ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯ – ವಿರಾಟ್ ರೂಪ ಪ್ರದರ್ಶನ : ಭಾರತಕ್ಕೆ ರೋಚಕ 4 ವಿಕೆಟ್ ಗೆಲುವು

Team Newsnap
1 Min Read

ಭಾರತದ ಬೌಲರ್ ಗಳ ನಿರಂತರ ದಾಳಿಗೆ ತನ್ನ ಅಗ್ರ ಮತ್ತು ಮಧ್ಯಮ ಕ್ರಮಾಂಕದ ಪಾಕ್ ಬ್ಯಾಟ್ಸ್ ಮನ್ ಗಳು ಕುಸಿದ ನಂತರ ಪಾಕಿಸ್ತಾನವು 20 ಓವರ್ ಗಳಿಗೆ 160 ರನ್ ಗಳ ಗುರಿಯನ್ನು ಬೆನ್ನಟ್ಟಿದ ಭಾರತ 4 ವಿಕೆಟ್ ಗಳ ರೋಚಕ ಗೆಲುವು ಕಂಡಿತು.

ವಿರಾಟ್ ಕೊಹ್ಲಿ 53 ಬಾಲ್ ಗಳಿಗೆ ಅಜೇಯ 82 ರನ್ ಹಾರ್ದಿಕ್ ಪಾಂಡೆ 40 ರನ್ ಗಳ ನೆರವಿನಿಂದ ರೋಚಕವಾಗಿ ಪಾಕಿಸ್ತಾನವನ್ನು ಮಣಿಸಿತು.

ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‍ನಲ್ಲಿ ಭಾನುವಾರ ನಡೆದ ಟಿ20 ವಿಶ್ವಕಪ್ ಸೂಪರ್ 12 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟಾಸ್ ಗೆದ್ದ ಭಾರತ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಕೊಹ್ಲಿ, ಪಾಂಡೆ ಜೊತೆ ಆಟ ಹಾಗೂ ರವಿಚಂದ್ರನ್ ಅಶ್ವಿನ್ ಕೊನೆಯ ಹೊಡೆತ ಭಾರತ ಗೆಲುವಿಗೆ ಕಾರಣವಾಯಿತು.

ಪಾಕ್ ಮೊದಲ ಬ್ಯಾಟಿಂಗ್ :

ಹಾರ್ದಿಕ್ ಪಾಂಡ್ಯ ಕೇವಲ 2 ರನ್ ಗಳಿಸಿ ಔಟಾದ ಹೈದರ್ ಅಲಿ ಅವರ ವಿಕೆಟ್ ಪಡೆದರು. ಆಲ್ರೌಂಡರ್ ಶದಾಬ್ ಖಾನ್ ಮತ್ತು ಮುಹಮ್ಮದ್ ನವಾಜ್ ಅವರ ವಿಕೆಟ್ ಪಡೆದರು.

ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ರಿಷಭ್ ಪಂತ್ ಬದಲಿಗೆ ಯಜುವೇಂದ್ರ ಚಹಲ್ ಬದಲು ರವಿಚಂದ್ರನ್ ಅಶ್ವಿನ್ ಮತ್ತು ದಿನೇಶ್ ಕಾರ್ತಿಕ್ ಆದ್ಯತೆ ನೀಡಿದೆ. ಅದೇ ಸಮಯದಲ್ಲಿ, ಪಾಕಿಸ್ತಾನ ತಂಡದಲ್ಲಿ ಅನುಭವಿ ಫಖರ್ ಜಮಾನ್ ಬದಲಿಗೆ ಶಾನ್ ಮಸೂದ್ ಆಡಿ 159 ರನ್ ಗಳಿಸಿ ಭಾರತಕ್ಕೆ ಸವಾಲು ಒಡ್ಡಿದ್ದರು.

Share This Article
Leave a comment