July 7, 2022

Newsnap Kannada

The World at your finger tips!

WhatsApp Image 2022 06 02 at 8.29.21 AM

ಸಚಿವ ನಾಗೇಶ್‌ ಮನೆಗೆ ದಾಳಿ ಮಾಡಿದವರು ಹೊರ ಜಿಲ್ಲೆಯ 15 ಮಂದಿ ಬಂಧನ : ಇಂದು ಬಿಜೆಪಿ ಪ್ರತಿಭಟನೆ

Spread the love

ತಿಪಟೂರಿನಲ್ಲಿರುವ ಶಿಕ್ಷಣ ಸಚಿವ ನಾಗೇಶ್‌ ಮನೆಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಪಟೂರು ಪೊಲೀಸರು 15ಕ್ಕೂ ಹೆಚ್ಚಿನ ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಗಲಾಟೆ ಮಾಡಿದವರೆಲ್ಲಾ ಹೊರ ಜಿಲ್ಲೆಯವರು ಎಂದು ಪೋಲಿಸರು ತಿಳಿಸಿದ್ದಾರೆ.

ಘಟನೆ ಖಂಡಿಸಿ ಬಿಜೆಪಿ ತುಮಕೂರಿನಲ್ಲಿ ಪ್ರತಿಭಟನೆ ನಡೆಸಲಿದೆ

ನಾಗೇಶ್‌ ಸಹಾಯಕ ಮುರಳೀಧರ್‌ ದೂರಿನ ಆಧಾರದಲ್ಲಿ ಪ್ರಕರಣ ದಾಖಲು ಮಾಡಲಾಗಿದೆ, ಇದರಲ್ಲಿ ಹೇಮಂತ್‌ ಎಂಬಾತ ಎ1 ಆರೋಪಿಯಾಗಿದ್ದಾನೆ. ನಾಗೇಶ್ ಮನೆಗೆ ದೌಡಾಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಎನ್‍ಎಸ್‍ಯುಐ ಕಾರ್ಯಕರ್ತರ ಪ್ರತಿಭಟನೆ ಬಗ್ಗೆ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.

ಸಚಿವರು ಇದ್ದಿದ್ದರೆ ಕೊಲೆ ಮಾಡುತ್ತಿದ್ದರೋ ಏನೋ? ಇಂಥಹ ಗೂಂಡಾವರ್ತನೆಯನ್ನು ಸರ್ಕಾರ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು, ಇಲ್ಲಿ ಪ್ರತಿಭಟನೆ ನಡೆಸಿದ್ದು ತುಮಕೂರಿನವರಲ್ಲ. ದಾವಣಗೆರೆ, ಬೆಂಗಳೂರು ಹೀಗೆ ಬೇರೆ ಬೇರೆ ಜಿಲ್ಲೆಗಳಿಂದ ಬಂದವರಿಂದ ಕೃತ್ಯ ನಡೆದಿದೆ. ವ್ಯವಸ್ಥಿತವಾಗಿ ಪ್ಲಾನ್ ಮಾಡಿಕೊಂಡು ಸಚಿವ ನಾಗೇಶ್ ಮನೆಗೆ ಬೆಂಕಿ ಹಚ್ಚಲು ಯತ್ನಿಸಿದ್ದಾರೆ.

ಇದನ್ನು ಓದಿ :ಹಾಸನದಲ್ಲಿ JDS ನಗರಸಭಾ ಸದಸ್ಯನ ಬರ್ಬರ ಹತ್ಯೆ:

ಪ್ರಕರಣ ಕುರಿತು ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿ, ಸಚಿವರ ಮನೆ ಆವರಣದಲ್ಲಿ ಎನ್‍ಎಸ್‍ಯುಐ ದಾಂಧಲೆ ನಡೆಸಿರುವುದು ಖಂಡನೀಯ. ಇಂತಹ ನಡೆ ವಿದ್ಯಾರ್ಥಿಗಳಿಗೆ, ಶಿಕ್ಷಣ ಪ್ರೇಮಿಗಳಿಗೆ ಶೋಭೆ ತರುವುದಿಲ್ಲ. ಈ ಕೃತ್ಯ ನಡೆಸಿದ ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

error: Content is protected !!