ಶ್ರೀ ಶಂಕರಾಚಾರ್ಯರು ಕೇರಳದ ಪೂರ್ಣಾ ನದಿಯ ತೀರದಲ್ಲಿರುವ ಕಾಲಡಿ ಎಂಬ ಗ್ರಾಮದಲ್ಲಿ ಕ್ರಿ.ಶ. 788 ರಲ್ಲಿ ನಂಬೂದ್ರಿ ಬ್ರಾಹ್ಮಣನ ಕುಲದಲ್ಲಿ ಈ ಅಲೌಕಿಕ ಹಾಗೂ ಅಸಾಮಾನ್ಯ ಧರ್ಮಪ್ರವರ್ತಕನ ಜನನವಾಯಿತು. ಅವರ ತಂದೆ ಶಿವಗುರು ಹಾಗೂ ತಾಯಿ ಆರ್ಯಾಂಬಾ. ಚಿಕ್ಕಂದಿನಲ್ಲಿಯೇ ತಂದೆಯು ತೀರಿಕೊಂಡಿದ್ದರಿಂದ ಅವರ ತಾಯಿಯೇ ಅವರನ್ನು ಜೋಪಾನ ಮಾಡಿದರು.
ಸನ್ಯಾಸ ದೀಕ್ಷೆ
ಶ್ರೀ ಶಂಕರಾಚಾರ್ಯರು ತಮ್ಮ ಎಂಟನೇ ವಯಸ್ಸಿನಲ್ಲಿಯೇ ವೇದಗಳ ಅಧ್ಯಯನ ಪೂರ್ಣಗೊಳಿಸಿದರು, ತಾಯಿಯಿಂದ ಸನ್ಯಾಸವನ್ನು ಸ್ವೀಕರಿಸಲು ಅನುಮತಿ ಪಡೆದು ಮನೆಯಿಂದ ಹೊರಬಂದರು. ವಿಂಧ್ಯಾದ್ರಿಯ ಬಳಿ ಅವರು ಗೋವಿಂದ ಪೂಜ್ಯಪಾದಾಚಾರ್ಯರನ್ನು ಭೇಟಿಯಾದರು. ಅವರಿಂದ ಉಪದೇಶ ಪಡೆದು ಶಂಕರಾಚಾರ್ಯರು ಸನ್ಯಾಸದೀಕ್ಷೆ ಪಡೆದರು. ಅವರು ತಮ್ಮ ಹದಿನೆರಡನೆಯ ವಯಸ್ಸಿನಲ್ಲಿ ಎಲ್ಲ ಶಾಸ್ತ್ರಗಳಲ್ಲಿ ಪ್ರಾವಿಣ್ಯ ಪಡೆದರು.
ಅದ್ವೈತ ಸಿದ್ಧಾಂತ
ಶ್ರೀ ಶಂಕರಾಚಾರ್ಯರು ಉಪನಿಷತ್ತು, ಗೀತೆ ಹಾಗೂ ವೇದಾಂತಸೂತ್ರಗಳು ಇವುಗಳ ಮೇಲೆ ಭಾಷ್ಯ ಬರೆದರು ಮತ್ತು ತಮ್ಮ ಅದ್ವೈತ ವೇದಾಂತದ ಸಿದ್ಧಾಂತವನ್ನು ಪ್ರಸ್ಥಾಪಿಸಿದರು – ಅದೇ ಶಂಕರಭಾಷ್ಯ. ಅದ್ವೈತ ಅಂದರೆ ‘ಜೀವ ಮತ್ತು ಶಿವ (ಈಶ್ವರ) ಇವು ಭಿನ್ನವಲ್ಲ, ಒಂದೇ ಆಗಿವೆ. ಹಾಗೂ ಬ್ರಹ್ಮವು ಚರಾಚರ ಸೃಷ್ಟಿಯನ್ನು ವ್ಯಾಪಿಸಿದೆ.
