June 9, 2023

Newsnap Kannada

The World at your finger tips!

film,Apple Box,production

Apple Box Studios: A new film production company from actress Ramya ಆಪಲ್ ಬಾಕ್ಸ್ ಸ್ಟುಡಿಯೋಸ್ : ನಟಿ ರಮ್ಯಾರಿಂದ ಹೊಸ ಚಿತ್ರ ನಿರ್ಮಾಣ ಸಂಸ್ಥೆ

ಬುಲ್ಡೋಜರ್ ಬಲಿಷ್ಠರ ಗೋಡೆನೂ ಕೆಡುವುತ್ತಾ ? ಸಿಎಂ ಗೆ ರಮ್ಯಾ ಪ್ರಶ್ನೆ

Spread the love

ಬೆಂಗಳೂರಿನಲ್ಲಿ ಒತ್ತುವರೆ ಮಾಡಿಕೊಂಡ ಜಾಗಗಳನ್ನು ತೆರವುಗೊಳಿಸುವ ಕಾರ್ಯವನ್ನು ಬಿಬಿಎಂಪಿ ಎರಡು ದಿನಗಳಿಂದ ಹಲವು ಕಟ್ಟಡಗಳನ್ನು, ಗೋಡೆಗಳನ್ನು ಮತ್ತು ಕಾಂಪೌಂಡ್ ಕೆಡುವು ಕೆಲಸ ನಡೆಸಿದೆ.

ಬಿಬಿಎಂಪಿ ಬಿಟ್ಟ ಬುಲ್ಡೋಜರ್ ಕೇವಲ ಸಾಮಾನ್ಯ ಜನರ ಮನೆಗಳನ್ನು ಮಾತ್ರ ಕೆಡುವುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ನಟಿ ರಮ್ಯಾ ಕೂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಶ್ನೆ ಕೇಳಿದ್ದಾರೆ.

ಈಗಾಗಲೇ ಪ್ರತಿಷ್ಠಿತ ಕಂಪನಿಗಳು, ಶಾಲಾ, ಕಾಲೇಜುಗಳು ಮತ್ತು ಪ್ರತಿಷ್ಠಿತ ಬಿಲ್ಡರ್ಸ್ ಮನೆಗಳು ಹಾಗೂ ಶಾಸಕರು ಮತ್ತು ಮಂತ್ರಿಗಳ ಒಡೆತನದ ಬಿಲ್ಡಿಂಗ್ ಗಳು ಕೂಡ ರಾಜಕಾಲುವೆಯನ್ನು ಒತ್ತುವರೆ ಮಾಡಿಕೊಂಡಿವೆ.

ನಾನು ಭ್ರಷ್ಟಾಚಾರಿ ಅಲ್ಲ: ಮೇಲುಕೋಟೆ ದೇವರ ಎದುರು ಆಣೆ ಮಾಡಲು ಸಿದ್ದ – ಸಂಸದೆ ಸುಮಲತಾ ಸವಾಲು

ರಮ್ಯಾ ತಮ್ಮ ಟ್ವಿಟ್ ಮೂಲಕ ‘ಕಾನೂನು ರೂಪಿಸುವವರೇ ಕಾನೂನು ಮುರಿದಿದ್ದಾರೆ, ಬುಲ್ಡೋಜರ್ ಅಲ್ಲಿಗೂ ನುಗ್ಗುತ್ತದೆ ಎಂದು ನಾನು ಸಿಎಂ ಮೇಲೆ ಭರವಸೆ ಇಟ್ಟಿದ್ದೇನೆ. ಕಾನೂನು ಎಲ್ಲರಿಗೂ ಒಂದೇ’ ಎಂದು ನೆನಪಿಸಿದ್ದಾರೆ.

ಸರ್ಕಾರ ಸರಿಯಾದ ರೀತಿಯಲ್ಲಿ ಸ್ಪಂದಿಸದೇ ಇರುವುದನ್ನೂ ರಮ್ಯಾ ಕಟುವಾಗಿ ಟೀಕಿಸಿದ್ದರು. ಇದೀಗ ಬುಲ್ಡೋಜರ್ ಕುರಿತಾಗಿಯೂ ಮುಖ್ಯಮಂತ್ರಿಗಳಿಗೆ ನೆನಪಿಸಿದ್ದಾರೆ. ಸಾಮಾನ್ಯರ ಮನೆಗಳನ್ನಷ್ಟೇ ಒಡೆಯಲಾಗುತ್ತಿದೆ. ಉಳ್ಳವರ ಮನೆಗೂ ಬುಲ್ಡೋಜರ್ ನುಗ್ಗಲಿ ಎಂದು ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

error: Content is protected !!