July 6, 2022

Newsnap Kannada

The World at your finger tips!

acb 1

GST officer Madhusudhan gets trapped by ACB

ರಾಮನಗರದಲ್ಲಿ ಲಂಚ ಪಡೆಯುತ್ತಿದ್ದ ಸಹಕಾರ ಇಲಾಖೆಯ ಎಸ್‌ಡಿಎ ಬಂಧಿಸಿದ ಎಸಿಬಿ

Spread the love

ಹಾಲಿನ ಡೈರಿಯ ಚುನಾವಣೆಗಾಗಿ ಚುನಾವಣಾಧಿಕಾರಿ ನೇಮಕಕ್ಕೆ ಲಂಚ ಪಡೆಯುತ್ತಿದ್ದ ಸಹಕಾರ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಶಿವಾನಂದ ಎಂಬುವರನ್ನು ಎಸಿಬಿ ಅಧಿಕಾರಿಗಳು ಗುರುವಾರ ಬಂಧಿಸಿದರು.

ಕನಕಪುರ ತಾಲ್ಲೂಕಿನ ಅರೇಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಹಾಗೂ ಚುನಾವಣೆ ನಡೆಸಲು ಚುನಾವಣಾಧಿಕಾರಿ ನೇಮಿಸುವಂತೆ ಕೋರಿ ಡೇರಿಯ‌ ಸಿಇಒ ಗೀತಾ ಇಲಾಖೆಗೆ ಮನವಿ ಸಲ್ಲಿಸಿದ್ದರು.ಈ ಕೆಲಸ ಮಾಡಿಕೊಡಲು ಆರೋಪಿ ಶಿವಾನಂದ 8 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಇದನ್ನು ಓದಿ : ಉದ್ಯಮಿ ಆದಿಕೇಶವಲು ಪುತ್ರ ಶ್ರೀನಿವಾಸ್‍ಗೆ ಬಂಧನ: ಜೈಲು

ಗೀತಾ ಈ ಸಂಬಂಧ ಎಸಿಬಿಗೆ ದೂರು ನೀಡಿದ್ದರು. ಗುರುವಾರ ಮಧ್ಯಾಹ್ನ ರಾಮನಗರದ ಸಹಾಯಕ ನಿಬಂಧಕರ ಕಚೇರಿಯಲ್ಲಿ ಆರೋಪಿಯು ಮಾಗಡಿಯ ಕೃಷಿ ಪತ್ತಿನ ಸಹಕಾರ ಸಂಘವೊಂದರ ಕಾರ್ಯದರ್ಶಿ ಚಂದ್ರಶೇಖರ್ ಎಂಬುವರ ಮೂಲಕ ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದರು.

error: Content is protected !!