June 7, 2023

Newsnap Kannada

The World at your finger tips!

government , transfer , Karnataka

ಜಿಪಂ ತಾಪಂ ಚುನಾವಣೆ:ಕ್ಷೇತ್ರ ಮರು ವಿಂಗಡಣೆ ಕರಡು ಪಟ್ಟಿ ಪ್ರಕಟ

Spread the love

ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಮರು ವಿಂಗಡಣೆ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದೆ.

ಜಿಪಂ, ತಾಪಂ ಸದಸ್ಯರ ಸಂಖ್ಯೆ, ಕ್ಷೇತ್ರಗಳ ಗಡಿ ನಿಗದಿ ಮಾಡಿ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ನಿಗದಿಗೊಳಿಸಿದ್ದು, ಸೋಮವಾರ ಕರಡು ಅಧಿಸೂಚನೆ ಪ್ರಕಟಿಸಲಾಗಿದೆ.

ಆಕ್ಷೇಪಣೆ ಸಲ್ಲಿಕೆಗೆ ಜನವರಿ 16 ಕೊನೆಯ ದಿನವಾಗಿದೆ.ಬೆಂಗಳೂರಿನಲ್ಲಿ ನಾಲ್ವರು ಕಂದಾಯ ಇಲಾಖೆ ಅಧಿಕಾರಿ ಅಮಾನತು

ಆನ್ ಲೈನ್ ಮೂಲಕ ಅಥವಾ ಖುದ್ದಾಗಿ ಅಥವಾ ಅಂಚೆಯ ಮೂಲಕ ಆಕ್ಷೇಪಣೆ ಸಲ್ಲಿಸಬಹುದಾಗಿದೆ.

ನಿಗದಿತ ದಿನಾಂಕದ ನಂತರ ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. https//rdpr.karnataka.gov.in/rdc/public/ ನಲ್ಲಿ ಮುಖಪುಟದ ಎಡ ಭಾಗದಲ್ಲಿರುವ ಸಾರ್ವಜನಿಕರ ಸಲಹೆಗಳು ಎಂಬ ಶೀರ್ಷಿಕೆ ಕ್ಲಿಕ್ ಮಾಡಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಇಲ್ಲವೇ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ, ಮೂರನೇ ಗೇಟ್, ಎರಡನೇ ಮಹಡಿ, ಕೊಠಡಿ ಸಂಖ್ಯೆ 222/ಎ ಬಹುಮಹಡಿ ಕಟ್ಟಡ, ಅಂಬೇಡ್ಕರ್ ವೀದಿ, ಬೆಂಗಳೂರು -1 ಈ ವಿಳಾಸಕ್ಕೆ ಆಕ್ಷೇಪಣೆ ಸಲ್ಲಿಸಬಹುದು.

ಕರಡು ಅಧಿಸೂಚನೆಯ ನಂತರ ಕ್ಷೇತ್ರಾವಾರು ವಿವರ :

ಬೆಂಗಳೂರು ನಗರ ಜಿಲ್ಲೆ 28, ಗ್ರಾಮಾಂತರ ಜಿಲ್ಲೆ 25, ಕೋಲಾರ 29, ರಾಮನಗರ 28, ಚಿಕ್ಕಬಳ್ಳಾಪುರ 29, ವಿಜಯನಗರ 28, ಬಳ್ಳಾರಿ 28, ಕೊಪ್ಪಳ 31, ರಾಯಚೂರು 38, ಬೀದರ್ 35, ಯಾದಗಿರಿ 28, ಹಾವೇರಿ 34, ವಿಜಯಪುರ 44, ಭಾಗಲಕೋಟೆ 35, ಉತ್ತರ ಕನ್ನಡ 54, ಕಲಬುರ್ಗಿ 48, ಗದಗ 25, ಧಾರವಾಡ 28, ಬೆಳಗಾವಿ 91, ಉಡುಪಿ 28, ದಕ್ಷಿಣ ಕನ್ನಡ 35, ಕೊಡಗು 25, ಚಾಮರಾಜನಗರ 28, ಚಿಕ್ಕಮಗಳೂರು 36, ಹಾಸನ 39, ಮಂಡ್ಯ 40, ಮೈಸೂರು 46, ಶಿವಮೊಗ್ಗ 31, ಚಿತ್ರದುರ್ಗ 37, ತುಮಕೂರು 57, ರಾಮನಗರ 28, ಜಿಲ್ಲಾ ಪಂಚಾಯಿತಿ ಸದಸ್ಯರ ಸಂಖ್ಯೆ ಇದೆ.

error: Content is protected !!