ಬೆಂಗಳೂರಿನಲ್ಲಿ ನಾಲ್ವರು ಕಂದಾಯ ಇಲಾಖೆ ಅಧಿಕಾರಿ ಅಮಾನತು

Team Newsnap
1 Min Read

ಮತದಾರರ ದತ್ತಾಂಶ ಕಳ್ಳತನ ಪ್ರಕರಣ ಸಂಬಂಧಿಸಿದಂತೆ ನಾಲ್ಕು ಕಂದಾಯ ಇಲಾಖೆ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತ್ತು ಮಾಡಿದೆ.

ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಸಂಬಂಧಿತ ಕರ್ತವ್ಯಗಳ ಉಸ್ತುವಾರಿ ವಹಿಸಿದ್ದ ನಾಲ್ವರು ಕಂದಾಯ ಅಧಿಕಾರಿಗಳು ಅಮಾನತುಗೊಂಡಿದ್ದಾರೆ.ಶಿರಾಡಿ ಘಾಟ್ ಗೆ 23 ಕಿ.ಮೀ ಸುರಂಗ : ಕೇಂದ್ರ ಸರ್ಕಾರ ಒಪ್ಪಿಗೆ

ಬಿಬಿಎಂಪಿ ಬರೆದ ಪತ್ರವನ್ನು ಆಧರಿಸಿ ನಗರಾಭಿವೃದ್ಧಿ ಇಲಾಖೆಯ ನಾಲ್ವರು ಚುನಾವಣಾ ನೋಂದಣಿ ಅಧಿಕಾರಿಗಳಾದ (ಇಆರ್‌ಒ) ಚಂದ್ರಶೇಖರ್ (ಮಹದೇವಪುರ), ವಿ.ಬಿ.ಭೀಮಾಶಂಕರ್ (ಚಿಕ್ಕಪೇಟೆ), ಸುಹೇಲ್ ಅಹಮದ್ ಮತ್ತು ಗುಲ್ತಾಜ್ ಫಾತಿಮಾ (ಶಿವಾಜಿನಗರ) ಅಮಾನತುಗೊಳಿಸಲಾಗಿದೆ.

ಈ ಅಧಿಕಾರಿಗಳು ಖಾಸಗಿ ವ್ಯಕ್ತಿ ಅಥವಾ ಸಂಸ್ಥೆಗೆ ಚುನಾವಣಾ ಸಂಬಂಧಿತ ಚಟುವಟಿಕೆಗಳಿಗೆ ಗುರುತಿನ ಚೀಟಿ ನೀಡುವುದನ್ನು ನಿರ್ಬಂಧಿಸುವ ಜನಪ್ರತಿನಿಧಿ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ. ಗುರುತಿನ ಚೀಟಿ ನೀಡಿ ಅಕ್ರಮಕ್ಕೆ ಕಾರಣರಾಗಿದ್ದಾರೆ ಎಂದು ತಿಳಿದು ಬಂದಿದೆ.


ವಿವಿಧ ಕ್ಷೇತ್ರಗಳಲ್ಲಿ ಮತದಾರರ ದತ್ತಾಂಶ ಸಂಗ್ರಹಿಸುವಲ್ಲಿ ಸರ್ಕಾರೇತರ ಸಂಸ್ಥೆ ಚಿಲುಮೆ ತೊಡಗಿಸಿಕೊಂಡಿತ್ತು. ಬಳಿಕ ಈ ಸಂಸ್ಥೆ ಸದಸ್ಯರು, ಮುಖ್ಯಸ್ಥರು ಬಿಬಿಎಂಪಿ ಹಾಕಿದ್ದ ಷರತ್ತು ಉಲ್ಲಂಘಿಸಿದ ಅಕ್ರಮ ಮಾಹಿತಿ ಸಂಗ್ರಹಿಸಿ ದುರ್ಬಳಕೆ ಮಾಡಿಕೊಂಡಿದ್ದರು.

Share This Article
Leave a comment