ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ – ವೈಮಾನಿಕ ಸಮೀಕ್ಷೆ ಪೂರ್ಣಗೊಳಿಸಿದ ಗಡ್ಕರಿ

Team Newsnap
1 Min Read

ಬೆಂಗಳೂರಿನಿಂದ ಮೈಸೂರಿಗೆ 90 ನಿಮಿಷದಲ್ಲಿ ಪ್ರಯಾಣಿಸಬಹುದಾದ ಕೇಂದ್ರ ಸರ್ಕಾರದ ಮಹತ್ವಾಂಕ್ಷಿ ಯೋಜನೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಅಂತಿಮ ಹಂತದ ಕಾಮಗಾರಿ ನಡೆಯುತ್ತಿದೆ. ಇಂದು ಕೇಂದ್ರ ರಸ್ತೆ ಸಾರಿಗೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ವೈಮಾನಿಕ ಸಮೀಕ್ಷೆ  ನಡೆಸಿದರು.

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಭಾಗಶಃ ಪೂರ್ಣ ಹಿನ್ನೆಲೆ ಇಂದು ನಿತಿನ್ ಗಡ್ಕರಿ ಹೆದ್ದಾರಿ ಪರಿಶೀಲನೆ ನಡೆಸಿದರು. ಬೆಂಗಳೂರಿನಿಂದ-ಶ್ರೀರಂಗಪಟ್ಟಣದವರೆಗೆ ವೈಮಾನಿಕ ಸಮೀಕ್ಷೆ ಪೂರ್ಣಗೊಳಿಸಿದ್ದಾರೆ. ಈ ವೇಳೆ ನಿತಿನ್ ಗಡ್ಕರಿಗೆ ಸಂಸದ ಬಿ.ಎನ್.ಬಚ್ಚೇಗೌಡ, ಸಚಿವ ಸಿ.ಸಿ ಪಾಟೀಲ್ ಸೇರಿದಂತೆ ಕೆಲ ಸಚಿವರು ಸಾಥ್ ನೀಡಿದ್ದರು.ವಿಧಾನಸೌಧದಲ್ಲಿ ಮಂಡ್ಯದ ವ್ಯಕ್ತಿಯ 10.5 ಲಕ್ಷ ಹಣ ವಶ : PWD ಇಂಜಿನಿಯರ್ ಬಂಧನ

WhatsApp Image 2023 01 05 at 2.16.22 PM

ರಾಜ್ಯ ರಾಜಧಾನಿ ಹಾಗೂ ಸಾಂಸ್ಕೃತಿಕ ನಗರಿಗೆ ಸಂಪರ್ಕ ಕಲ್ಪಿಸುವ ಎಕ್ಸ್‌ಪ್ರೆಸ್‌ ವೇ ಕಾಮಗಾರಿ ಇನ್ನೆನ್ನು ಪೂರ್ಣಗೊಳ್ಳುವ ಹಂತ ತಲುಪಿದೆ. ಒಟ್ಟು 118 ಕಿ.ಮೀ ಉದ್ದದ್ದ ಎಕ್ಸ್‌ಪ್ರೆಸ್‌ ವೇ ಮೊದಲ ಹಂತದ ಕಾಮಗಾರಿಯು ಬೆಂಗಳೂರಿನ ಪಂಚಮುಖಿ ಆಂಜನೇಯ ದೇವಾಲಯದಿಂದ ಹಿಡಿದು ನಿಡಘಟ್ಟದವರೆಗೆ ಹಾಗೂ ನಿಡಘಟ್ಟದಿಂದ ಮೈಸೂರಿನ ವರೆಗೂ ಎರಡನೇ ಹಂತದ ಕಾಮಗಾರಿ ನಡೆಯುತ್ತಿದೆ.

ಇದೇ ಫೆಬ್ರವರಿ ಇಲ್ಲವೇ ಮಾರ್ಚ್ ಮೊದಲ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆದ್ದಾರಿಗೆ ಚಾಲನೆ ನೀಡಲಿದ್ದಾರೆ. ಒಟ್ಟು 9,551 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ದಶಪಥ ಹೆದ್ದಾರಿ 9 ಬೃಹತ್ ಸೇತುವೆ, 44 ಸಣ್ಣ ಸೇತುವೆ, 8.7 ಕಿ.ಮೀ. ಉದ್ದದ ಎಲಿ ವೇಟೆಡ್ ಹೈವೇ ಹೊಂದಿದೆ. 4 ರೈಲ್ವೆ ಮೇಲ್ಸೇತುವೆ, 28 ವೆಹಿಕಲ್ ಅಂಡರ್‍ಪಾಸ್, 13 ಪಾದಚಾರಿಗಳ ಅಂಡರ್ ಪಾಸ್‍ಗಳನ್ನ ಒಳಗೊಂಡಿದೆ.

ಈ ಯೋಜನೆ ಪೂರ್ಣಗೊಂಡರೆ ಮೈಸೂರು-ಬೆಂಗಳೂರು ಪ್ರಯಾಣದ ಅವಧಿ 90 ನಿಮಿಷಕ್ಕೆ ಇಳಿಕೆಯಾಗಲಿದೆ. ಜೊತೆಗೆ ಮಧ್ಯೆ ಸಿಗುವ ಹಲವು ಪಟ್ಟಣಗಳಿಗೆ ಬೈಪಾಸ್ ವ್ಯವಸ್ಥೆ ಕಲ್ಪಿಸಿ ಎಂಟ್ರಿ ಹಾಗೂ ಎಕ್ಸಿಟ್‍ಗಳನ್ನು ನೀಡಲಾಗಿದೆ.

Share This Article
Leave a comment