ಬೆಳಗಾವಿ ಕಾಂಗ್ರೆಸ್ ಹಿರಿಯ ‌ನಾಯಕ ಡಿ.ಬಿ.ಇನಾಮದಾರ್ ಇನ್ನಿಲ್ಲ

Team Newsnap
1 Min Read
Belagavi Congress senior leader DB Inamadar is no more ಬೆಳಗಾವಿ ಕಾಂಗ್ರೆಸ್ ಹಿರಿಯ ‌ನಾಯಕ ಡಿ.ಬಿ.ಇನಾಮದಾರ್ ಇನ್ನಿಲ್ಲ

ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಬೆಳಗಾವಿಯ ಹಿರಿಯ ಕಾಂಗ್ರೆಸ್ ಮುಖಂಡ ಡಿ.ಬಿ. ಇನಾಮದಾರ್ ಕಳೆದ ತಡರಾತ್ರಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಕಳೆದೊಂದು ತಿಂಗಳಿಂದ ಡಿ.ಬಿ. ಇನಾಮದಾರ್ ‌ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಡಿ.ಬಿ.ಇನಾಮದಾರ್ ಅವರು 1983ರಲ್ಲಿ ಜನತಾ ಪಕ್ಷದಿಂದ‌ ಕಿತ್ತೂರು ಕ್ಷೇತ್ರದಿಂದ ಸ್ಪರ್ಧಿಸಿ ‌ಮೊದಲ ಸಲ ಗೆಲುವು ಕಮಡಿದ್ದರು. 1994 ರಲ್ಲಿ ಕಾಂಗ್ರೆಸ್ ಸೇರ್ಪಡೆ ಆಗಿ ಇಂದಿನವರೆಗೂ ಇನಾಮದಾರ್ ಅವರು ಕಾಂಗ್ರೆಸ್‌ನಲ್ಲಿದ್ದರು. ಒಟ್ಟು 9 ಚುನಾವಣೆಗಳನ್ನು ಎದುರಿಸಿ ಐದು ಚುನಾವಣೆಗಳಲ್ಲಿ ಗೆಲುವು ದಾಖಲಿಸಿದ್ದರು.

ದೇವರಾಜ ಅರಸು, ಎಸ್.ಎಂ ಕೃಷ್ಣ, ಎಸ್. ಬಂಗಾರಪ್ಪ ಸರ್ಕಾರದಲ್ಲಿ ಸಚಿವರಾಗಿದ್ದರು. 1983, 1985 ರಲ್ಲಿ ಜನತಾ ಪಕ್ಷದಿಂದ, 1994, 1999, 2013ರ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದರು. 1989, 2004, 2008 ಹಾಗೂ 2018 ರಲ್ಲಿ ಸೋಲು ಕಂಡಿದ್ದರು.ಶ್ರೀ ರಾಮಾನುಜಾಚಾರ್ಯರು (Sri Ramanujacharya)

2023 ರ ಚುನಾವಣೆಯಲ್ಲಿ ‌ಕಿತ್ತೂರು ಕಾಂಗ್ರೆಸ್ ‌ಟಿಕೆಟ್ ಆಕಾಂಕ್ಷಿಯಾಗಿದ್ದ ಡಿ.ಬಿ ಇನಾಮದಾರ್ ಅವರಿಗೆ ಅನಾರೋಗ್ಯ ಕಾರಣಕ್ಕೆ ಇನಾಮದಾರ್ ಬದಲು ಬಾಬಾಸಾಹೇಬ್ ‌ಪಾಟೀಲಗೆ ಕಾಂಗ್ರೆಸ್ ಟಿಕೆಟ್‌ ನೀಡಿದೆ.

Share This Article
Leave a comment