ಶ್ರೀರಂಗಪಟ್ಟಣದಲ್ಲಿ ಇಂದು ಸಂಕೀರ್ತನಾ ಯಾತ್ರೆ- ಆಂಜನೇಯ ದೇಗುಲ ಪುನರ್ ಸ್ಥಾಪನೆಗೆ ಒತ್ತಾಯ

Team Newsnap
1 Min Read
Sankirtana Yatra today in Srirangapatna - demand for restoration of Anjaneya Temple ಶ್ರೀರಂಗಪಟ್ಟಣದಲ್ಲಿ ಇಂದು ಸಂಕೀರ್ತನಾ ಯಾತ್ರೆ- ಆಂಜನೇಯ ದೇಗುಲ ಪುನರ್ ಸ್ಥಾಪನೆಗೆ ಒತ್ತಾಯ

ಶ್ರೀರಂಗಪಟ್ಟಣದಲ್ಲಿ ಪ್ರತಿ ವರ್ಷದ ರೀತಿ ಈ ಬಾರಿಯೂ ಸಹ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ ಪುನರ್ ಪ್ರತಿಷ್ಠಾಪನೆಗೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆಯಿಂದ ಭಾನುವಾರ ಬೃಹತ್ ಸಂಕೀರ್ತನಾ ಯಾತ್ರೆ ಜರುಗಲಿದೆ.

ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ ಸದ್ಯ ಹೈಕೋರ್ಟ್ ಅಂಗಳದಲ್ಲಿ ಇದೆ. ಆದರೂ ಸಹ ಪ್ರತಿ ವರ್ಷದ ರೀತಿ ಹಿಂದೂ ಜಾಗರಣ ವೇದಿಕೆ ಭಾನುವಾರ ಹನುಮ ಮಾಲಾಧಾರಿಗಳ ಬೃಹತ್ ಸಂಕೀರ್ತನಾ ಯಾತ್ರೆ ನಡೆಸಲು ಸಿದ್ಧತೆಯನ್ನು ಮಾಡಿಕೊಂಡಿದೆ.ಪದಬಂಧ ರಚನಾ ಪಯಣದಲ್ಲಿ ಮತ್ತೊಂದು ದಾಖಲೆ ಬರೆದ ಸಾಹಿತಿ ಅ. ನಾ. ಪ್ರಹ್ಲಾದ್ ರಾವ್

ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವನ್ನು ಕೆಡವಿ ಟಿಪ್ಪು ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾನೆ. ಮತ್ತೆ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ ಮರು ಪ್ರತಿಷ್ಠಪನೆಯಾಗಬೇಕೆಂದು ಹಲವು ವರ್ಷಗಳಿಂದ ಹಿಂದೂ ಜಾಗರಣ ವೇದಿಕೆ ಈ ಸಂಕೀರ್ತನಾ ಯಾತ್ರೆಯನ್ನೂ ಮಾಡಿಕೊಂಡು ಬಂದಿದೆ.

ಭಾನುವಾರ ಶ್ರೀರಂಗಪಟ್ಟಣದಲ್ಲಿ ಸಂಕೀರ್ತನಾ ಯಾತ್ರೆಯ ಸಿದ್ಧತೆಗಳು ಭರ್ಜರಿಯಾಗಿ ಜರುಗುತ್ತಿವೆ.ಶ್ರೀರಂಗಪಟ್ಟಣ ಈಗಕೇಸರಿ ಮಯದಿಂದ ಕಂಗೊಳಿಸುತ್ತಿದೆ.

ಮೆರವಣಿಗೆ ಎಲ್ಲಿಂದ ?

ಶ್ರೀರಂಗಪಟ್ಟಣದ ನಿಮಿಷಾಂಭ ದೇವಸ್ಥಾನದಿಂದ ರಂಗನಾಥಸ್ವಾಮಿ ದೇವಸ್ಥಾನದವರೆಗೆ ಈ ಸಂಕೀರ್ತನಾ ಯಾತ್ರೆಯ ಮೆರವಣಿಗೆ ಜರುಗಲಿದೆ.ದತ್ತ ಜಯಂತಿ ಪ್ರಯುಕ್ತ : ಡಿ.5 ರಿಂದ 9ರವರೆಗೆ ಪ್ರವಾಸಿಗರಿಗೆ ನಿಷೇಧ

ಪ್ರತಿ ವರ್ಷ ಈ ಯಾತ್ರೆಯಲ್ಲಿ ಮೂರರಿಂದ ಐದು ಸಾವಿರ ಮಂದಿ ಹನುಮ ಮಾಲಾಧಾರಿಗಳು ಭಾಗಿಯಾಗುತ್ತಿದ್ದರು. ಆದರೆ ಈ ಬಾರಿ ಒಂದು ಲಕ್ಷ ಮಂದಿ ಹನುಮ ಮಾಲಾಧಾರಿಗಳನ್ನು ಸೇರಿಸುವ ಗುರಿ ಇಟ್ಟುಕೊಳ್ಳಲಾಗಿದೆ.

ಈ ಸಂಕೀರ್ತನಾ ಯಾತ್ರೆಯನ್ನು ಹಿಂದೂ ಜಾಗರಣ ವೇದಿಕೆ ಮಾಡುತ್ತಿದ್ರು ಸಹ, ಹಿಂದೂ ಸಂಘಟನೆಗಳಿಗೆ ಬಲ ತುಂಬಲು ಬಿಜೆಪಿ ಮುಂದಾಗಿದೆ. ಹೀಗಾಗಿ ಮಂಡ್ಯದ ಪ್ರತಿ ಕ್ಷೇತ್ರದಿಂದ 8 ರಿಂದ 10 ಸಾವಿರ ಮಂದಿ ಹನುಮ ಮಾಲಾಧಾರಿಗಳನ್ನು ಕರೆತರಲು ನಿರ್ಧಾರ ಮಾಡಿದೆ.

ಮಂಡ್ಯ ಮಾತ್ರವಲ್ಲದೇ ಅಕ್ಕ-ಪಕ್ಕದ ಜಿಲ್ಲೆಗಳಿಂದಲೂ ಸಾವಿರಾರು ಮಂದಿ ಹನುಮ ಮಾಲಾಧಾರಿಗಳು ಭಾಗಿಯಾಗುವ ಸಾಧ್ಯತೆ ಇದೆ.

Share This Article
Leave a comment