ಯುವ ನಿಧಿ’ ಯೋಜನೆ ಡಿಸೆಂಬರ್‌/ಜನವರಿಯಲ್ಲಿ ಜಾರಿ: ಸಿಎಂ ಸಿದ್ದು

Team Newsnap
1 Min Read

ಬೆಂಗಳೂರು: ಯುವ ನಿಧಿ ಯೋಜನೆ ಡಿಸೆಂಬರ್‌/ಜನವರಿಯಲ್ಲಿ ಜಾರಿ ಮಾಡಲಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಬುಧವಾರ ತಿಳಿಸಿದರು.

ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ರಾಜ್ಯ ಸರ್ಕಾರದ ಚಾರಿತ್ರಿಕ ಗೃಹಲಕ್ಷ್ಮಿ ಯೋಜನೆಯ ಉದ್ಘಾಟನಾ ಸಂಭ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈಗ ನಾಲ್ಕು ಗ್ಯಾರಂಟಿ ಯೋಜನೆಗಳು ಜಾರಿಯಾಗಿವೆ. ಪ್ರತಿದಿನ ಕೋಟಿಗೂ ಅಧಿಕ ಮಂದಿ ಪ್ರತಿ ದಿನ, ಪ್ರತಿ ತಿಂಗಳು ನಮ್ಮ ಗ್ಯಾರಂಟಿ ಯೋಜನೆಗಳ ಅನುಕೂಲ ಪಡೆಯುತ್ತಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ಅವರ ಮಾತುಗಳು ಸುಳ್ಳಾಗಿವೆ ಎಂದು ವಿವರಿಸಿದರು.

ಈ ಯೋಜನೆಯನ್ನು ಪೂರ್ಣ ದೇಶದಲ್ಲಿ ಜಾರಿಗೆ ತರಲು ನಿರ್ಧಾರ ಮಾಡಿದ್ದೇವೆ ಅಂತ ಇದೇ ವೇಳೇ ರಾಹುಲ್‌ಗಾಂಧಿಯವರು ತಿಳಿಸಿದರು.ನೀಲಿ ಚಂದ್ರಮ : “ಏನಿದು ಸೂಪರ್ ಬ್ಲೂಮೂನ್” ?

ಪ್ರಧಾನಿ ನರೇಂದ್ರ ಮೋದಿಯವರು ಕೆಲಸವನ್ನು ತಮ್ಮ ಮೂವರು ಸ್ನೇಹಿತರಿಗಾಗಿ ಮಾಡುತ್ತಾರೆ ಹೊರತು ಜನಸಾಮಾನ್ಯರಿಗೆ ಅಲ್ಲ ಅಂತ ಕಿಡಿಕಾರಿದರು.

Share This Article
Leave a comment