ಭಕ್ತನೊಬ್ಬ ಸಾಯಿಬಾಬಾ ಅವರ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಿರುವಾಗಲೇ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಧ್ಯಪ್ರದೇಶದ ಕಟ್ನಿಯಲ್ಲಿ ಜರುಗಿದೆ.
ಕಟ್ನಿಯ ದೇವಸ್ಥಾನದಲ್ಲಿ ಸಾಯಿ ಬಾಬಾರ ಮೂರ್ತಿ ಬಳಿ ಭಕ್ತರೊಬ್ಬರು ಹೋಗುತ್ತಾರೆ. ಬಳಿಕ ಸಾಯಿ ಬಾಬಾರ ಪಾದಕ್ಕೆ ಮುಟ್ಟಿ ನಮಸ್ಕರಿಸುತ್ತಾ ಕೆಳಗೆ ಬಾಗುತ್ತಾರೆ.
ಇದೇ ವೇಳೆ ನಮಸ್ಕರಿಸುತ್ತ ಕೆಳಗೆ ಬಾಗಿದವರು ಮೇಲೆ ಏಳುವುದೇ ಇಲ್ಲ. ದೇವಸ್ಥಾನದಲ್ಲಿದ್ದ ಸುತ್ತಲಿನ ಜನರು ನೋಡಿದಾಗ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವುದು ಕಂಡುಬಂದಿದೆ.
ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೃದಯಾಘಾತದಿಂದ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ದೃಶ್ಯವು ದೇವಸ್ಥಾನದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
More Stories
17 ಗಂಟೆಗಳ ಕಾಲ ಪುಟ್ಟ ಕಂದನನ್ನು ಕಾಪಾಡಿದ ಏಳು ವರ್ಷದ ಅಕ್ಕ !
ಬ್ರಾಹ್ಮಣರು ಈ ದೇಶಕ್ಕೆ ಸಂಸ್ಕಾರ ಕೊಟ್ಟಿದ್ದಾರೆ :ಡಿ ಸಿ ತಮ್ಮಣ್ಣ
‘ಅಂಬೇಡ್ಕರ್ ಅಭಿವೃದ್ಧಿ ನಿಗಮ’ದ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