March 29, 2023

Newsnap Kannada

The World at your finger tips!

Terrible , accident , death

Belagavi: A vehicle leaving for Yallamma's darshan met with a terrible accident; 6 people died ಬೆಳಗಾವಿ : ಯಲ್ಲಮ್ಮನ ದರ್ಶನಕ್ಕೆ ಹೊರಟ ವಾಹನ ಭೀಕರ ಅಪಘಾತ; 6 ಮಂದಿ ಸಾವು

ಬೆಳಗಾವಿ : ಯಲ್ಲಮ್ಮನ ದರ್ಶನಕ್ಕೆ ಹೊರಟ ವಾಹನ ಭೀಕರ ಅಪಘಾತ; 6 ಮಂದಿ ಸಾವು

Spread the love

ಸವದತ್ತಿ ಯಲ್ಲಮ್ಮ ಯಾತ್ರಾರ್ಥಿಗಳು ಪ್ರಯಾಣಿಸುತ್ತಿದ್ದ ಬೊಲೆರೊ ವಾಹನ ಮರಕ್ಕೆ ಢಿಕ್ಕಿ ಹೊಡೆದು 6 ಮಂದಿ ದುರಂತ ಸಾವು ಕಂಡಿದ್ದಾರೆ.

ಬೆಳಗಾವಿ ಕಡಕೋಳ ಪೊಲೀಸ್ ಠಾಣಾ ವ್ಯಾಪ್ತಿಯ‌ ಚುಂಚನೂರು ಬಳಿ ದುರ್ಘಟನೆ ನಡೆದಿದೆ.ಮುರುಘಾ ಶ್ರೀಗಳು ಅತ್ಯಾಚಾರ ಮಾಡಿಲ್ಲ: ಜಿಲ್ಲಾಸ್ಪತ್ರೆಯ ವೈದ್ಯರಿಂದ ವರದಿ

ವಿಠ್ಠಲ, ರುಕ್ಮಿಣಿ ದೇವಸ್ಥಾನದ ಆಲದ ಮರಕ್ಕೆ ಮಹೇಂದ್ರ ಬೊಲೆರೊ ವಾಹನ ಡಿಕ್ಕಿ ಹೊಡೆದ ಅನಾಹುತ ಸಂಭವಿಸಿದೆ.

ಹನಮ್ಮವ್ವ (24), ದೀಪಾ (31), ಸವಿತಾ (12), ಸುಪ್ರೀತಾ (11), ಮಾರುತಿ (42), ಇಂದ್ರವ್ವಾ (24) ಮೃತ ದುರ್ದೈವಿಗಳು.

ಭೀಕರ ದುರಂತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿ, ಓರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಗಾಯಾಳುಗಳನ್ನು ಗೋಕಾಕ್​ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರೆಲ್ಲರೂ ರಾಮದುರ್ಗ ತಾಲೂಕಿನ‌ ಹುಲಕುಂದ ಗ್ರಾಮದ ಯಾತ್ರಾರ್ಥಿಗಳು ಎಂದು ತಿಳಿದುಬಂದಿದೆ. ಹುಲಕುಂದ ಗ್ರಾಮದಿಂದ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ತೆರಳುವಾಗ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಬೆಳಗಾವಿ ಎಸ್ಪಿ ಸಂಜೀವ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

error: Content is protected !!