January 4, 2025

Newsnap Kannada

The World at your finger tips!

ಪ್ರಮೋದ್ ಸಾವಂತ್

ಗೋವಾ ಸಿಎಂ ಪ್ರಮೋದ್ ಸಾವಂತ್​​ ರನ್ನು ಭೇಟಿಯಾದ ಯಶ್ ದಂಪತಿ

Spread the love

ರಾಕಿಂಗ್ ಸ್ಟಾರ್ ಯಶ್ ಗೋವಾ ಸಿಎಂ ಪ್ರಮೋದ್ ಸಾವಂತ್ ಅವರನ್ನು ಪಣಜಿಯಲ್ಲಿ ಭೇಟಿ ಮಾಡಿದ್ದಾರೆ.

ಈ ಭೇಟಿಯ ಸಂದರ್ಭದಲ್ಲಿನ ಫೋಟೋಗಳನ್ನು ಸ್ವತಃ ಸಿಎಂ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕೆಜಿಎಫ್ ಸೂಪರ್ ಸ್ಟಾರ್ ಯಶ್​ ಹಾಗೂ ಅವರ ಪತ್ನಿ ರಾಧಿಕಾ ಮತ್ತು ತಂಡವನ್ನು ಪಣಜಿಯಲ್ಲಿ ಭೇಟಿದ್ದು ಸಂತಸ ತಂದಿದೆ ಎಂದು ಪ್ರಮೋದ್ ಸಾವಂತ್ ಟ್ವೀಟ್​ ಮಾಡಿದ್ದಾರೆ.

yash radhika 1

ಕೆಜಿಎಫ್​​ – 2 ಸಿನಿಮಾದ ಬಿಗ್​ ಸಕ್ಸಸ್​ ಖುಷಿಯಲ್ಲಿರುವ ಯಶ್​ ಅವರು ತಮ್ಮ ಕುಟುಂಬದೊಂದಿಗೆ ಗೋವಾದಲ್ಲೇ ಉಳಿದುಕೊಂಡಿದ್ದಾರೆ ಮಕ್ಕಳು ಹಾಗೂ ಪತ್ನಿಯೊಂದಿಗೆ ಪ್ರವಾಸ ಮಾಡುತ್ತಾ ಸಮಯ ಕಳೆಯುತ್ತಿದ್ದಾರೆ.

ಪ್ರವಾಸದ ಫೋಟೋಗಳನ್ನು ರಾಧಿಕಾ ಪಂಡಿತ್ ತಮ್ಮ ಇನ್​​ಸ್ಟಾದಲ್ಲಿ ಹಂಚಿಕೊಂಡಿದ್ದರು. ಈ ನಡುವೆ ಗೋವಾ ಸಿಎಂ ಅವರನ್ನು ಯಶ್ ಭೇಟಿ ಮಾಡಿರುವುದು ಅಭಿಮಾನಿಗಳಲ್ಲಿ ಕುತೂಹಲವನ್ನು ಮೂಡಿಸಿದೆ.

ಈ ವೇಳೆ ಕೆವಿಎನ್ ಪ್ರೊಡಕ್ಷನ್ ಸಂಸ್ಥೆಯ ಮಾಲೀಕ ವೆಂಕಟ್​ ಕೊಣಂಕಿ ಯಶ್​ ಜೊತೆ ಕಾಣಿಸಿಕೊಂಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!