ಶಿರಾಡಿ ಘಾಟ್ ಗೆ 23 ಕಿ.ಮೀ ಸುರಂಗ : ಕೇಂದ್ರ ಸರ್ಕಾರ ಒಪ್ಪಿಗೆ

Team Newsnap
1 Min Read

ಮಂಗಳೂರು – ಬೆಂಗಳೂರು ನಡುವಿನ ಶಿರಾಡಿ ಘಾಟ್‌ನಲ್ಲಿ 23 ಕಿ.ಮೀ ಸುರಂಗ ಮಾರ್ಗದ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಈ ಬಗ್ಗೆ ಸಂಸದ ನಳೀನ್‌ ಕುಮಾರ್ ಕಟೀಲ್‌ ಟ್ವಿಟ್ ಮಾಡಿದ್ದಾರೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾರನಹಳ್ಳಿ-ಅಡ್ಡಹೊಳೆ(ಶಿರಾಡಿ ಘಾಟ್) ಭಾಗದ ಚತುಷ್ಪತ ರಸ್ತೆ ಕಾಮಗಾರಿಯ ಒಟ್ಟು ಮೊತ್ತ 1976 ಕೋಟಿ ರು .ವಿಜಯಪುರದ ಜ್ಞಾನ ಯೋಗಾಶ್ರಮದ ಪೂಜ್ಯ ಸಿದ್ದೇಶ್ವರ ಶ್ರೀಗಳು ಇನ್ನಿಲ್ಲ

ಮೊತ್ತದ ಬಿಡ್ ಆಹ್ವಾನಿಸಿದೆ. ಶಿರಾಡಿ ಘಾಟ್‌ನಲ್ಲಿ 15,000 ಕೋಟಿ ಮೊತ್ತದ 23 ಕಿ.ಮೀ ಸುರಂಗ ಮಾರ್ಗದ ವಿಸ್ತೃತ ಯೋಜನಾ ವರದಿಗೆ ಆದೇಶಿಸಿದೆ ಅಂತ ಹೇಳಿದ್ದಾರೆ.

ಇದೇ ವೇಳೇ ಅವರು ಇದರ ಜತೆಗೆ, ಬೆಂಗಳೂರು-ಮಂಗಳೂರು ಹೆದ್ದಾರಿ ಭಾಗವಾದ ಸಕಲೇಶಪುರದಿಂದ ಮಾರನಹಳ್ಳಿವರೆಗಿನ ರಸ್ತೆ ಭಾಗದ ದುರಸ್ತಿಗೂ ನಿತಿನ್‌ ಗಡ್ಕರಿ ಅವರು ಆದೇಶಿಸಿದ್ದಾರೆ. ಈ ಎಲ್ಲಾ ಕಾಮಗಾರಿಗಳಿಂದ ಬೆಂಗಳೂರು-ಮಂಗಳೂರು ರಸ್ತೆ ಸಂಚಾರ ಆರಾಮದಾಯಕವಾಗಲಿದೆ ಅಂತ ತಿಳಿಸಿದ್ದಾರೆ.

ಬೆಂಗಳೂರು-ಮಂಗಳೂರು ಸಂಚಾರದ ಅವಧಿ ಕಡಿಮೆಯಾಗಿ, ಪ್ರಯಾಣ ಸುಗಮವಾಗಲಿದೆ. ಇದಕ್ಕೆ ಅನುವು ಮಾಡಿಕೊಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹಾಗೂ ಕೇಂದ್ರ ಹೆದ್ದಾರಿ ಸಚಿವರಾದ ನಿತಿನ್‌ ಗಡ್ಕರಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಇದು ಬಿಜೆಪಿ ಸರ್ಕಾರದ ಮಹತ್ವದ ಕೊಡುಗೆ ಅಂತ ಅವರು ಹೇಳಿದ್ದಾರೆ.

Share This Article
Leave a comment