ತುರ್ತು ಬಳಕೆಯ ಔಷಧಿಗಳ ಪಟ್ಟಿಯಿಂದ ಆಸಿಡಿಟಿ ನಿವಾರಣೆಗೆ ಬಳಸುವ ರಾನ್‍ಟ್ಯಾಕ್ (Rantac), ಜಿನ್‍ಟ್ಯಾಕ್ (Zinetac )ಮಾತ್ರೆಗಳ ಮಾರಾಟವೂ ಸೇರಿದಂತೆ ಮಾರುಕಟ್ಟೆಯಲ್ಲಿರುವ 26 ಔಷಧಿಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.
ಜಿನ್‍ಟ್ಯಾಕ್, ರಾನ್‍ಟ್ಯಾಕ್ ಮಾತ್ರೆಗಳ ಬಳಕೆ ಕ್ಯಾನ್ಸರ್‌ಗೆ ಕಾರಣವಾಗುತ್ತಿದೆ ಎಂಬ ಅನುಮಾನಗಳು ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಈ ಎರಡು ಮಾತ್ರೆಗಳ ಜೊತೆಗೆ ಒಟ್ಟು 26 ಮಾತ್ರೆಗಳನ್ನು ನಿಷೇಧಿಸಿ ಕೇಂದ್ರ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ನಿಷೇಧಿತ ಔಷಧಿಗಳ ಪಟ್ಟಿಯಲ್ಲಿ ಎಜಿತ್ರೋಮೈಸಿನ್, ಪೆಂಟಾಮಿಡಿನ್( Pentamidine) ಮಾತ್ರೆಗಳು ಕೂಡ ಸೇರಿವೆ.
ಔಷಧಗಳ ದರ ಮತ್ತು ಪರ್ಯಾಯವಾಗಿ ಇನ್ನೂ ಉತ್ತಮ ಔಷಧಗಳು ಲಭ್ಯವಿದೆ ಎಂಬ ಮಾನದಂಡ ಆಧಾರದಲ್ಲಿ ಇವುಗಳನ್ನು ಕೈಬಿಡಲಾಗಿದೆ. ಪರಿಷ್ಕೃತ ಪಟ್ಟಿ ಬಿಡುಗಡೆ ಕುರಿತು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಅವರು ಮಂಗಳವಾರ ಟ್ವೀಟ್ ಮಾಡಿದ್ದಾರೆ. ನಾನು ಭ್ರಷ್ಟಾಚಾರಿ ಅಲ್ಲ: ಮೇಲುಕೋಟೆ ದೇವರ ಎದುರು ಆಣೆ ಮಾಡಲು ಸಿದ್ದ – ಸಂಸದೆ ಸುಮಲತಾ ಸವಾಲು
ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಔಷಧ, ಸೋಂಕು ನಿರೋಧಕ ಔಷಧಗಳು ಸೇರಿದಂತೆ ಒಟ್ಟು 34 ಔಷಧಗಳನ್ನು ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. 384 ಅಗತ್ಯ ಔಷಧಿಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
More Stories
ಶೀಘ್ರದಲ್ಲೇ ಅಡುಗೆ ಎಣ್ಣೆಗಳ ಬೆಲೆ ಏರಿಕೆ ಸಾಧ್ಯತೆ
ಕೊಲೆಸ್ಟ್ರಾಲ್ ಮಟ್ಟ ಹಾಕಲು ಅಗಸೆ ರಾಮಬಾಣ ( ಅರೋಗ್ಯವೇ ಭಾಗ್ಯ )
ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