March 29, 2023

Newsnap Kannada

The World at your finger tips!

RIP , Guruji , Vijayapura

Pujya Siddeshwara Sri of Gnana Yogashrama , Vijayapura is no more ವಿಜಯಪುರದ ಜ್ಞಾನ ಯೋಗಾಶ್ರಮದ ಪೂಜ್ಯ ಸಿದ್ದೇಶ್ವರ ಶ್ರೀಗಳು ಇನ್ನಿಲ್ಲ

ವಿಜಯಪುರದ ಜ್ಞಾನ ಯೋಗಾಶ್ರಮದ ಪೂಜ್ಯ ಸಿದ್ದೇಶ್ವರ ಶ್ರೀಗಳು ಇನ್ನಿಲ್ಲ

Spread the love

ಖ್ಯಾತ ಪ್ರವಚನಕಾರರು, ನಡೆದಾಡುವ ದೇವರಂದೇ ವಿಶ್ವದಾದ್ಯಂತ ಜನಪ್ರಿಯತೆಗಳಿಸಿದ್ದ ಜ್ಞಾನಯೋಗಾಶ್ರಮದ ಪೂಜ್ಯ ಸಿದ್ದೇಶ್ವರ ಶ್ರೀಗಳು ಸೋಮವಾರ ಲಿಂಗೈಕ್ಯರಾಗಿದ್ದಾರೆ.

ಕಳೆದ ಹಲವು ವಾರಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಸಿದ್ದೇಶ್ವರ ಶ್ರೀ, ಇಂದು ಸಂಜೆ ದೈವಾಧೀನರಾಗಿದ್ದಾರೆ. ಸಿದ್ದೇಶ್ವರ ಶ್ರೀಗಳಿಗೆ 82 ವರ್ಷಗಳಾಗಿತ್ತು.ರಾಜ್ಯದಲ್ಲಿ 6 ಮಂದಿ ಹೆಚ್ಚುವರಿ ಎಸ್ಪಿಗಳ ವರ್ಗಾವಣೆ

ಅನಾರೋಗ್ಯ ಹಿನ್ನೆಲೆಯಲ್ಲಿ ಶ್ರೀಗಳನ್ನು ಬಿಎಲ್​ಡಿಇ ಸಂಸ್ಥೆಯ ಬಿ.ಎಂ ಪಾಟೀಲ್ ಮೆಡಿಕಲ್ ಕಾಲೇಜ್ ಹಾಗೂ ಹಾಸ್ಪಿಟಲ್​​ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಖ್ಯಾತ ಯುರೋಲಾಜಿಸ್ಟ್​​ ಡಾ. ಎಸ್​.ಬಿ. ಪಾಟೀಲ್, ಬಿ‌.ಎಂ ಪಾಟೀಲ್ ಮೆಡಿಕಲ್ ಕಾಲೇಜ್​ ಪ್ರಾಂಶುಪಾಲರಾದ ಡಾ.ಅರವಿಂದ ಪಾಟೀಲ್, ಡಾ. ಮಲ್ಲಣ್ಣ ಮೂಲಿಮನಿ ಎಂಡಿ ನೇತೃತ್ವದಲ್ಲಿ ಶ್ರೀಗಳಿಗೆ‌ ಚಿಕಿತ್ಸೆ ನೀಡಲಾಗುತ್ತಿತ್ತು.

ಶ್ರೀಗಳ ಪರಿಚಯ :

ಸಿದ್ದೇಶ್ವರ ಸ್ವಾಮಿಜಿಯವರು 1941 ಅಕ್ಟೋಬರ್ 24 ರಂದು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ್ದರು.

ಸಿದ್ದಗೊಂಡಪ್ಪ ಇವರ ಬಾಲ್ಯದ ಹೆಸರಾಗಿತ್ತು. ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ಶಾಲೆಯಲ್ಲಿಯೇ ನಾಲ್ಕನೇ ತರಗತಿವರೆಗೆ ಓದಿದ ನಂತರ, ಮಲ್ಲಿಕಾರ್ಜುನ ಸ್ವಾಮಿಗಳ ಬಳಿ ಬಂದಿದ್ದರು. ಮಲ್ಲಿಕಾರ್ಜುನ ಸ್ವಾಮಿಗಳ ಸಹಾಯದಿಂದ ಶಾಲಾ-ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಸರಾಗವಾಗಿ ಮುಗಿಸಿದ್ದರು. ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಮುಗಿಸಿ, ತತ್ವಶಾಸ್ತ ವಿಷಯದಲ್ಲಿ ಎಂ.ಎ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಾಸು ಮಾಡಿದ್ದರು.

error: Content is protected !!