ಪಶ್ಚಿಮ ಬಂಗಾಳದ ಮಹಾ ಭ್ರಷ್ಟ ಪಾರ್ಥ ಚಟರ್ಜಿ ಸಚಿವ ಸ್ಥಾನ, ಪಕ್ಷದಿಂದಲೂ ಗೇಟ್ ಪಾಸ್ ಕೊಟ್ಟ ಸಿಎಂ ದೀದಿ

Team Newsnap
1 Min Read

ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರ ಆಪ್ತ ಸಚಿವ, ಪಾರ್ಥ ಚಟರ್ಜಿ ವಿರುದ್ಧ ಕೇಳಿ ಬಂದಿರುವ ‘ಶಿಕ್ಷಕರ ನೇಮಕಾತಿ ಹಗರಣ’ದಲ್ಲಿ ಕೊನೆಗೂ ತಲೆದಂಡ ಆಗಿದೆ.

ಪಾರ್ಥ ಚಟರ್ಜಿಯನ್ನು ಸಚಿವ ಸ್ಥಾನ ಹಾಗೂ ತೃಣಮೂಲ ಕಾಂಗ್ರೆಸ್​ನ ವರಿಷ್ಠೆ ಮಮತಾ ಬ್ಯಾನರ್ಜಿ ವಜಾ ಮಾಡಿ ಆದೇಶ ನೀಡಿದ್ದಾರೆ.

ಶಿಕ್ಷಕರ ನೇಮಕಾತಿ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲದ ಅಧಿಕಾರಿಗಳು ಪಾರ್ಥ ಅವರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದಂತೆಯೇ ಸಿಎಂ ಮಮತಾ ಬ್ಯಾನರ್ಜಿ ಇಂದು ಸಚಿವ ಸಂಪುಟ ಸಭೆ ಕರೆದಿದ್ದರು.

ಪಕ್ಷದಿಂದಲೂ ವಜಾ

ಈ ಸಭೆಯಲ್ಲಿ ಮಮತಾ ಬ್ಯಾನರ್ಜಿ, ಪಾರ್ಥ ಅವರಿಗೆ ಸಂಪುಟದಿಂದ ಗೇಟ್​ಪಾಸ್ ಕೊಟ್ಟಿದ್ದಾರೆ. ಸಂಪುಟ ಮಾತ್ರವಲ್ಲ ಪಕ್ಷದಿಂದಲೂ ಅವರನ್ನು ರಿಮೂವ್ ಮಾಡಿ ಆದೇಶ ನೀಡಿದ್ದಾರೆ.

ಬಿಜೆಪಿ ಯುವ ನಾಯಕ ಪ್ರವೀಣ್ ಹತ್ಯೆಗೈದ ಇಬ್ಬರು ದುಷ್ಕರ್ಮಿಗಳ ಬಂಧನ

ಇಷ್ಟಕ್ಕೆಲ್ಲ ಕಾರಣ ಪಾರ್ಥ ಚಟರ್ಜಿ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ನಿವಾಸದಲ್ಲಿ ಸಿಕ್ಕಿರುವ ಕೋಟಿ ಕೋಟಿ ಹಣ. ಈ ಹಿಂದೆ 21.90 ಕೋಟಿ ಹಣವನ್ನು ಅರ್ಪಿತಾ ನಿವಾಸದಲ್ಲಿ ಸೀಜ್ ಮಾಡಿದ್ದ ಇ.ಡಿ ಅಧಿಕಾರಿಗಳು ಇಂದು ಬರೋಬ್ಬರಿ 28.90 ಕೋಟಿ ಹಣ ಪತ್ತೆ ಹಚ್ಚಿದ್ದಾರೆ. ಟಾಯ್ಲೆಟ್​ನಲ್ಲಿ ಅಡಗಿಸಿಟ್ಟಿದ್ದ 28.90 ಕೋಟಿ ಹಣ ಮತ್ತು 5 ಕೆಜಿ ಚಿನ್ನಾಭರಣವನ್ನ ED ವಶಕ್ಕೆ ಪಡೆದಿದೆ.

Share This Article
Leave a comment