ರಾಹುಲ್ ಗಾಂಧಿ ಕಾರ್ನರ್ ಮೀಟಿಂಗ್, ರಮ್ಯಾಗೆನೇ ನೋ ಎಂಟ್ರಿ; ಸಿಡಿಮಿಡಿಗೊಂಡು ವಾಪಸ್​ ಹೋದ ನಟಿ

Team Newsnap
1 Min Read
Rahul Gandhi Corner Meeting, No entry to Ramya ರಾಹುಲ್ ಗಾಂಧಿ ಕಾರ್ನರ್ ಮೀಟಿಂಗ್, ರಮ್ಯಾಗೆನೇ ನೋ ಎಂಟ್ರಿ; ಸಿಡಿಮಿಡಿಗೊಂಡು ವಾಪಸ್​ ಹೋದ ನಟಿ

ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿಯ ಆಪ್ತೆ ನಟಿ ರಮ್ಯಾಗೆ ಮುಜುಗರ ಆಗುವಂಥ ಪ್ರಸಂಗವೊಂದು ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ರಾಹುಲ್ ಗಾಂಧಿಯ ಕಾರ್ನರ್ ಮೀಟಿಂಗ್ ವೇಳೆ ರಮ್ಯಾಗೆ ವೇದಿಕೆಗೆ ಪ್ರವೇಶಿಸಲು ಅವಕಾಶ ನಿರಾಕರಿಸಲಾಯಿತು. ಇದರಿಂದ ತೀವ್ರ ಕೋಪ, ಬೇಸರಗೊಂಡ ರಮ್ಯಾ ವಾಪಸ್ ಹೋಗಿದ್ದಾರೆ.ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯ – ವಿರಾಟ್ ರೂಪ ಪ್ರದರ್ಶನ : ಭಾರತಕ್ಕೆ ರೋಚಕ 4 ವಿಕೆಟ್ ಗೆಲುವು

ರಾಯಚೂರಿನ ಬಸವೇಶ್ವರ ವೃತ್ತದ ಬಳಿಯ ಮೈದಾನದಲ್ಲಿ ಸಂಜೆಯ ಸುಮಾರಿಗೆ ನಡೆದಿದ್ದ ಕಾರ್ಯಕ್ರಮದಲ್ಲಿ ಈ ಪ್ರಕರಣ ನಡೆದಿದೆ. ಸಂಜೆ ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ಏಕಾಏಕಿ ಕಾಣಿಸಿಕೊಂಡಿದ್ದ ರಮ್ಯ, ಬಳಿಕ ರಾಹುಲ್ ಕಾರ್ನರ್ ಮೀಟಿಂಗ್​ ಸ್ಥಳಕ್ಕೂ ಆಗಮಿಸಿದ್ದರು.

ಈ ವೇಳೆ ವೇದಿಕೆ ಏರಿ ಕೂರಲು ಅವರಿಗೆ ಅವಕಾಶ ನಿರಾಕರಿಸಲಾಯಿತು. ಅತಿಥಿಗಳ ಪಟ್ಟಿಯಲ್ಲಿ ರಮ್ಯ ಹೆಸರು ಇರದ ಕಾರಣ ಭದ್ರತಾ ಸಿಬ್ಬಂದಿ ಈ ಕ್ರಮಕೈಗೊಂಡಿದ್ದರು. ಇದರಿಂದ ಸಿಟ್ಟಾದ ರಮ್ಯ, ಎಂಟ್ರಿ ಕೊಡದ ಭದ್ರತಾ ಸಿಬ್ಬಂದಿ ಹಾಗೂ ರಾಯಚೂರಿನ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು. ಎಷ್ಟೇ ಮನವಿ ಮಾಡಿಕೊಂಡರೂ ಭದ್ರತಾ ಸಿಬ್ಬಂದಿ ಅವಕಾಶ ನೀಡದ್ದರಿಂದ ಆಕ್ರೋಶಗೊಂಡ ರಮ್ಯ, ಕೆಲಹೊತ್ತು ಅಲ್ಲೇ ವೇದಿಕೆ ಬಳಿ ವಾಗ್ವಾದ ನಡೆಸಿ ನಂತರ ಕೋಪಗೊಂಡು ಅಲ್ಲಿಂದ ವಾಪಸ್ ಹೋದರು.

Share This Article
Leave a comment