June 7, 2023

Newsnap Kannada

The World at your finger tips!

politics,karnataka,election

Mysore BJP leaders don't have Guts : CM Ibrahim ಮೈಸೂರು ಭಾಗದ ಬಿಜೆಪಿ ನಾಯಕರಿಗೆ ಗಂಡಸ್ತನವೇ ಇಲ್ಲ: ಸಿ.ಎಂ.ಇಬ್ರಾಹಿಂ

ಕುಮಾರಸ್ವಾಮಿ ಪ್ರಧಾನ ಮಂತ್ರಿಯಾದರೆ , ಜೆಡಿಎಸ್ ನಲ್ಲಿ ದಲಿತ, ಮುಸ್ಲಿಂಮರು CM ಗ್ಯಾರೆಂಟಿ – ಇಬ್ರಾಹಿಂ

Spread the love

ಕುಮಾರಸ್ವಾಮಿ ಪ್ರಧಾನ ಮಂತ್ರಿಯಾದ್ರೆ ಜೆಡಿಎಸ್‍ನಲ್ಲಿ ದಲಿತ, ಮುಸ್ಲಿಂ ಸಿಎಂ ಅವಕಾಶ ನೀಡುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಭವಿಷ್ಯ ನುಡಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಇಬ್ರಾಹಿಂ ಡಿಸೆಂಬರ್ 18ರ ನಂತರ ರಾಜ್ಯದಲ್ಲಿ ಬದಲಾವಣೆಯಾಗಲಿದೆ. ಜನತೆಗೆ ಬಿಗ್ ಸರ್‌ಪ್ರೈಸ್‌ ಸಿಗಲಿದೆ. ಹಾಲಿ ಶಾಸಕರು, ಮಾಜಿ ಶಾಸಕರು ಜೆಡಿಎಸ್‍ಗೆ ಬರಲಿದ್ದಾರೆ. ಕೆಲ ಜಿಲ್ಲೆಗಳು ಬಿಜೆಪಿ ಹಾಗೂ ಕಾಂಗ್ರೆಸ್ ಮುಕ್ತ ಜಿಲ್ಲೆಗಳಾಗಲಿವೆ ಎಂದರು.

ನಮ್ಮ ಪಕ್ಷಕ್ಕೆ ಟಿಕೆಟ್ ಆಕಾಂಕ್ಷಿಗಳು ಜಾಸ್ತಿಯಾಗಿದ್ದಾರೆ. ರಮೇಶ್ ಜಾರಕಿಹೊಳಿ ಜೊತೆ ಕುಮಾರಸ್ವಾಮಿ ಮಾತನಾಡಿದ್ದಾರೆ. ಜಾರಕಿಹೊಳಿ ಕುಟುಂಬದಲ್ಲಿ ಎಷ್ಟು ಜನ ಬರುತ್ತಾರೆ ಅನ್ನೋದು ಕುಮಾರಸ್ವಾಮಿ ಅವರಿಗೆ ಗೊತ್ತು. ನಾವು ಇದುವರೆಗೂ ಎಲ್ಲೂ ಕೂಡಾ ಅಧಿಕೃತವಾಗಿ ಅಭ್ಯರ್ಥಿ ಘೋಷಣೆ ಮಾಡಿಲ್ಲ ಎಂದಿದ್ದಾರೆ.

ಬೊಮ್ಮಾಯಿ ಸ್ವತಂತ್ರವಾಗಿ ಕೆಲಸ ಮಾಡ್ತಿಲ್ಲ. ಕೇಶವ ಕೃಪಾದಲ್ಲಿ ಏನ್ ಹೇಳ್ತಾರೆ ಅದನ್ನು ಮಾಡ್ತಾರೆ. ಬಿಜೆಪಿಗೆ 60 ರಿಂದ 65 ಸೀಟ್ ಬರಲ್ಲ. ನಾನು ಪಕ್ಷದ ಅಧ್ಯಕ್ಷನಾಗಿ ಹೇಳ್ತೀನಿ ನಮ್ಮ ಮುಖ್ಯಮಂತ್ರಿ ಕುಮಾರಸ್ವಾಮಿ. ಮುಸ್ಲಿಂ, ದಲಿತ ಸಿಎಂ ಮಾಡಬೇಕು ಅನ್ನುವ ಅಭಿಪ್ರಾಯ ,ಕುಮಾರಸ್ವಾಮಿ ಪ್ರಧಾನ ಮಂತ್ರಿಯಾದ್ರೆ ಜೆಡಿಎಸ್‍ನಲ್ಲಿ ದಲಿತ, ಮುಸ್ಲಿಂ ಸಿಎಂ ಅವಕಾಶ. ಕುಮಾರಸ್ವಾಮಿ ಗ್ರಹಬಲ ನೋಡಿದ್ರೆ, ಅವರು ಕೇಂದ್ರಕ್ಕೆ ಹೋಗ್ತಾರೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

error: Content is protected !!