ಹೊಟ್ಟೆ ನೋವು ಅಂತ ಆಸ್ಪತ್ರೆಗೆ ದಾಖಲಾದ ಕೇರಳ ಮೂಲದ ಮಹಿಳೆಗೆ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದಾರೆ. ಆದರೆ 7 ವರ್ಷಗಳ ಕಾಲ ಟ್ರೀಟ್‌ಮೆಂಟ್ ಕೊಟ್ಟರೂ ಆಕೆ ಬದುಕಲಿಲ್ಲ. ಇದೀಗ ಆಕೆಯ ಚಿಕಿತ್ಸೆ ವೆಚ್ಚ ಅಂತ ಆಸ್ಪತ್ರೆ ಹೇಳಿದ್ದು ಬರೋಬ್ಬರಿ 10 ಕೋಟಿ ರು ಬಿಲ್!ಈಗ ಆಸ್ಪತ್ರೆ ದೌರ್ಜನ್ಯದ ವಿರುದ್ಧ ಸಿಡಿದೆದ್ದಿದ್ದಾರೆ.
ಈ ಪ್ರಕರಣದ ಸಂತ್ರಸ್ಥೆ ಹೆಸರು ಪೂನಂ ರಾಣಾ(28 ). ಇವರು ಕೇರಳ ಮೂಲದವರು. ಪತಿ ರೇಜಿಶ್ ನಾಯರ್ . 2015ರ ಅಕ್ಟೋಬರ್ 3ರಂದು ನಸುಕಿನ ವೇಳೆ ಹೊಟ್ಟೆ ನೋವಿನಿಂದಾಗಿ ಪೂನಂ ರಾಣಾಳನ್ನು ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದನ್ನು ಓದಿ – DKSಗೆ ಮತ್ತೊಂದು ಸಂಕಷ್ಟ; ಡಿ.ಕೆ. ಶಿವಕುಮಾರ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ED
2015ರಿಂದಲೂ ಪೂನಂ ರಾಣಾಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆದರೆ ಇದೀಗ ಪೂನಂ ಮೃತಪಟ್ಟಿದ್ದಾರೆ. ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳೆದಿದ್ದಾಗಿ ವೈದ್ಯರು ಹೇಳಿದ್ದಾರೆ.
10 ಕೋಟಿ ಬಿಲ್ !
ಪೂನಂ ಪತಿ ರೇಜಿಶ್ ನಾಯರ್ ಅವರಿಗೆ ಆಸ್ಪತ್ರೆ ಸಿಬ್ಬಂದಿ 10 ಕೋಟಿ ರು ಬಿಲ್ ಆಗಿದೆ ಎಂದು ಹೇಳಿದ್ದಾರೆ
ಸಾಮಾನ್ಯ ಕುಟುಂಬಕ್ಕೆ ಸೇರಿದ ರೇಜಿಶ್, ಈಗಾಗಲೇ ಪತ್ನಿ ಚಿಕಿತ್ಸೆಗೆ ಅಂತ ಸಾಲ ಸೋಲ ಮಾಡಿ ಹಣ ಹೊಂದಿಸುತ್ತಾ ಇದ್ದರು. ಈಗಾಗಲೇ ಊರಿನಲ್ಲಿರುವ ಜಮೀನು ಮಾರಿ 2 ಕೋಟಿಯಷ್ಟು ವೆಚ್ಚ ಮಾಡಿದ್ದಾರೆ. ಇದೀಗ ಬಿಲ್ 10 ಕೋಟಿ ಆಗಿದೆ ಅಂತ ಆಸ್ಪತ್ರೆ ಹೇಳುತ್ತಿದೆ.
ವೈದ್ಯರ ನಿರ್ಲಕ್ಷ್ಯದಿಂದಾಗಿಯೇ ತನ್ನ ಪತ್ನಿ ಸಾವನ್ನಪ್ಪಿದ್ದಾಳೆ ಅಂತ ರೇಜಿಶ್ ನಾಯರ್ ಆರೋಪಿಸಿದ್ದಾರೆ. ಆಕೆಯ ದೇಹಕ್ಕೆ ನಿರಂತರವಾಗಿ ರಾಸಾಯನಿಕ ವಿಷ ಸೇರಿಸಲಾಗುತ್ತಿತ್ತು ಎನ್ನುವ ಬಗ್ಗೆಯೂ ಅವರು ಸಂದೇಹ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ
ಆಸ್ಪತ್ರೆಯಿಂದ ದೌರ್ಜನ್ಯವಾಗಿದೆ ಅಂತ ಆರೋಪಿಸಿ ಮೃತ ಪೂನಂ ರಾಣಾ ಪತಿ ರೇಜಿಶ್ ನಾಯರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬೆಂಗಳೂರಿನ ಜೀವನ್ ಭಿಮಾನಗರ ಪೊಲೀಸ್ ಠಾಣೆಗೆ ಮಣಿಪಾಲ್ ಆಸ್ಪತ್ರೆ ವಿರುದ್ಧ ದೂರು ನೀಡಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು