ಪ್ರವೀಣ್​​ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ, BJPಯಿಂದ 25 ಲಕ್ಷ ಪರಿಹಾರ- CM ಬೊಮ್ಮಾಯಿ

Team Newsnap
1 Min Read
Cabinet expansion- wait and see: CM Bommai ಸಂಪುಟ ವಿಸ್ತರಣೆ- ಪುನರ್‌ ರಚನೆಯೋ ಕಾದು ನೋಡಿ: ಸಿಎಂ ಬೊಮ್ಮಾಯಿ

ಕಳೆದ ಮಂಗಳವಾರ ರತ್ರಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್​ ನೆಟ್ಟಾರು ಕುಟುಂಬವನ್ನು ಭೇಟಿಯಾಗಿ ಸಿಎಂ ಬಸವರಾಜ್​ ಬೊಮ್ಮಾಯಿ ಸಾಂತ್ವಾನ ಹೇಳಿದರು. ಅಲ್ಲದೇ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 25 ಲಕ್ಷ ಹಾಗೂ ಬಿಜೆಪಿ ಪಕ್ಷದಿಂದ 25 ಲಕ್ಷ ರು ಹಣಕಾಸಿ ನೆರವಿನ ಚೆಕ್ ಮಾಡಿದರು.

ನಂತರ ಸುದ್ದಿಗಾರರ ಜೊತೆ ಮಾತಾಡಿದ ಸಿಎಂ ಬೊಮ್ಮಾಯಿ, ಪ್ರವೀಣ್​​ ನೆಟ್ಟಾರು ಹತ್ಯೆ ಅತ್ಯಂತ ಖಂಡನೀಯ. ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಕೇರಳದ ಗಡಿಯಲ್ಲೇ ಹತ್ಯೆ ನಡೆದಿರುವ ಕಾರಣ ಇದು ವ್ಯವಸ್ಥಿತ ಕೊಲೆ ಎನ್ನಬಹುದು ಎಂದರು.ಇದನ್ನು ಓದಿ –ಪಶ್ಚಿಮ ಬಂಗಾಳದ ಮಹಾ ಭ್ರಷ್ಟ ಪಾರ್ಥ ಚಟರ್ಜಿ ಸಚಿವ ಸ್ಥಾನ, ಪಕ್ಷದಿಂದಲೂ ಗೇಟ್ ಪಾಸ್ ಕೊಟ್ಟ ಸಿಎಂ ದೀದಿ

ಕೆಲವು ವರ್ಷಗಳಿಂದ ಹೀಗೆ ಕರಾವಳಿ ಪ್ರದೇಶದಲ್ಲಿ ಕೊಲೆಗಳು ನಡೆಯುತ್ತಿರುವ ಪರಿಣಾಮ ನಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದರು.

ನಾವು ಪ್ರವೀಣ್​ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಹತ್ಯೆ ಹಿಂದೆ ಯಾವುದೇ ಸಂಘಟನೆ ಇದ್ದರೂ ಬಂಧಿಸುತ್ತೇವೆ ಎಂದು ಹೇಳಿದರು.

ರಾಜ್ಯ ಸರ್ಕಾರದಿಂದ 25 ಲಕ್ಷ, ಬಿಜೆಪಿಯಿಂದ 25 ಲಕ್ಷ ಚೆಕ್​ ನೀಡಿದ್ದೇವೆ. ನಮ್ಮ ಸರ್ಕಾರ ಮತ್ತು ಪಕ್ಷದಿಂದ ಪ್ರವೀಣ್​ ಮನೆಯವರಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಭರವಸೆ ನೀಡಿದರು.

Share This Article
Leave a comment