುಮಾರ ಸ್ವಾಮೀಜಿ ಮಂಗಳವಾರ ಇಹಲೋಕ ತ್ಯಜಿಸಿದರು.ಕಳೆದ ಕೆಲವು ತಿಂಗಳಿನಿಂದ ಅನಾರೋಗ್ಯ ಕ್ಕೆ ತುತ್ತಾಗಿದ್ದ ಸ್ವಾಮೀಜಿ,(84) ಅಭಿನವ ಭಾರತಿ ಶಿಕ್ಷಣ ಕಟ್ಟಿ ಮಂಡ್ಯದ ಬಹುತೇಕ ಬಡ ಮಕ್ಕಳಿಗೆ ಶಿಕ್ಷಣದಾತರಾಗಿದ್ದರು.
1969ರಲ್ಲಿ ಕಾಶಿಯಿಂದ ಮಂಡ್ಯಕ್ಕೆ ಪಾದಾರ್ಪಣೆ ಮಾಡಿದ ದಾದಾ ಎಂದೇ ಜನರಿಗೆ ಅಚ್ಚುಮೆಚ್ಚಾದ ಅನಂತಕುಮಾರನು ಪುಟ್ಟ ಗುಡಿಸಲೊಂದರಲ್ಲಿ ಅಭಿನವಭಾರತಿ ವಿದ್ಯಾಕೇಂದ್ರವನ್ನು ತೆರೆಯುವ ಮೂಲಕ ಮಂಡ್ಯ ದಲ್ಲಿ ಒಂದು ಶಿಕ್ಷಣಕಲ್ಪವೃಕ್ಷವಾಗಿ ಸಸಿ ನೆಟ್ಟಿದ್ದು ಇಂದು ಹೆಮ್ಮರವಾಗಿ ಬೆಳೆದಿದೆ.

ಶ್ರೀ ವೆಂಕಟೇಶ್ವರ ಧ್ಯಾನಕೇಂದ್ರವನ್ನು ಆರಂಭಿಸಿ ಮಂಡ್ಯದಲ್ಲಿ ವೆಂಕಟೇಶ್ವರನ ಆವಾಸಭೂಮಿಯನ್ನಾಗಿ ಬೆಳೆಸಿದರು.ಆಧ್ಯಾತ್ಮಿಕ ಸಾಧಕರನ್ನು ಹುಟ್ಟುಹಾಕಿದರು.ಧ್ಯಾನ ಪ್ರಾಣಾಯಾಮ,ಭಜನೆ ಪ್ರವಚನಗಳಿಂದ ಮಂಡ್ಯದ ಜನತೆಯಲ್ಕಿ ಆಧ್ಯಾತ್ಮಿಕ ಪರಿಸರದ ಸುಗಂಧವನ್ನು ಪಸರಿಸುವ ಕೈಂಕರ್ಯಕ್ಕೆ ತಮ್ಮನ್ನು ತೊಡಗಿಸಿಕೊಂಡರು.

ದಿ. ಎಸ್ ಡಿ ಜಯರಾಂ ಅವರ ಅಚ್ಚುಮೆಚ್ಚಿನ ದಾದ ಎಂದೇ ಸಂಭೋದನೆ .ಮಾಡಿಸಿಕೊಂಡು ಬಂದ ಸ್ವಾಮೀಜಿ ಅತ್ಯಂತ ಮಾತೃ ಹೃದಯಿಯಾಗಿದ್ದರು.
ಕೀಲಾರ ಶಿವಮೂರ್ತಿ, ಐ ನಾ ರಾವ್
ಕೊಕ್ಕಡ ವೆಂಕಟರಮಣ ಭಟ್, ಡಾ. ಪ್ರದೀಪ್ ಕುಮಾರ್ ಹೆಬ್ರಿ, ಎಂ ಎಸ್ ಅತ್ಮಾನಂದ , ಸಿ ಎಸ್ ಪುಟ್ಟರಾಜು
ಎನ್ .ಚಲುವರಾಯ ಸ್ವಾಮಿ, ರವೀಂದ್ರ ಶ್ರೀ ಕಂಠಯ್ಯ , ಸಂಸದೆ ಸುಮಾಲತಾ
ಡಿ ಸಿ ತಮ್ಮಣ್ಣ ಅನೇಕ ಗಣ್ಯ ರು
ದಾದಾ ನಿಧನಕ್ಕೆ ಕಂಬನಿ ಮಿಡಿದ್ದಾರೆ.

TAGGED:
Share This Article
Leave a comment