ಸೆಪ್ಟೆಂಬರ್ ತಿಂಗಳ 1 ನೇ ತಾರೀಖಿನಿಂದಲೇ ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಿವೆ.
14.2 ಕೆಜಿ ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು 25 ರೂಪಾಯಿ ಹೆಚ್ಚಿಸಲಾಗಿದೆ.
19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯೂ ಹೆಚ್ಚಾಗಿದೆ ಅದರ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 75 ರೂ ಹೆಚ್ಚಳ ಮಾಡಲಾಗಿದೆ.
ಎಲ್ ಪಿಜಿ ಸಿಲಿಂಡರ್ 25 ರು. ಹೆಚ್ಚಳದ ನಂತರ, 14.2 ಕೆಜಿ ಎಲ್ ಪಿ ಜಿ ಸಿಲಿಂಡರ್ ದೆಹಲಿಯಲ್ಲಿ ಈಗ 884.50 ರು ಗೆ ಮಾರಾಟವಾಗುತ್ತಿದೆ.
ಈ ಮೊದಲು ಇದು 859.50ರು ಆಗಿತ್ತು, ಈ ಹಿಂದೆ ಆಗಸ್ಟ್ 17 ರಂದು ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 25 ರೂ. ಮತ್ತು ಜುಲೈ 1 ರಂದು ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 25.50 ರೂ ಹೆಚ್ಛಳ ಮಾಡಲಾಗಿತ್ತು.
ಎಲ್ಪಿಜಿ ಸಿಲಿಂಡರ್ ಹೊರತಾಗಿ, ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೂಡ ರೂ .75 ರಷ್ಟು ದುಬಾರಿಯಾಗಿದೆ. ಆಗಸ್ಟ್ 17 ರಂದು ವಾಣಿಜ್ಯ ಸಿಲಿಂಡರ್ ಬೆಲೆಯನ್ನು 68 ರೂ. ಈಗ ದೆಹಲಿಯಲ್ಲಿ, 1618 ರೂ.ಗೆ ಬದಲಾಗಿ, 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ನಿಮಗೆ 1693 ರೂನಲ್ಲಿ ಸಿಗಲಿದೆ.
ಹೊಸ ದರಗಳು ಹೀಗಿವೆ :
- 14.2 ಕೆಜಿ ಎಲ್ಪಿಜಿ ಸಿಲಿಂಡರ್ ನೂತನ ಬೆಲೆ ಇಲ್ಲಿದೆ
- ನಗರಗಳ ಹಳೆಯ ದರ – ಹೊಸ ದರ
- ದೆಹಲಿ 859.50 – 884.50
- ಮುಂಬೈ 859.50- 884.50
- ಕೋಲ್ಕತಾ 886- 911
- ಚೆನ್ನೈ 875.50 – 900.50
- ಲಕ್ನೋ 897.5 – 922.50
- ಅಹಮದಾಬಾದ್ 866.50- 891.50 ರು
- ಭೋಪಾಲ್ 840.50- 890.50
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