ಬೆಂಗಳೂರಿನ ವಿಧಾನಸೌಧದಲ್ಲಿ ದಾಖಲೆ ಇಲ್ಲದ ಹಣ ಸಾಗಾಟ ಮಾಡ್ತಿದ್ದ ಲೋಕೊಪಯೋಗಿ ಇಲಾಖೆಯ ಅಧಿಕಾರಿ ಒಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಪಿಡಬ್ಲ್ಯೂಡಿ ಜ್ಯೂನಿಯರ್ ಇಂಜಿನಿಯರ್ ಜಗದೀಶ್ ಪೊಲೀಸ್ ಅಧಿಕಾರಿಗಳ ವಶದಲ್ಲಿದ್ದಾರೆ.ಬೆಳಗಾವಿ : ಯಲ್ಲಮ್ಮನ ದರ್ಶನಕ್ಕೆ ಹೊರಟ ವಾಹನ ಭೀಕರ ಅಪಘಾತ; 6 ಮಂದಿ ಸಾವು
ಬುಧವಾರ ಸಂಜೆ ಮಂಡ್ಯ ಮೂಲದ ಜಗದೀಶ್ 10 ಲಕ್ಷ ರೂಪಾಯಿ ಹಣದೊಂದಿಗೆ ವಿಧಾನಸೌಧಕ್ಕೆ ಪ್ರವೇಶ ಮಾಡಿದ್ದರು. ಈ ವೇಳೆ ಈಸ್ಟ್ ಗೇಟ್ನಲ್ಲಿ ಬ್ಯಾಗ್ ಪರಿಶೀಲನೆ ನಡೆಸಿದಾಗ 10.5 ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ. ಕೂಡಲೇ ಅವರನ್ನು ವಶಕ್ಕೆ ಪಡೆದ ಅಧಿಕಾರಿಗಳು, ತನಿಖೆ ನಡೆಸಿ ಕೋರ್ಟ್ಗೆ ಒಪ್ಪಿಸಿದ್ದಾರೆ.
ತನಿಖೆ ವೇಳೆ ಸಚಿವರೊಬ್ಬರನ್ನು ಭೇಟಿ ಮಾಡಲು ಜಗದೀಶ್ ಬರುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ ಎನ್ನಲಾಗಿದೆ. ಆರೋಪಿ ಎಂಜಿನಿಯರ್ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
- 8ನೇ ತರಗತಿ ವಿದ್ಯಾರ್ಥಿ Low ಬಿಪಿಯಿಂದ ಕುಸಿದು ಸಾವು
- ಮೈಸೂರು – ಕಲುಷಿತ ನೀರು ಸೇವಿಸಿ ಓರ್ವ ಸಾವು, 12 ಜನ ಅಸ್ವಸ್ಥ
- ಮಂಡ್ಯ ಭ್ರೂಣ ಹತ್ಯೆ ಪ್ರಕರಣ : ಆರು ಮಂದಿ ಬಂಧನ
- ನಟ ಕಿರಣ್ ರಾಜ್ ಕಾರು ಅಪಘಾತ : ಎದೆಗೆ ತೀವ್ರ ಪೆಟ್ಟು – ಕೆಂಗೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ
- ಮುಡಾ ಹಗರಣ : 18 ಅಧಿಕಾರಿಗಳಿಗೆ ಲೋಕಾಯುಕ್ತ ನೋಟಿಸ್
- ಮಾಧ್ಯಮಗಳ ಮೇಲೆ ನಿಷೇಧ ಹೇರುವಂತೆ ನಟ ದರ್ಶನ್ ಕೋರಿಕೆ