ರಾಜ್ಯ ಸಭಾ ಚುನಾವಣೆ :ಕೈ ಮೇಲುಗೈ – ಮೈತ್ರಿಗೆ ಮುಖಭಂಗ

Team Newsnap
1 Min Read
  • ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ‘ತ್ರಿಬಲ್’ ಗೆಲುವು
  • ಮೂವರು ಕಾಂಗ್ರೆಸ್​​​ನ​​ ಅಭ್ಯರ್ಥಿಗಳು ರಾಜ್ಯಸಭೆಗೆ ಆಯ್ಕೆ
  • 223 ಶಾಸಕರ ಪೈಕಿ 222 ಶಾಸಕರಿಂದ ನಡೆದ ಮತದಾನ

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮೂವರು ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್​​ ಪಕ್ಷದಿಂದ ಸ್ಪರ್ಧಿಸಿದ್ದ ಅಜಯ್ ಮಾಕನ್​, ನಾಸೀರ್ ಹುಸೇನ್​, ಜಿ.ಸಿ ಚಂದ್ರಶೇಖರ್​​ ಅವರು ರಾಜ್ಯಸಭೆಗೆ ಆಯ್ಕೆ ಆಗಿದ್ದಾರೆ. ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಹೀನಾಯ ಸೋಲು ಅನುಭವಿಸಿದ್ದಾರೆ.

ಯಾರಿಗೆ ಎಷ್ಟು ಮತ?

  • ಕಾಂಗ್ರೆಸ್ – ಅಜಯ್ ಮಾಕನ್ – 47
  • ಕಾಂಗ್ರೆಸ್ – ನಾಸೀರ್ ಹುಸೇನ್ – 46
  • ಕಾಂಗ್ರೆಸ್ – ಜಿ.ಸಿ ಚಂದ್ರಶೇಖರ್ – 46
  • ಬಿಜೆಪಿ – ನಾರಾಯಣ ಸಾ ಭಾಂಡಗೆ – 47
  • ಜೆಡಿಎಸ್ – ಕುಪೇಂದ್ರ ರೆಡ್ಡಿ – 36

ರಾಜ್ಯಸಭಾ ಚುನಾವಣೆಯ ತಂತ್ರಗಾರಿಕೆ ರೂಪಿಸುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿದೆ. ಬಿಜೆಪಿ ಶಾಸಕ ಶಿವರಾಮ್‌ ಹೆಬ್ಬಾರ್ ಹೊರತುಪಡಿಸಿ ಎಲ್ಲಾ ಶಾಸಕರು ಇಂದು ಮತದಾನದಲ್ಲಿ ಭಾಗಿಯಾಗಿದ್ದರು.

ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಅಡ್ಡ ಮತದಾನ ಮಾಡಿದ್ದಾರೆ ಎನ್ನಲಾಗಿದ್ದು, ಕಾಂಗ್ರೆಸ್ ಪಕ್ಷದ ಮೂರು ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.ರಾಜ್ಯಸಭಾ ಚುನಾವಣೆ: ಬಿಜೆಪಿಗೆ ಬಿಗ್‌ ಶಾಕ್ – ಎಸ್​​ಟಿ ಎಸ್ ​ ಅಡ್ಡ ಮತದಾನ

ಬಿಜೆಪಿಯ ನಾರಾಯಣ ಸಾ ಬಾಂಡ ಅವರು 47 ಮತ ಪಡೆದು ರಾಜ್ಯಸಭೆಗೆ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಜೆಡಿಎಸ್​​ನ ಕುಪೇಂದ್ರ ರೆಡ್ಡಿ ಅವರು ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, 9 ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದಾರೆ.

Share This Article
Leave a comment