ಮಂಡ್ಯದಲ್ಲಿ ವಿಧಾನ ಪರಿಷತ್ ಚುನವಣೆಯಲ್ಲಿ ಬಿಜೆಪಿ ಮಣಿಸಲು ತಂತ್ರಗಾರಿಕೆ ಮಾಡಿರುವ ಜೆಡಿಎಸ್, ಬಿಜೆಪಿ ಅಭ್ಯಥಿ೯ ಬೂಕಳ್ಳಿ ಮಂಜುನಾಥ್ ಎದುರು ಪಕ್ಷೇತರ ಅಭ್ಯಥಿ೯ಯಾಗಿ ಬಿ. ಪಿ ಮಂಜುನಾಥ್ ಎಂಬುವವರನ್ನು ಕಣಕ್ಕೆ ಇಳಿಸಿದ್ದಾರೆ
ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ವಿರುದ್ಧ ಸುಮಲತಾ ಹೆಸರಿನಲ್ಲಿ ಮೂವರನ್ನು ಪಕ್ಷೇತರ ಅಭ್ಯಥಿ೯ಯಾಗಿ ಕಣಕ್ಕೆ ಇಳಿಸಿದ್ದರು ತಂತ್ರಗಾರಿಕೆಯನ್ನ ಹೆಣೆದಿರೋದು ತಿಳಿದುಬಂದಿತ್ತು. ಸುಮಲತಾ ಹೆಸರಿನ ಮೂವರು ಮಹಿಳೆಯರನ್ನು ಕರೆತಂದು ಪಕ್ಷೇತರ ಅಭ್ಯರ್ಥಿಗಳಾಗಿ ಚುನಾವಣೆಗೆ ನಿಲ್ಲಿಸಲಾಗಿತ್ತು.
ಅದೇ ತಂತ್ರಗಾರಿಕೆಯನ್ನು ಮಾಡಿದವರು ದಳಪತಿಗಳು ಎಂಬ ಅಂಶ ಬಯಲಾಗಿದೆ. ಈ ರೋಚಕ ಕುತಂತ್ರವನ್ನು ಸಚಿವ ನಾರಾಯಣಗೌಡ ಇದೀಗ ಬಹಿರಂಗಪಡಿಸಿದ್ದಾರೆ.
ಇದೀಗ ಬಿಜೆಪಿ ಅಭ್ಯರ್ಥಿ ಬೂಕಳ್ಳಿ ಮಂಜು ವಿರುದ್ಧವೂ ಜೆಡಿಎಸ್ ಇಂಥದ್ದೇ ತಂತ್ರಗಾರಿಕೆ ಹೆಣೆದಿದೆ ಎಂದು ನಾರಾಯಣ ಗೌಡ ಆರೋಪಿಸಿದ್ದಾರೆ.
ಬೂಕಳ್ಳಿ ಮಂಜು ವಿರುದ್ಧ ಮಂಜುನಾಥ್ ಜಿ.ಬಿ ಎಂಬುವವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಎಂಎಲ್‌ಸಿ ಚುನಾವಣೆಯಲ್ಲಿ ನಿಲ್ಲಿಸಿದ್ದಾರೆ ಎಂದು ಸಚಿವರು ಹೇಳಿದ್ದಾರೆ
ಬಿಜೆಪಿ ಅಭ್ಯರ್ಥಿ ಬೂಕಳ್ಳಿ ಮಂಜು ಕೂಡಾ ಕಿಡಿಕಾರಿ, ಇದು ಎದುರಾಳಿಗಳ ಕುತಂತ್ರ, ಕುತಂತ್ರಕ್ಕೆ ಬೆಲೆ ಸಿಗಲ್ಲ. ನಾನು ಮತದಾರರ ಮನೆಗಳಿಗೆ ನೇರ ಪರಿಚಯ ಇದ್ದೇನೆ. ಜೆಡಿಎಸ್‌ನವರ ಗಿಮಿಕ್ ನೋಡಿದ್ರೆ ಬಿಜೆಪಿ ಮೇಲಿನ ಅವರಿಗಿರುವ ಭಯ ಗೊತ್ತಾಗುತ್ತೆ ಅಂತಾ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಮಂಜುಗೆ ಬರಬೇಕಿದ್ದ ಮತಗಳನ್ನು ಹಾಗೂ ಪ್ರಾಶಸ್ತ್ಯ ಮತಗಳನ್ನು ಡಿವೈಡ್ ಮಾಡಲು, ಹೆಸರಿನ ಗೊಂದಲ ಮೂಡಿಸಲು ಈ ತಂತ್ರ ಮಾಡಲಾಗಿದೆ ಎಂಬುದು ಆರೋಪ.
ಈ ತಂತ್ರಕ್ಕೆ ಮತದಾರರು ಯಾವ ರೀತಿ ಮಣೆ ಹಾಕುತ್ತಾರೆಂಬ ಕುತೂಹಲ ಇದ್ದೇ ಇದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಸಪ್ತಪದಿ ತುಳಿದ ಮೂರೇ ದಿನದಲ್ಲಿ ಹೃದಯಾಘಾತದಿಂದ ನವವಿವಾಹಿತ ಅಕಾಲಿಕ ಸಾವು
ಏ.7 ಕ್ಕೆ ಮೇಲುಕೋಟೆ ವೈರಮುಡಿ ಉತ್ಸವ
ಮಂಡ್ಯದಲ್ಲಿ ಭೀಕರ ಅಪಘಾತ: ಸಾಫ್ಟ್ವೇರ್ ಇಂಜಿನಿಯರ್ ದಾರುಣ ಸಾವು