May 29, 2022

Newsnap Kannada

The World at your finger tips!

capsicum ravi

ಮಂಡ್ಯ ಮೂಲದ ರವಿ ಮೈಸೂರಿನ ಮಾರುಕಟ್ಟೆಯಲ್ಲಿ ಭೀಕರ ಕೊಲೆ

Spread the love

ಎಪಿಎಂಸಿ ಏಜೆಂಟ್ ಆಗಿದ್ದ ಮಂಡ್ಯ ಮೂಲದ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಿರುವ ಘಟನೆ ಮೈಸೂರಿನ ಬಂಡೀಪಾಳ್ಯ ಎಪಿಎಂಸಿ ಬುಧವಾರ ಮಾರುಕಟ್ಟೆಯಲ್ಲಿ ನಡೆದಿದೆ.

ಹತ್ಯೆಗೊಳಗಾದವನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರದ ನಿವಾಸಿ ರವಿ ಅಲಿಯಾಸ್ ಕ್ಯಾಪ್ಸಿಕಂ ರವಿ ಎಂದು ಗುರುತಿಸಲಾಗಿದೆ. 

ಗೌತಮ್ ಎಂಬ ವ್ಯಕ್ತಿ ಸೇರಿದಂತೆ ನಾಲ್ವರ ತಂಡ ರವಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಎಪಿಎಂಸಿಯ ಮಳಿಗೆ ನಂ.7ರಲ್ಲಿ ವಹಿವಾಟು ನಡೆಸುತ್ತಿದ್ದ ರವಿ ಹಾಗೂ ಆರೋಪಿ ಗೌತಮ್ ನಡುವೆ ಕಮಿಷನ್ ವಿಚಾರದಲ್ಲಿ ಗಲಾಟೆ ನಡೆದಿತ್ತು. ಇದಕ್ಕಾಗಿ ಕೃತ್ಯ ಎಸಗಲಾಗಿದೆ ಎಂದು ಶಂಕಿಸಲಾಗಿದೆ. 

ಮೈಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಆರೋಪಿಗಳು ನಾಪತ್ತೆಯಾಗಿದ್ದಾರೆ.

error: Content is protected !!