ಮಂಡ್ಯದಲ್ಲಿ ಸಮಾನ ಮನಸ್ಕರ ವೇದಿಕೆಯಿಂದ ಶಾಲಾ ಪಠ್ಯದಲ್ಲಿ ಕೇಸರಿಕರಣ ವಿರೋಧಿಸಿ ಪ್ರತಿಭಟನೆ

Team Newsnap
1 Min Read

ಮಂಡ್ಯ ಜಿಲ್ಲಾ ಸಮಾನ ಮನಸ್ಕರ ವೇದಿಕೆ ವತಿಯಿಂದ ಕೋಮುವಾದಿ ಬಿಜೆಪಿ ಸರ್ಕಾರ ಜಾರಿ ಮಾಡಿರುವ ಶಾಲಾ ಪಠ್ಯಕ್ರಮವನ್ನು ವಿರೋಧಿಸಿ ಮಂಡ್ಯದ ಸಂಜಯ ವೃತ್ತದಲ್ಲಿ ಗುರುವಾರ ಬಾರೀ ಪ್ರತಿಭಟನೆ ಮಾಡಲಾಯಿತು.ಕೋಮುವಾದಿ ಬಿಜೆಪಿ ಸರ್ಕಾರದಿಂದ ಪರಿಷ್ಕರಣೆಗೊಂಡು ಮನುಸ್ಮೃತಿ ಕೈ ಪಿಡಿಯಂತಿರುವ ಪಠ್ಯಕ್ಕೆ ರಸ್ತೆಯಲ್ಲಿ ಬೆಂಕಿ ಹಚ್ಚಲಾಯಿತು.

ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯ ಅದ್ಯಕ್ಷ ಚಕ್ರತೀರ್ಥನ ವಿರುದ್ದ ಮತ್ತು ಕೋಮುವಾದಿ ಬಿಜೆಪಿ ಸರ್ಕಾರದ ವಿರುದ್ದ ಘೋಷಣೆ ಮೊಳಗಿಸಿದ ಪ್ರತಿಭಟನಾಕಾರರು ಆತನನ್ನು ಪರಿಷ್ಕರಣಾ ಸಮಿತಿಯಿಂದ ಕೂಡಲೇ ವಜಾಗೊಳಿಸಬೇಕೆಂದು ಬಿಜೆಪಿ ಸರಕಾರಕ್ಕೆ ಆಗ್ರಹಿಸಿದರು.

RSS ಮತ್ತು ಸಂಘಪರಿವಾರದ ನಿರ್ದೇಶನದಂತೆ ಶಾಲಾ ಪಠ್ಯಗಳಲ್ಲಿ ಕೋಮುದ್ವೇಶ ಹೆಚ್ಚಿಸುವ ವಿಷಯಗಳನ್ನು ತುಂಬಲಾಗಿದೆ. ಮೌಲಿಕ ಶಿಕ್ಷಣದ ಬದಲಿಗೆ ಸನಾತನಾವಾದಿ ಶಿಕ್ಷಣವನ್ನು ಮಕ್ಕಳಿಗೆ ಕಲಿಸುವ ಮೂಲಕ ಮಕ್ಕಳಲ್ಲಿ ಕೋಮುದ್ವೇಶ ಬೆಳೆಯುವ ಪ್ರಯತ್ನಗಳು ಪ್ರಜ್ಞಾಪೂರ್ವಕವಾಗಿ ನಡೆಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

ಇದನ್ನು ಓದಿ : ಮಂಗಳಮುಖಿ ಸರ್ಕಾರ ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಜಾನಪದ ಆಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಬೇಸರ

ನಾಡಿನ ಸಾಹಿತ್ಯ ಲೋಕದ ಸಾಕ್ಷಿ ಪ್ರಜ್ಞೆಗಳಾದ ಕುವೆಂಪು ದೇವನೂರು ಮಹದೇವ , ಬರಗೂರು ರಾಮಚಂದ್ರಪ್ಪರಂತ ಸಮತಾವಾದಿ ಜನರ ಪಠ್ಯಗಳನ್ನು ಹೊರಗಿಟ್ಟು ಬ್ರಿಟೀಷರ ಬೂಟು ನೆಕ್ಕಿದ ಸಂಘಪರಿವಾರದ ನಿಷ್ಪ್ರಯೋಜಕರ ಪಠ್ಯಗಳನ್ನು ತುರಕಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಮಾನ ಮನಸ್ಕರ ವೇದಿಕೆಯ ಸಂಚಾಲಕ ಮತ್ತು ವಕೀಲ ಲಕ್ಷ್ಮಣ್ ಚೀರನಹಳ್ಳಿ, , ಹೋರಾಟಗಾರ ಷಣ್ಮುಖೇಗೌಡ, ಸಿಪಿಎಂನ ನಾರಾಯಣ್, ಕೃಷ್ಣೆಗೌಡ, ಯಶವಂತ, ಟಿ ಡಿ ನಾಗರಾಜ್ , ಕಸಪ ಜಿಲ್ಲಾಧ್ಯಕ್ಷ ರವಿ ಚಾಮಪುರ, ಚಿಂತಕ ಮುಕುಂದ, ದೇವರಾಜು ಹಿಂದುಳಿದ ವರ್ಗಗಳ ವೇದಿಕೆಯ ಸಂದೇಶ್, ಪ್ರಗತಿಪರ ವಕೀಲ ಬಿಟಿ ವಿಶ್ವನಾಥ್, ಮುಸ್ಲಿಂ ವೇದಿಕೆಯ ತಾಯರ್ , ಸವಿತ ಸಮಾಜದ ಮುಖಂಡ ಬೋರಪ್ಪ ದಸಂಸದ ಎಂ.ವಿ.ಕೃಷ್ಣ, ಸಾಹಿತಿಗಳಾದ ರಾಜೇಂದ್ರ ಪ್ರಸಾದ್ ಜಿಟಿ ವೀರಪ್ಪ ಖ್ಯಾತ ಕಲಾವಿದರಾದ ಸೋಮು ವರದ ಸೇರಿದಂತೆ ನೂರಾರು ಕಾರ್ಯಕರ್ತರಿದ್ದರು.

Share This Article
Leave a comment