ಶ್ರೀಕೃಷ್ಣನ ದರ್ಶನ ಭಾಗ್ಯ
ಶ್ರೀ ಶಂಕರಾಚಾರ್ಯರ ತಾಯಿಯು ಕಾಯಿಲೆ ಬಿದ್ದರು. ಅವರು ಆಚಾರ್ಯರ ದಾರಿ ಕಾಯುತ್ತಿದ್ದರು. ಶಂಕರಾಚಾರ್ಯರಿಗೆ ಈ ಸುದ್ದಿ ತಿಳಿಯುತ್ತಲೇ ಅವರು ಕಾಲಡಿಯತ್ತ ಪಯಣಿಸಿ ತಾಯಿಯನ್ನು ಭೇಟಿಯಾದರು. ತಾಯಿಗೆ ಬಹಳ ಆನಂದವಾಯಿತು. ತಾಯಿಯು ‘ಶಂಕರಾ, ನನಗೆ ಶ್ರೀಕೃಷ್ಣನ ಪ್ರತ್ಯಕ್ಷ ದರ್ಶನ ಮಾಡಿಸು’ ಎಂಬ ಇಚ್ಛೆ ವ್ಯಕ್ತಪಡಿಸುತ್ತಲೇ ಶ್ರೀಶಂಕರಾಚಾರ್ಯರು ಶ್ರೀಕೃಷ್ಣನ ಸ್ತುತಿ ಮಾಡಿದರು. ಶಂಖ, ಚಕ್ರ, ಗದಾ, ಪದ್ಮಗಳನ್ನು ಧರಿಸಿದ ಶ್ರೀಕೃಷ್ಣನು ಪ್ರಕಟನಾದನು. ಶ್ರೀಕೃಷ್ಣನ ದರ್ಶನದಿಂದ ಅವರ ತಾಯಿಯು ಕೃತಾರ್ಥಳಾದಳು.
ಅದ್ವೈತ ತತ್ತ್ವಜ್ಞಾನ
‘ಅದ್ವೈತವೇ ಸತ್ಯ’ ಎಂಬುದನ್ನು ಶ್ರೀಶಂಕರಾಚಾರ್ಯರು ಸಿದ್ಧ ಮಾಡಿದರು; ಅಂದರೆ ‘ಸರ್ವವ್ಯಾಪಿ, ನಿರ್ಗುಣ, ನಿರಾಕಾರ ಬ್ರಹ್ಮ ಎಲ್ಲೆಡೆಯೂ ತುಂಬಿಕೊಂಡಿದ್ದು, ಆ ಶಕ್ತಿಯಿಂದ ಮಾಯೆಯನ್ನೊಳಗೊಂಡ ಸೃಷ್ಟಿ ಉತ್ಪನ್ನವಾಗಿದೆ. ಜೀವಾತ್ಮನು ಆ ಬ್ರಹ್ಮನ ಅಂಶವಾಗಿದ್ದಾನೆ ಹಾಗೂ ನಿಜ ಜ್ಞಾನವಾದ ನಂತರ ಜೀವಾತ್ಮನು ಆ ಪರಮಾತ್ಮನಲ್ಲಿ ಏಕರೂಪವಾಗಿ ಹೋಗುತ್ತಾನೆ.
