December 30, 2024

Newsnap Kannada

The World at your finger tips!

WhatsApp Image 2023 04 25 at 11.01.51 AM

Adi Shankara Bhagavatpada who gave the light of knowledge to the world ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಆದಿ ಶಂಕರ ಭಗವತ್ಪಾದರು

ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಆದಿ ಶಂಕರ ಭಗವತ್ಪಾದರು

Spread the love

ಶಂಕರಂ ಶಂಕರಾಚಾರ್ಯo ಕೇಶವಂ
ಬಾದರಾಯಣಮ್
ಸೂತ್ರಭಾಷ್ಯಕೃತೌ ವಂದೇ
ಭಗವಂತೌ ಪುನಃ ಪುನಃ 🙏

ಆದಿ ಶಂಕರಾಚಾರ್ಯರು ಈ ಪುಣ್ಯ ಭೂಮಿಯಲ್ಲಿ ಅವತರಿಸಿದ ಐತಿಹಾಸಿಕ ಮಹಾಪುರಷರು ಎನ್ನುವುದರಲ್ಲಿ ಯಾರಿಗೂ ಸಂಶಯವಿಲ್ಲ.. ಶ್ರೀಗಳು ಸಾಕ್ಷಾತ್ ಪರಮೇಶ್ವರನ ಅವತಾರವೆಂದು ಪರಿಗಣಿಸಲ್ಪಟ್ಟಿರುವ ಮಹಾತ್ಮರು.ಅವರನ್ನು ಅದ್ವೈತ ಸಿಂಹ ಅಥವಾ ಅದ್ವೈತಕೇಸರಿ ಎಂದು ಕರೆದಿದ್ದಾರೆ.
ಶ್ರೀ ಶಂಕರರ ವ್ಯಕ್ತಿತ್ವವೇ ಒಂದು ಅನುಪಮವಾದುದು. ಶ್ರೀ ಶಂಕರರಿಗೆ ಶಂಕರರೇ ಸಾಟಿ ಎಂದರೆ ತಪ್ಪಾಗಲಾರದು. ಬಾಲ್ಯದಲ್ಲಿಯೇ ಅಗಾಧವಾದ ಗ್ರಹಿಕಾ ಶಕ್ತಿ ಜೊತೆಗೆ ಮಂತ್ರಸಿದ್ದಿ ಅಳವಡಿಸಿಕೊಂಡಿದ್ದರು. ತನ್ಮೂಲಕ ಚಿನ್ನದ ಮಳೆಯನ್ನೇ ಕರೆಸುವಂತಹ, ನದಿ ಹರಿಯುವ ದಿಕ್ಕನ್ನೇ ಬದಲಿಸುವ,ಪ್ರವಾಹವನ್ನು ನಿಯಂತ್ರಣ ಮಾಡುವ ಅನೇಕ ಲೋಕೋಪಕಾರಿ ದಿವ್ಯ ಲೀಲೆಗಳನ್ನು ತೋರಿದ ಅಪ್ರತಿಮ ವ್ಯಕ್ತಿತ್ವ ಹೊಂದಿದ್ದವರು.
ಮಾತೃ ದೇವೋ ಭವ 🙏ಎಂದು ತಾಯಿಯ ಸೇವೆಗೆ ಪ್ರಥಮ ಆದ್ಯತೆ ನೀಡಿದವರು ಮತ್ತು ಆ ಮೂಲಕ ಮಾತೃ ಸೇವಾ ದುರಂದರ ಎಂಬಂತೆ ನಡೆದು ಜಗತ್ತಿಗೆ ತಮ್ಮ ಆಚರಣೆಯನ್ನು ಸಂದೇಶವಾಗಿ ನೀಡಿದ ಮಹಾತ್ಮರು.ಉಪನಯನ ಸಂದರ್ಭದಲ್ಲಿ ಮಾಡುವ ಮಾತೃ ಪೂಜೆಯೇ ಇದಕ್ಕೆ ನಿದರ್ಶನ.

ಶ್ರೀ ಶಂಕರರ ವಿಚಾರಧಾರೆಗಳು ಇಂದಿನ ಕಾಲಕ್ಕೂ ಪ್ರಸ್ತುತವಾಗುವ ಹಾಗೆ ಇದ್ದು ಅವರ ದೂರ ದೃಷ್ಟಿಗೆ ಹಿಡಿದ ಕನ್ನಡಿ ಆಗಿವೆ. ಅವರ ಕೆಲವು ಮಹತ್ತರ ವಿಚಾರಧಾರೆಗಳತ್ತ ಒಂದು ನೋಟ ಹರಿಸೋಣ:

