DKSಗೆ ಮತ್ತೊಂದು ಸಂಕಷ್ಟ; ಡಿ.ಕೆ. ಶಿವಕುಮಾರ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ED

Team Newsnap
1 Min Read

2019ರಲ್ಲಿ ದೆಹಲಿಯ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಎರಡುವರೆ ವರ್ಷಗಳ ಬಳಿಕ ಇಡಿ ಅಧಿಕಾರಿಗಳು ಹೊಸದಾಗಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ದೆಹಲಿಯ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.ಜಾರಿ ನಿರ್ದೇಶನಾಲಯ ಅಧಿಕಾರಿಗಳು ಡಿ.ಕೆ. ಶಿವಕುಮಾರ್ ವಿರುದ್ಧ ಹೊಸದಾಗಿ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.

ಇದನ್ನು ಓದಿ –ಇಂಗ್ಲಿಷ್‌ ಓದುವುದು ಕಷ್ಟ : ತುಮಕೂರಿನ ಬಾಲಕ ಆತ್ಮಹತ್ಯೆಗೆ ಯತ್ನ

ಒಂದು ವೇಳೆ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್ ವಿರುದ್ಧ ಆರೋಪ ಸಾಬೀತಾದಲ್ಲಿ ಜೈಲುಶಿಕ್ಷೆ ಪ್ರಕಟವಾಗುವ ಸಾಧ್ಯತೆ ಇದ್ದು, 2023 ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಸಿಎಂ ಸ್ಥಾನದ ಆಕಾಂಕ್ಷಿಯಾಗಿರುವ ಡಿಕೆಶಿ ಕನಸಿಗೆ ಮುಳುವಾಗುವ ಸಾಧ್ಯತೆ ದಟ್ಟವಾಗಿದೆ.

ED ದಾಳಿಯಲ್ಲಿ ಏನಾಗಿತ್ತು ?

ಕೇಂದ್ರೀಯ ತನಿಖಾ ದಳ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ವಿರುದ್ಧ ಪ್ರಕರಣ ದಾಖಲಿಸಿದೆ. ಡಿಕೆ ಶಿವಕುಮಾರ್ ಅವರು ತಮ್ಮ ಗೊತ್ತಿರುವ ಆದಾಯದ ಮೂಲಗಳಿಗೆ ಅನುಗುಣವಾಗಿ ಆಸ್ತಿ ಗಳಿಸಿದ ಆರೋಪದ ಮೇಲೆ. ಸಿ.ಬಿ.ಐ – ಶಿವಕುಮಾರ್ 74.93 ಕೋಟಿ ರೂಪಾಯಿ (ಅಂದಾಜು) ಮೊತ್ತದ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಕರ್ನಾಟಕದಲ್ಲಿ ಒಂಬತ್ತು, ದೆಹಲಿಯಲ್ಲಿ ನಾಲ್ಕು ಮತ್ತು ಮುಂಬೈನಲ್ಲಿ ಒಂದು ಸೇರಿದಂತೆ 14 ಸ್ಥಳಗಳಲ್ಲಿ ED ದಾಳಿ ನಡೆಸಿತು.

Share This Article
Leave a comment