15 ಸಾವಿರ ರು ಲಂಚ ಪಡೆಯುವ ವೇಳೆ ಕಲಬುರಗಿ ಮಾಹಾನಗರ ಪಾಲಿಕೆ ಆಯುಕ್ತ ಎಸಿಬಿ ಬಲೆಗೆ

Team Newsnap
1 Min Read

15 ಸಾವಿರ ರು ಲಂಚ ಪಡೆಯುವ ವೇಳೆ ಕಲಬುರಗಿ ಮಾಹಾನಗರ ಪಾಲಕೆ ಆಯುಕ್ತ , ಕೆಎಎಸ್ ಅಧಿಕಾರಿ ಡಾ ಶಂಕರಪ್ಪ ವಣಿಕ್ಯಾಳ್. ಎಸಿಬಿ ಅಧಿಕಾರಿಗಳು ಬುಧವಾರ ರಾತ್ರಿ ಬಂಧಿಸಿದ್ದಾರೆ.ಆಯುಕ್ತರ ಪರವಾಗಿ 15 ಸಾವಿರ ರು ಲಂಚದ ಹಣ ಪಡೆದಿದ್ದ ವಿಷಯ ನಿರ್ವಾಹಕ ಚನ್ನಪ್ಪ ಬನ್ನೂರ ಅವರನ್ನೂ ಬಂಧಿಸಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಕೋವಿಡ್ ಸುರಕ್ಷಾ ಚಕ್ರ ಸಹಾಯವಾಣಿಗಾಗಿ ಕೆಲಸ ಮಾಡಿದ್ದಕ್ಕಾಗಿ ಬರಬೇಕಿದ್ದ ಬಾಕಿ ಬಿಲ್ ಮೊತ್ತ 7.5 ಲಕ್ಷ ರು ಪಡೆಯಲು ಲಂಚಕ್ಕೆ ಬೇಡಿಕೆ ಇಟ್ಟ ಈ ಅಧಿಕಾರಿ, ಅಧೀನ ಸಿಬ್ಬಂದಿ ಮೂಲಕ ಲಂಚ ಪಡೆಯುತ್ತಿದ್ದ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಡಾ.ಶಂಕರಪ್ಪ ವಣಿಕ್ಯಾಳ ಅವರನ್ನು ಬಂಧಿಸಿದ್ದಾರೆ.

ಇದನ್ನು ಓದಿ – ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮನೆಗೆ ನುಗ್ಗಿ ದಾಂಧಲೆ, ಹಲವರ ಬಂಧನ

ಕೋವಿಡ್ ಸುರಕ್ಷಾ ಸಹಾಯವಾಣಿಗಾಗಿ ಮಹಾನಗರ ಪಾಲಿಕೆಯು ಶರಣಬಸಪ್ಪ ಅಂಬೆಸಿಂಗ್ ಎಂಬುವವರ ಕಂಪನಿಯ ನೆರವನ್ನು ಪಡೆದಿತ್ತು. ಆ ಸೇವೆಗಾಗಿ ನೀಡಬೇಕಿದ್ದ 7.5 ಲಕ್ಷ ರು ಬಿಲ್‌ಗೆ ಅನುಮೋದನೆ ನೀಡಬೇಕು ಎಂದರೆ ಶೇ 2ರಷ್ಟು ಲಂಚ ನೀಡಬೇಕು ಎಂದು ವಣಿಕ್ಯಾಳ ಬೇಡಿಕೆ ಇರಿಸಿದ್ದರು.

ಈ ಬಗ್ಗೆ ಶರಣಬಸಪ್ಪ ಎಸಿಬಿಗೆ ದೂರು ನೀಡಿದ್ದರು. ವಿಷಯ ನಿರ್ವಾಹಕ ಚನ್ನಪ್ಪಗೆ ಲಂಚದ ಹಣ ನೀಡುವ ಸಂದರ್ಭದಲ್ಲಿ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆಯುಕ್ತ ಶಂಕರಪ್ಪ ವಣಿಕ್ಯಾಳ ಪರವಾಗಿಯೇ ಹಣ ಪಡೆಯುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾರೆ. ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ಶಂಕರಪ್ಪ ವಣಿಕ್ಯಾಳ ಇತ್ತೀಚೆಗಷ್ಟೇ ಮಹಾನಗರ ಪಾಲಿಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು.

Share This Article
Leave a comment