  • ಜ್ಞಾನವಂತರಾಗಿ. ಜ್ಞಾನವೂಂದೇ ಶ್ರೇಷ್ಠವೆಂಬ ಅದ್ವೈತ ತತ್ವ ಪ್ರತಿಪಾದಿಸಿದವರು.
  • ನಿಮ್ಮ ಕಾರ್ಯವನ್ನು ಕೇವಲ ಕಾರ್ಯ ಅಥವಾ ಕೆಲಸ ಎಂದು ಮಾಡದೆ ಸೇವಾ ಭಾವನೆಯಿಂದ ಮಾಡಿದಾಗ ಚಿತ್ತಶುದ್ಧಿ ಆಗುವುದು ಎಂಬ ಕರ್ಮ ಸಿದ್ಧಾಂತ ಎತ್ತಿ ಹಿಡಿದ ಜ್ಞಾನಿ.
  • ವೈಯುಕ್ತಿಕವಾಗಿ ಅಹಂಕಾರ, ಮತಭೇದ, ವಂಚನೆಗಳನ್ನು ಮಾಡುವುದರಿಂದ ದೂರವಿರುವುದೇ ದೈವೀಗುಣ ಎಂದು ಸಾರಿದವರು.
  • ಐಕ್ಯತೆಗೆ ಮತ್ತು ವಿಶ್ವ ಶಾಂತಿಗಾಗಿ ಶ್ರಮಿಸಿದ ಮಹಾತ್ಮ.
  • ಮೂಲತಃ ಎಲ್ಲರೂ ದೈವೀ ಸ್ವರೂಪರೆ. ಯಾರೂ ಅಶುದ್ಧರಲ್ಲ, ಪಾಪಿಗಳಲ್ಲ,ಅಜ್ಞಾನಿಗಳು ಅಲ್ಲ. ಮೂಲ ಸ್ವಭಾವದ ಮೇಲೆ ಪ್ರಭಾವ ಬೀರಿದಾಗ ಅದಕ್ಕೆ ತಕ್ಕಂತೆ ವರ್ತಿಸುವುದು ಮಾನವ ಸಹಜ. ಜೀವನವು ಒಂದು ವರ. ಅದನ್ನು ಸಾರ್ಥಕ ಮಾಡಿಕೊಳ್ಳಿ ಎಂದು ಜನರನ್ನು ಸನ್ಮಾರ್ಗದ ಕಡೆಗೆ ದಾರಿ ತೋರಿದ ಮಾನವತಾವಾದಿ.
  • ಪ್ರಾಣಿಬಲಿ, ನರಬಲಿ ಮುಂತಾದ ಸ್ವಾರ್ಥ ಚಿಂತನೆಗಳನ್ನು ತಡೆದು ಸಾತ್ವಿಕ ಆರಾಧನಾ
    ಪದ್ದತಿಯನ್ನು ಅನೇಕ ಕಡೆ ಜಾರಿಗೊಳಿಸಿದ ಸಮಾಜ ಸುಧಾರಕರು.

*ನಮ್ಮ ಸುತ್ತಾ ಇರುವ ನದಿಗಳು, ಮರ ಗಿಡ ಬಳ್ಳಿಗಳು ಗುಡ್ಡ ಇತ್ಯಾದಿಗಳು ಕೇವಲ ಜಡ ವಸ್ತುಗಳಲ್ಲ. ನಮಗೆ ಪ್ರಾಣ ಶಕ್ತಿಯನ್ನು ಕೊಡುವ ಪ್ರಕೃತಿ ಮಾತೆಯೆಂದು ಪೂಜಿಸಬೇಕು ಎಂಬ ಪೂಜ್ಯ ಭಾವನೆಯನ್ನು ಪ್ರತಿಪಾದಿಸಿದ ಮಹಾನ್ ಪ್ರಕೃತಿಯ ಆರಾಧಕರು.
ಕೇವಲ ತಮ್ಮ 32 ವರ್ಷಗಳ ಜೀವಿತ ಅವಧಿಯಲ್ಲಿ ಮಹಾ ಸಾಧನೆಯನ್ನು ಮಾಡಿ ಭಾರತದ ಸನಾತನ ಧರ್ಮಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಮಹಾತ್ಮರು.
ಪರಿಪೂರ್ಣ ಸಾರ್ಥಕ ಜೀವನ ಮಾಡಿದವರು. ಆರ್ಯ ಹಿಂದೂ ಸಂಸ್ಕೃತಿಯನ್ನು ಉದ್ದಾರ ಮಾಡಿದ , ಪ್ರಚಾರ ಮಾಡಿದ, ಜನಪ್ರಿಯ ಗೊಳಿಸಿದ ಶ್ರೇಷ್ಠ ಸನ್ಯಾಸಿ..
ಇವರ ಜಯಂತಿಯನ್ನು ವಿಜೃಂಭಣೆಯಿಂದ ಭಕ್ತಿ ಭಾವನೆಗಳಿಂದ ಆಚರಿಸೋಣ.

WhatsApp Image 2023 04 25 at 11.01.10 AM
ಮಂಜುನಾಥ್ ಎಸ್ ಕೆ.

ಭಾರತ ಸರ್ಕಾರ ಆ ದಿನವನ್ನು “ತತ್ವಜ್ಞಾನಿಗಳ ದಿನ ” ಎಂದು ಘೋಷಣೆ ಮಾಡುವ ಮೂಲಕ ಶ್ರೀ ಶಂಕರರಿಗೆ ನಮ್ಮದೇ ಆದ ವಿಶಿಷ್ಟ ಗೌರವ ಭಕ್ತಿ ಭಾವನೆಗಳ ಅರ್ಪಿಸೋಣ

ಪೂಜ್ಯಾಯ ಶಂಕರಾಚಾರ್ಯಗುರುವೇ
ಜ್ಞಾನಚಕ್ಷುಷೇ!
ಭಜತಾಂ ಜ್ಞಾನದಾತ್ರೇ ಚ ಸದಾನಂದಾಯ ತೇ ನಮಃ 🙏🙏

Copyright © All rights reserved Newsnap | Newsever by AF themes.
error: Content is protected !!