ರಾಜ್ಯಸಭಾ ಚುನಾವಣೆ: ಬಿಜೆಪಿಗೆ ಬಿಗ್‌ ಶಾಕ್ – ಎಸ್​​ಟಿ ಎಸ್ ​ ಅಡ್ಡ ಮತದಾನ

Team Newsnap
1 Min Read

ಬೆಂಗಳೂರು :ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ರಾಜ್ಯಸಭೆ ಚುನಾವಣೆಗೆ ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ, ಬಿಜೆಪಿ ಶಾಸಕ ಎಸ್‌ ಟಿ ಸೋಮಶೇಖರ್‌ ಕಾಂಗ್ರೆಸ್‌ ಅಡ್ಡ ಮತದಾನ ಮಾಡುವ ಮೂಲಕ ಬಿಜೆಪಿ ಹಾಗೂ ಜೆಡಿಎಸ್‌ ಬಿಗ್‌ ಶಾಕ್‌ ನೀಡಿದ್ದಾರೆ.

ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕ ಎಸ್‌ ಸಿ ಸೋಮಶೇಖರ್‌ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ್ದಾರೆ.

ಎಸ್‌ ಟಿ ಸೋಮಶೇಖರ್‌ ಅವರು ಕಾಂಗ್ರೆಸ್‌ ಗೆ ಅಡ್ಡ ಮತದಾನ ಮಾಡಿದ್ದಾರೆ ಎಂದು ಬಿಜೆಪಿ ಚುನಾವಣಾ ಏಜೆಂಟ್‌ರೊಬ್ಬರು ಖಚಿತಪಡಿಸಿದ್ದಾರೆ.

ಮತದಾನ ಬಳಿಕ ಮಾಧ್ಯಮಗಳ ಜೊತೆಗೆ ಎಸ್ ಟಿ ಸೋಮಶೇಖರ್ ಮಾತನಾಡಿ, ಅನುದಾನ ನೀಡುವಂತವರಿಗೆ ಆತ್ಮಸಾಕ್ಷಿ ಮತ ಹಾಕಿದ್ದೇನೆ. 11 ವರ್ಷದಿಂದ ಎಲ್ಲರಿಗೂ ಹಾಕಿದ್ದಿನಿ, ಒಂದು ರೂಪಾಯಿ ರಾಜ್ಯಸಭೆಗೆ ಆಯ್ಕೆ ಆದವರು ಅನುದಾನ ಕೊಟ್ಟಿಲ್ಲ. ನೇರ ನೇರ ಹೇಳ್ತಿನಿ ಆತ್ಮಸಾಕ್ಷಿ ಮತ ಹಾಕುತ್ತೇನೆ.

ಕಳೆದ ಸಾರಿ ನಿರ್ಮಲಾ ಸೀತಾರಾಮನ್ ಗೆ ಹಾಕಿದ್ದೆ, ಆಮೇಲೆ ನಿರ್ಮಲಾ ಸೀತಾರಾಮನ್ ನನಗೆ ಅಪಾಯಿಟ್ಮೆಂಟ್ ಕೊಡಲೇ ಇಲ್ಲ.ನನಗೆ ಯಾರು ಪ್ರಾಮಿಸ್ ಮಾಡ್ತಾರೆ ಅವರಿಗೆ ಮತಕೊಡುತ್ತೇನೆ ಎಂದು ಹೇಳಿದರು.ನೆಪ ಹೇಳ್ತಿಲ್ಲಾ, ಐದಾದು ಸರಿ ಓಟು ಹೇಳಿದಾಗೆ ಹಾಕಿದ್ದಿನಿ, ಓಟು ಹಾಕಿಸೋ ಮೊದಲು ಪ್ರಾಮಿಸ್ ಮಾಡ್ತಾರೆ. 5 ಕೋಟಿ ಅನುದಾನ ಬರುತ್ತೆ ನಮಗೆ ಕೊಡ್ತಾರಾ ಆತ್ಮಸಾಕ್ಷಿಯಾಗಿ ಅಲ್ಲಿ ಹೋದಂತ ಸಂದರ್ಭದಲ್ಲಿ ಹಾಕುತ್ತೇನೆ. ನನ್ನ ಕ್ಷೇತ್ರ ಅಭಿವೃದ್ಧಿ ಆಗಿಲ್ಲಾ ಅಂತಾ ಹೇಳಿಲ್ಲ. ಪಕ್ಷ ಏನ್ ಹೇಳುತ್ತೊ ಮಾಡಿದ್ದೆ.ಪ್ರದೀಪ್ ಈಶ್ವರ್ ವಿರುದ್ಧ ‘ ಮಾನನಷ್ಟ ಮೊಕದ್ದಮ್ಮೆ’ ದಾಖಲಿಸಿದ ಪ್ರತಾಪ್ ಸಿಂಹ

ಕುಮಾರಸ್ವಾಮಿ ಅವರು ಏನ್ ಸಾಚಾನಾ ಅವಕಾಶವಾದಿ ಅಲ್ವಾ? ಇವರನ್ನ ಮುಖ್ಯಮಂತ್ರಿ ಮಾಡಲಿಲ್ವಾ? ಸಿಎಂ ಆದ್ಮೇಲೆ ಒಂದು ಆದ್ಮೇಲೆ ಒಂದಾ..? ಎಂದು ಬಿಜೆಪಿ ಶಾಸಕ ಎಸ್‌ ಟಿ ಸೋಮಶೇಖರ್‌ ಪ್ರಶ್ನಿಸಿದ್ದಾರೆ.

Share This Article
Leave a comment