ಅಹಂ ಬ್ರಹ್ಮಾಸ್ಮಿ
ನಾನು ಬ್ರಹ್ಮ ,ನೀನೂ ಬ್ರಹ್ಮ ಈ ಜಗತ್ತಿನ ಸರ್ವಸೃಷ್ಟಿಯೂ ಬ್ರಹ್ಮನದೇ , ನಾನು ಬೇರೆಯಲ್ಲ ನೀನು ಬೇರೆಯಲ್ಲಾ… ಈ ವಿಶ್ವಸೃಷ್ಟಿ ಬೇರೆಯಲ್ಲ .. ಇಲ್ಲಿ ಬಣ್ಣ, ಜಾತಿ ,ಮತ ,ಪಂಥಗಳು, ಇವೆಲ್ಲ ನಮ್ಮ ಭ್ರಮೆಯೇ ಒರೆತು ಇವ್ಯಾವೂ ನಿಜವಲ್ಲ.. ಜಗತ್ತಿನ ಪ್ರತಿಸೃಷ್ಟಿಯನ್ನು ಬ್ರಹ್ಮಚೈತನ್ಯವೇ ತುಂಬಿರುವಾಗ ಅವನು ಬೇರೆ ನಾನು ಬೇರೆ ಹೇಗಾಗುವುದಕ್ಕೆ ಸಾಧ್ಯ… ಇಂಥದ್ದೊಂದು ಪ್ರಶ್ನೆಯ ಮೂಲಕ ಜಗತ್ತಿಗೆ ಅತ್ಯದ್ಭುತವಾದ ಏಕತ್ವವನ್ನು ಜಾತಿ ಪಂಥಗಳನ್ನು ಮೀರಿದ ಸಮಾನತೆಯ ತತ್ತ್ವವನ್ನು ಬೋಧಿಸಿದರು ಆದಿಶಂಕರಾಚಾರ್ಯರು…
ಆಚಾರ್ಯ ಶಂಕರರು
ಶ್ರೀ ಶಂಕರಾಚಾರ್ಯರು. ತಾವು ಬದುಕಿದ್ದು ಕೇವಲ 32 ವರ್ಷಗಳಷ್ಟೇ ಆದರೂ ಆದಿ ಶಂಕರರು ತಾವು ಮಾಡಿದ ಕಾರ್ಯ, ಗಳಿಸಿದ ಕೀರ್ತಿ , ಅಪಾರವಾದುದು. ಶ್ರೀಮದ್ಭಗವದ್ಗೀತೆ, ಉಪನಿಷತ್ತುಗಳು, ಬ್ರಹ್ಮಸೂತ್ರಗಳಿಗೆ ಭಾಷ್ಪಗಳನ್ನು ಬರೆದ ಮೊದಲಿಗರು ಶ್ರೀ ಶಂಕರಾಚಾರ್ಯರು. ಶಂಕರಾಚಾರ್ಯರು ಭಾರತೀಯ ವೈಚಾರಿಕ ರಂಗದಲ್ಲಿ ಕ್ರಾಂತಿಯನ್ನೇ ಮಾಡಿದ್ದವರು. ಇವರು ಯಾವೊಂದು ಹೊಸತಾದ ಮತ, ಪಂಥಗಳನ್ನು ಸ್ಥಾಪಿಸಿಲ್ಲವಾದರೂ ಹಿಂದೂ ಧರ್ಮದಲ್ಲಿನ ವೇದಸಂಪ್ರದಾಯವನ್ನೇ ಎತ್ತಿಹಿಡಿದರು. ವೇದಗಳಲ್ಲಿನ ಸತ್ವವನ್ನೂ, ಸಾರವನ್ನು ತಮ್ಮದೇ ಆದ ನೆಲೆಯಲ್ಲಿ ನಿಷ್ಕರ್ಷಿಸುವ ಮೂಲಕ ಜಗತ್ತಿಗೆ ಪ್ರಕಾಶಪಡಿಸಿದವರು ಆಚಾರ್ಯ ಶಂಕರರು.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
- ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ
- ಕಾಪರ್ ಏಜ್ ಇನ್ಸ್ಟಿಟ್ಯೂಟ್ ಮಾಲೀಕ ಶರತ್ ಆತ್ಮಹತ್ಯೆ: ಕಾರಣ ನಿಗೂಢ
- 104ರನ್ಗೆ ಆಸ್ಟ್ರೇಲಿಯಾ ಆಲೌಟ್ ,ಬುಮ್ರಾಗೆ 5 ವಿಕೆಟ್
- ಚನ್ನಪಟ್ಟಣ: 4 ನೇ ಸುತ್ತಿನಲ್ಲಿ ನಿಖಿಲ್ ಕುಮಾರಸ್ವಾಮಿ ಮುನ್ನಡೆ
More Stories
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!