ಬಿಜೆಪಿ ನಾಯಕರು ಡ್ರಗ್ಸ್ ಸುಳಿಗೆ ಸಿಲುಕಿದ್ದರೆ ಕ್ರಮ ಅನಿವಾರ್ಯ- ವಿಜಯೇಂದ್ರ

Team Newsnap
1 Min Read

ಮಂಡ್ಯ
ಬಿಜೆಪಿ ಪಕ್ಷದ ಯಾವುದೇ ಮುಖಂಡ ಡ್ರಗ್ ಮಾಫಿಯಾದಲ್ಲಿದ್ದರೆ, ಅಂತಹವರಿಗೆ ನಮ್ಮ ಸಹಕಾರ ಇರುವುಧಿಲ್ಲ .
ಡ್ರಗ್ ದಂಗೆಯನ್ನು ಬುಡಸಮೇತವಾಗಿ ಕೀಳುವವರೆಗೆ ನಮ್ಮ ಹೋರಾಟ ಇರುತ್ತದೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ ಡ್ರಗ್ಸ್‌ನಿಂದ ಯುವಪೀಳಿಗೆ ಅಡ್ಡದಾರಿ ಹಿಡಿಯುತ್ತಿದೆ.
ಡ್ರಗ್ ದಂಧೆ ಮಟ್ಟಹಾಕಲು ಬಿಜೆಪಿ ಸರ್ಕಾರ ಕಟಿ ಬದ್ಧವಾಗಿದೆ ಎಂದರು.

ಕಳೆದ ಉಪಚುನಾವಣೆಯಲ್ಲಿ ರಾಗಿಣಿ ಬಿಜೆಪಿ ಪರ ಕ್ಯಾಂಪೇನ್ ಮಾಡಿದ್ದಾರೆ. ಆದ್ರೆ ಚಿತ್ರನಟ-ನಟಿಯರು ಒಂದೇ ಪಕ್ಷದ ಪರ ಪ್ರಚಾರ ಮಾಡಿದ ಉದಾಹರಣೆ ಇಲ್ಲ. ಒಂದೇ ಚುನಾವಣೆಯಲ್ಲಿ ಬೇರೆ ಬೇರೆ ಪಕ್ಷದ ಪರ ಪ್ರಚಾರ ಮಾಡಿದ್ದಾರೆ ಎಂದರು.

ರಾಗಿಣಿ ಬಿಜೆಪಿ ಸೇರಿಲ್ಲ, ಬಿಜೆಪಿ ಪರ ಪ್ರಚಾರ ಮಾಡಿದ್ದಾರೆ ಅಷ್ಟೇ ಡ್ರಗ್ ದಂಧೆ ನಿನ್ನೆಮೊನ್ನೆಯದ್ದಲ್ಲ, ಬಿಜೆಪಿ ಸರ್ಕಾರದಿಂದ ದಂಧೆ ತಡೆಯಲು ದಿಟ್ಟ ಕ್ರಮ ಗೊಳ್ಳುತ್ತದೆ. ಡ್ರಗ್ ಮಾಫಿಯಾ ಸಣ್ಣ ವಿಚಾರ ಅಲ್ಲ.
ನೆರೆ ರಾಷ್ಟ್ರಗಳಲ್ಲಿ ಬೆಳೆದು ದೇಶ ನಾನಾ ಭಾಗಗಳಿಗೆ ಸಪ್ಲೆ ಮಾಡುವ ಮೂಲಕ ಯವಶಕ್ತಿ ಕುಂದಿಸುವ ಕೆಲಸ ಮಾಡಲಾಗ್ತಿದೆ. ಡ್ರಗ್ ಮುಕ್ತ ಕರ್ನಾಟಕ ನಿರ್ಮಾಣದ ಸವಾಲನ್ನು ಬಿಜೆಪಿ ಸ್ವೀಕರಿಸಿದೆ.
ಈ ಕೆಲಸಕ್ಕೆ ಸಾರ್ವಜನಿಕರ ಸಹಕಾರವು ಅತ್ಯಗತ್ಯ ಎಂದರು. ರಾಗಿಣಿಗೆ ರಾಜಕೀಯ ಬೆಂಬಲ ಇದ್ದಿದ್ದರೆ ಅವರು ಅರೆಸ್ಟ್ ಆಗ್ತಿರಲಿಲ್ಲ ನಮ್ಮ ಯಾವುದೇ ಒಬ್ಬ ಮುಖಂಡ ಡ್ರಗ್ ಮಾಫಿಯಾದಲ್ಲಿದ್ದರೆ ಅವರಿಗೆ ನಮ್ಮ ಸಹಕಾರ ಇಲ್ಲ. *ಈ ವಿಚಾರದಲ್ಲಿ ಸರ್ಕಾರ ಹಿಟ್ ರನ್ ಮಾಡಲ್ಲ ಎಂದು ಸ್ಪಷ್ಟವಾಗಿ ಹೇಳಿದರು

Share This Article
Leave a comment