ಅಜಯ್ ನಾಗಭೂಷಣ್ ಈಗ ಕನ್ನಡ- ಸಂಸ್ಕೃತಿ ಇಲಾಖೆ ಕಾರ್ಯದರ್ಶಿ

Team Newsnap
1 Min Read

ಬೆಂಗಳೂರು :ರಾಜ್ಯ ಸರ್ಕಾರ ನಾಲ್ವರು ಹಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.

ನಗರಾಭಿವೃದ್ದಿ ಹಾಗೂ ಪೌರಾಡಳಿತ ಇಲಾಖೆಯ ಕಾರ್ಯದರ್ಶಿಯಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಡಾ ಅಜಯ್ ನಾಗಭೂಷಣ್ ಅವರನ್ನು ಈಗ ಕನ್ನಡ- ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ನೇಮಕ ಮಾಡಿದೆ.

ಡಾ ಅಜಯ್ ಸ್ಥಾನಕ್ಕೆ ಶ್ರೀಮತಿ ಎಂ ದೀಪಾ ಅವರನ್ನು ನೇಮಕ ಮಾಡಲಾಗಿದೆ.

ಕನ್ನಡ ಮತ್ತು ಇಲಾಖೆ ಕಾರ್ಯದರ್ಶಿ ಡಾ ಎನ್ ಮಂಜುಳಾ ಅವರನ್ನು ಮೂಲಭೂತ ಸೌಕರ್ಯಗಳ ಇಲಾಖೆಗೆ ವರ್ಗಾಯಿಸಲಾಗಿದೆ.ರಾಜ್ಯ ಸಭಾ ಚುನಾವಣೆ :ಕೈ ಮೇಲುಗೈ – ಮೈತ್ರಿಗೆ ಮುಖಭಂಗ

ಆರೋಗ್ಯ ಇಲಾಖೆ ಕಾರ್ಯದರ್ಶಿ ಡಾ ರಣದೀಪ್ ಅವರನ್ನು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

Share This Article
Leave a comment