ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿಯ ಆಪ್ತೆ ನಟಿ ರಮ್ಯಾಗೆ ಮುಜುಗರ ಆಗುವಂಥ ಪ್ರಸಂಗವೊಂದು ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ರಾಹುಲ್ ಗಾಂಧಿಯ ಕಾರ್ನರ್ ಮೀಟಿಂಗ್ ವೇಳೆ ರಮ್ಯಾಗೆ ವೇದಿಕೆಗೆ ಪ್ರವೇಶಿಸಲು ಅವಕಾಶ ನಿರಾಕರಿಸಲಾಯಿತು. ಇದರಿಂದ ತೀವ್ರ ಕೋಪ, ಬೇಸರಗೊಂಡ ರಮ್ಯಾ ವಾಪಸ್ ಹೋಗಿದ್ದಾರೆ.ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯ – ವಿರಾಟ್ ರೂಪ ಪ್ರದರ್ಶನ : ಭಾರತಕ್ಕೆ ರೋಚಕ 4 ವಿಕೆಟ್ ಗೆಲುವು
ರಾಯಚೂರಿನ ಬಸವೇಶ್ವರ ವೃತ್ತದ ಬಳಿಯ ಮೈದಾನದಲ್ಲಿ ಸಂಜೆಯ ಸುಮಾರಿಗೆ ನಡೆದಿದ್ದ ಕಾರ್ಯಕ್ರಮದಲ್ಲಿ ಈ ಪ್ರಕರಣ ನಡೆದಿದೆ. ಸಂಜೆ ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ಏಕಾಏಕಿ ಕಾಣಿಸಿಕೊಂಡಿದ್ದ ರಮ್ಯ, ಬಳಿಕ ರಾಹುಲ್ ಕಾರ್ನರ್ ಮೀಟಿಂಗ್ ಸ್ಥಳಕ್ಕೂ ಆಗಮಿಸಿದ್ದರು.
ಈ ವೇಳೆ ವೇದಿಕೆ ಏರಿ ಕೂರಲು ಅವರಿಗೆ ಅವಕಾಶ ನಿರಾಕರಿಸಲಾಯಿತು. ಅತಿಥಿಗಳ ಪಟ್ಟಿಯಲ್ಲಿ ರಮ್ಯ ಹೆಸರು ಇರದ ಕಾರಣ ಭದ್ರತಾ ಸಿಬ್ಬಂದಿ ಈ ಕ್ರಮಕೈಗೊಂಡಿದ್ದರು. ಇದರಿಂದ ಸಿಟ್ಟಾದ ರಮ್ಯ, ಎಂಟ್ರಿ ಕೊಡದ ಭದ್ರತಾ ಸಿಬ್ಬಂದಿ ಹಾಗೂ ರಾಯಚೂರಿನ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು. ಎಷ್ಟೇ ಮನವಿ ಮಾಡಿಕೊಂಡರೂ ಭದ್ರತಾ ಸಿಬ್ಬಂದಿ ಅವಕಾಶ ನೀಡದ್ದರಿಂದ ಆಕ್ರೋಶಗೊಂಡ ರಮ್ಯ, ಕೆಲಹೊತ್ತು ಅಲ್ಲೇ ವೇದಿಕೆ ಬಳಿ ವಾಗ್ವಾದ ನಡೆಸಿ ನಂತರ ಕೋಪಗೊಂಡು ಅಲ್ಲಿಂದ ವಾಪಸ್ ಹೋದರು.
- 4 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ – ಬಂಧನ
- ಸಮ್ಮೇಳನಾಧ್ಯಕ್ಷ ನಾಡೋಜ ಗೊ.ರು.ಚನ್ನಬಸಪ್ಪರವರಿಗೆ ಅದ್ಧೂರಿ ಸ್ವಾಗತ
- ವಕ್ಫ್ ಆಸ್ತಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ
- ರಾಜ್ಯಾದ್ಯಂತ ಡಿ. 31 ರಿಂದ ಸಾರಿಗೆ ನೌಕರರ ಮುಷ್ಕರ
- ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬೆಂ-ಮೈ ಎಕ್ಸ್ಪ್ರೆಸ್ವೇ ಸಂಚಾರ ಮಾರ್ಗದಲ್ಲಿ ಬದಲಾವಣೆ
- ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
More Stories
2025ರಿಂದ ಕ್ಯಾನ್ಸರ್ ಲಸಿಕೆ ಉಚಿತ ವಿತರಣೆ: ಮಹತ್ವದ ವೈದ್ಯಕೀಯ ಸಾಧನೆ
ವಿರೋಧ ಲೆಕ್ಕಿಸದ ಮೋದಿ ಸರ್ಕಾರ
ಒಂದು ದೇಶ, ಒಂದು ಚುನಾವಣೆ ಮಸೂದೆ ಲೋಕಸಭೆಯಲ್ಲಿ ಮಂಡನೆ