ಪದಬಂಧ ರಚನಾ ಪಯಣದಲ್ಲಿ ಮತ್ತೊಂದು ದಾಖಲೆ ಬರೆದ ಸಾಹಿತಿ ಅ. ನಾ. ಪ್ರಹ್ಲಾದ್ ರಾವ್

Team Newsnap
1 Min Read

ಸಾಹಿತಿ ಅ. ನಾ. ಪ್ರಹ್ಲಾದ್ ರಾವ್ ಅವರು ಪದಬಂಧ ರಚನಾ ಪಯಣದಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ,ಇಂಡಿಯ ಬುಕ್ ಆಫ್ ರೆಕಾರ್ಡ್ಸ್ ತನ್ನ 2023ರ ದಾಖಲೆ ಪುಸ್ತಕದಲ್ಲಿ ಈ ದಾಖಲೆ ಪ್ರಕಟವಾಗಲಿದೆ.

ಇದುವರೆಗೂ ರಾಯರು ಪ್ರಕಟಿಸಿರುವ ಪದಬಂಧ ಪುಸ್ತಕಗಳು ಭಾರತದಲ್ಲಿ ಪ್ರಕಟಗೊಂಡಿರುವ ಅತಿ ಹೆಚ್ಚು ಪದಬಂಧ ಪುಸ್ತಕಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿ ದಾಖಲೆ ಸೇರಿಕೊಳ್ಳುತ್ತಿದೆ.

WhatsApp Image 2022 12 03 at 8.46.19 PM

ರಾಯರ 13 ಪದಬಂಧ ಪುಸ್ತಕಗಳು ಇದುವರೆವಿಗೂ ಪ್ರಕಟಗೊಂಡಿದ್ದು ಲಭ್ಯವಿದ್ದ 11 ಪುಸ್ತಕಗಳನ್ನು ಮಾತ್ರ ಇಂಡಿಯ ಬುಕ್ ಆಫ್ ರೆಕಾರ್ಡ್ಸ್ ಪರಿಗಣಿಸಿದೆ. ಎಲ್ಲಾ ಪದಬಂಧ ಪುಸ್ತಕಗಳನ್ನು ಪ್ರಕಟಿಸಿದ ಬೆಂಗಳೂರು ಜಯನಗರದ ‘ವಸಂತ ಪ್ರಕಾಶನ’ ಸಂಸ್ಥೆ ಹಾಗೂ ಎಲ್ಲ ಪದಬಂಧ ಪ್ರೇಮಿಗಳಿಗೆ ಅ ನಾ ಪ್ರಹ್ಲಾದ್ ರಾವ್ ಧನ್ಯವಾದಗಳನ್ನು ಹೇಳಿದ್ದಾರೆ.

Share This Article
Leave a comment