ಬಾಂಗ್ಲಾ ವಿರುದ್ಧದ ಶನಿವಾರ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ದ್ವಿಶತಕ ಬಾರಿಸಿ ಆರ್ಭಟಿಸಿದ್ದಾರೆ. ಈ ಮೂಲಕ ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿದ 7ನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆ ಇಶಾನ್ ಕಿಶನ್ ಪಾತ್ರರಾಗಿದ್ದಾರೆ.
ಸಚಿನ್, ಸೆಹ್ವಾಗ್, ರೋಹಿತ್ ಬಳಿಕ ಇಶಾನ್ ಕಿಶನ್ ಭಾರತದ ಪರ ದ್ವಿಶತಕ ಬಾರಿಸಿದ ನಾಲ್ಕನೇ ಬ್ಯಾಟ್ಸ್ಮನ್ ಆಗಿದ್ದಾರೆ. 160.31 ಸ್ಟ್ರೈಕ್ ರೇನ್ನಲ್ಲಿ ಬ್ಯಾಟ್ ಬೀಸಿದ ಕಿಶನ್ 131 ಬಾಲ್ನಲ್ಲಿ 210 ರನ್ಗಳಿಸಿದರು. 131 ಬಾಲ್ನಲ್ಲಿ 24 ಬೌಂಡರಿ, 10 ಸಿಕ್ಸರ್ ಬಾರಿಸಿ ಔಟ್ ಆದರು.
ಇಶಾನ್ ಕಿಶನ್ ಸ್ಫೋಟಕ ದ್ವಿಶತಕ ಬೆನ್ನಲ್ಲೇ ಟೀಂ ಇಂಡಿಯಾಗೆ ಹೊಸ ಭರವಸೆ ಮೂಡಿದೆ. ಇಷ್ಟುದಿನ ಬೆಂಚ್ ಕಾಯುತ್ತಿದ್ದ ಕಿಶನ್, ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡು ತಮ್ಮ ಸಾಮರ್ಥ್ಯವನ್ನು ಆಯ್ಕೆಗಾರರ ಗಮನಕ್ಕೆ ತಂದಿದ್ದಾರೆ.
ಮುಂದಿನ ವರ್ಷ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಈ ಟೂರ್ನಿ ತಯಾರಿಯಲ್ಲಿರುವ ಭಾರತಕ್ಕೆ ಮತ್ತೊಬ್ಬ ಯುವ ಆಟಗಾರ ಹೊಸ ಭರವಸೆ ಮೂಡಿಸಿದ್ದಾರೆ.
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – ಯುವತಿ ಸಜೀವ ದಹನ
- 100 ಕೋಟಿ ವಂಚನೆ ಪ್ರಕರಣ: ದೆಹಲಿಯಲ್ಲಿ ಚೀನಾ ಪ್ರಜೆ ಬಂಧನ
- ರೈತರ ಕೃಷಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ : ಸಚಿವ ಜಾರ್ಜ್ ಪ್ರಕಟ
- ಶಬರಿಮಲೈ ಭಕ್ತರಿದ್ದ ಬಸ್ ಪಲ್ಟಿ: ರಾಜ್ಯದ 27 ಮಂದಿ ಗಾಯ
- ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಾರತ ತಂಡದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಭೇಟಿ
More Stories
ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
ಯೋಗ ಗುರು ಶರತ್ ಜೋಯಿಸ್ ಹೃದಯಾಘಾತದಿಂದ ನಿಧನ
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಟಿ20 ಸರಣಿ