ಅಕ್ಷಯ ತೃತೀಯದಂದು ಭರ್ಜರಿ ಸೇಲ್ : ದೇಶದಲ್ಲಿ 15000 ಕೋಟಿ – ರಾಜ್ಯದಲ್ಲಿ 1680 ಕೋಟಿ ರು ವಹಿವಾಟು

Team Newsnap
1 Min Read

ಕೋವಿಡ್ ನಿಂದಾಗಿ ಕುಸಿದು ಹೋಗಿದ್ದ ಆಭರಣ ಮಾರುಕಟ್ಟೆ 2 ವರ್ಷಗಳ ಬಳಿಕ ಈ ಬಾರಿಯ ಅಕ್ಷಯ ತೃತೀಯದಂದು ಮತ್ತೆ ಚೇತರಿಸಿಕೊಂಡಿದೆ.

ದೇಶಾದ್ಯಂತ 2022ರ ಅಕ್ಷಯ ತೃತೀಯದಂದು 15,000 ಕೋಟಿ ರೂ. ಮೌಲ್ಯದ ಆಭರಣ ಮಾರಾಟವಾಗಿದೆ.

ಇದು ಕೋವಿಡ್‌ನಿಂದ ವಿಧಿಸಲಾದ ಲಾಕ್‌ಡೌನ್ ಬಳಿಕದ ಅತಿ ದೊಡ್ಡ ಆಭರಣ ವ್ಯವಹಾರವಾಗಿದೆ ಎಂದು ಅಖಿಲ ಭಾರತ ವ್ಯಾಪರಗಳ ಒಕ್ಕೂಟ(ಸಿಎಐಟಿ) ತಿಳಿಸಿದೆ. 

ಕೋವಿಡ್ ನಿಂದಾಗಿ ದೇಶಾದ್ಯಂತ ಚಿನ್ನದ ಮಾರಾಟದಲ್ಲಿ ಶೇ.80 ರಷ್ಟು ಭಾರೀ ಇಳಿಕೆ ಕಂಡು ಬಂದಿತ್ತು. ಈ ಬಾರಿ ಕೋವಿಡ್ ಹಾವಳಿ ಕಡಿಮೆಯಿರುವುದರಿಂದ ಹಾಗೂ ಹಬ್ಬದ ಪ್ರಯುಕ್ತ ರಜೆ ಇದ್ದಿದ್ದರಿಂದ ಚಿನ್ನ ಖರೀದಿಗೆ ಜನರು ಮುಗಿ ಬಿದ್ದಿದ್ದಾರೆ. ದೇಶಾದ್ಯಂತ ಒಂದೇ ದಿನ ಬರೋಬ್ಬರಿ 30 ಟನ್ ಚಿನ್ನ ಮಾರಾಟವಾಗಿದೆ.

2 ತಿಂಗಳ ಹಿಂದೆ ಚಿನ್ನದ ಬೆಲೆ 55,000 ದಿಂದ 58,000 ರೂ. ವರೆಗೂ ತಲುಪಿತ್ತು. ಇದೀಗ ಚಿನ್ನದ ಬೆಲೆ 50,000 ರೂ.ಗೆ ಇಳಿಕೆಯಾಗಿರುವುದರಿಂದ ಹಾಗೂ ಇದು ಮದುವೆ ಸಮಾರಂಭಗಳಂತಹ ಸಮಯವಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಚಿನ್ನಾಭರಣ ಮಾರಾಟವಾಗಿದೆ

ರಾಜ್ಯದಲ್ಲೂ ಭಾರೀ ಮಾರಾಟ:

ಕರ್ನಾಟಕದಲ್ಲೂ ಅಕ್ಷಯ ತೃತೀಯ ಅಂಗವಾಗಿ ಜನರು ಚಿನ್ನಾಭರಣ ಖರೀದಿಗೆ ಮುಗಿಬಿದ್ದಿದ್ದಾರೆ. ಮಂಗಳವಾರ ಒಂದೇ ದಿನ ಸುಮಾರು 1,680 ಕೋಟಿ ರೂ. ವ್ಯವಹಾರ ನಡೆದಿದೆ. ಬೆಂಗಳೂರಿನಲ್ಲಿ 650 ಕೋಟಿ ರೂ. ವ್ಯಾಪಾರ ನಡೆದಿದೆ.

Share This Article
Leave a comment