ಅಪರೂಪಕ್ಕೆ ನಡೆಯುವ ಬಾಹ್ಯಾಕಾಶದ ವಿಸ್ಮಯವನ್ನು ಎದುರುಗೊಳ್ಳುವಗಳಿಗೆ ಮತ್ತೊಮ್ಮೆ ಬಂದಿದೆ. ಇಂದು ರಾತ್ರಿ ಆಗಸದಲ್ಲಿ ಮೋಡ ಕವಿಯದೆ ಇದ್ದರೆ ಅಪರೂಪದ ಸಂಗತಿಯನ್ನು ಕಣ್ತುಂಬಿಕೊಳ್ಳುವ ಅಪೂರ್ವ ಅವಕಾಶ ನಮ್ಮದಾಗಲಿದೆ. ಆಗಸದಲ್ಲಿ ಮೂಡುವ ಚಂದಮಾಮನನ್ನು ನೋಡಲು ಯಾರಿಗೆ ಇಷ್ಟವಿಲ್ಲ ಹೇಳಿ. ಚಂದ್ರನ ಅಂದವ ಹೊಗಳುತ ಕೂತರೆ ಸಮಯವೇ ಸಾಲದು, ಕನಸು ಕೂಡ ಕಳೆಯದು. ಹೀಗೆ ಚಂದ್ರ ಎಂಬ ಪದದಲ್ಲೇ ಒಂದು ಸೆಳೆತ ಇದೆ. ಈ ಕಾರಣಕ್ಕೆ ಪ್ರೇಮಿಗಳಿಂದ ಹಿಡಿದು ಸಹಸ್ರ ಚಂದ್ರನ ಕಂಡಿರುವ ಹಿರಿಯರ ತನಕ ಚಂದ್ರ ಅಂದರೆ ಅದೇನೋ ಪ್ರೀತಿ. ಪ್ರತಿದಿನ ಚಂದ್ರನನ್ನು ನೋಡಿದರೂ ಮತ್ತೆ ನೋಡಬೇಕು ಎನ್ನಿಸುತ್ತದೆ. ಅಂತಹ ಸುಂದರ ಚಂದ್ರನ ರೂಪದಲ್ಲಿ ನಾಳೆ ವಿಶೇಷವೊಂದು ಕಾಣಿಸಲಿದೆ. ಅದುವೇ ಆಗಸದಲ್ಲಿ ಕಾಣಿಸುವ “ಸೂಪರ್ ಬ್ಲೂ ಮೂನ್”.
ಚಂದ್ರ ತನ್ನ ಕಕ್ಷೆಯಲ್ಲಿ ಸುತ್ತು ಬರುವಾಗ ಕೆಲವೊಂದು ಸಲ ಭೂಮಿಗೆ ಬಹಳ ಹತ್ತಿರದಲ್ಲಿ ಸುತ್ತು ಬರುತ್ತಾನೆ. ಆಗ ಚಂದ್ರ ತುಂಬಾ ದೊಡ್ಡದಾಗಿ ಕಾಣಿಸುತ್ತಾನೆ. ಚಂದ್ರನ ಬೆಳಕಿನ ಪ್ರಕಾಶ ಕೂಡ ಜಾಸ್ತಿ ಇರುತ್ತದೆ. ಪ್ರತಿ ಹುಣ್ಣಮೆಯ ಚಂದ್ರನ ಗಾತ್ರಕ್ಕಿಂತ ಈ ಸಲ14 ಪಾಲು ಆತನ ಗಾತ್ರ ದೊಡ್ಡದಾಗಿರುತ್ತದೆಯಂತೆ .
ಖಗೋಳ ಶಾಸ್ತ್ರದ ಪ್ರಕಾರ 29 ದಿನ,12 ಗಂಟೆ 44 ನಿಮಿಷ, 38 ಸೆಕೆಂಡುಗಳಿಗೆ ಒಂದು ಹುಣ್ಣಿಮೆ ಎಂದು ಪರಿಗಣಿಸಲಾಗಿದೆ. ಹೀಗಾಗಿ 2 ರಿಂದ 3 ವರ್ಷಗಳಿಗೆ ಒಮ್ಮೆ 31 ದಿನ ಇರುವ ತಿಂಗಳಲ್ಲಿ ಎರಡು ಬಾರಿ ಹುಣ್ಣಿಮೆ ಸಂಭವಿಸುತ್ತದೆ. ಒಂದೇ ತಿಂಗಳಿನಲ್ಲಿ ಹುಣ್ಣಿಮೆ ಎರಡು ಬಾರಿ ಬಂದರೆ ಅದನ್ನು “ಬ್ಲೂ ಮೂನ್” ಹೇಳುತ್ತಾರೆ.
ವರ್ಷದಲ್ಲಿ 12 ಬಾರಿ ಹುಣ್ಣಿಮೆ ಉಂಟಾಗುತ್ತದೆ. ಅಂದರೆ ಪ್ರತಿ ತಿಂಗಳಲ್ಲಿ ಒಮ್ಮೆ ಪೂರ್ಣಚಂದ್ರನ ದರ್ಶನವಾಗುತ್ತದೆ. ಪ್ರತಿ ಹುಣ್ಣಿಮೆಯ ಕ್ಷಣಕ್ಕೂ ವಿವಿಧ ಸಂಸ್ಕೃತಿಗಳಲ್ಲಿ ಜನರು ವಿಭಿನ್ನ ಹೆಸರುಗಳನ್ನು ಇರಿಸಿದ್ದಾರೆ. ಹೀಗೆ ಹುಣ್ಣಿಮೆಯ ಚಂದ್ರನಿಗೆ ಅನೇಕ ಬಗೆಯ ಹೆಸರುಗಳಿವೆ.
ಹುಣ್ಣಿಮೆಯ ಪೂರ್ಣಚಂದ್ರನನ್ನು ಬಿಳುಪಿಗೆ ಹೋಲಿಸುತ್ತಾರೆ. ಆದರೆ ಸೂಪರ್ ಪಿಂಕ್ ಚಂದ್ರ, ಸ್ಟ್ರಾಬೆರಿ ಚಂದ್ರ ಹೀಗೆ ಬಣ್ಣ ಬಣ್ಣಗಳಲ್ಲಿ ಕಾಣಿಸಿಕೊಂಡಿರುವ ಚಂದ್ರ ಈಗ ನೀಲಿ ವರ್ಣದಲ್ಲಿ ಗೋಚರಿಸಲಿದ್ದಾನೆ ಎಂದು ಕಾಯುತ್ತಿದ್ದೀರಾ……!!! ಸಾಮಾನ್ಯವಾಗಿ ವರ್ಷದಲ್ಲಿ 12 ಬಾರಿ ಕಾಣಿಸಿಕೊಳ್ಳುವ “ವೆನಿಲಾ ಪೂರ್ಣಚಂದ್ರ”ನ ಮತ್ತೊಂದು ಬಾರೀಯ ಆಗಮನವೇ “ಈ ಬ್ಲೂ ಮೂನ್”.
ಗುಲಾಬಿ ಚಂದ್ರ, ಸ್ಟ್ರಾಬೆರಿ ಚಂದ್ರ ಹೀಗೆ ಬಣ್ಣದ ಚಂದ್ರನನ್ನು ಕಂಡವರು ನೀಲಿ ಚಂದ್ರನನ್ನು ನೋಡಲು ಬಯಸಿದ್ದೀರಾ? ಹಾಗಿದ್ದರೆ ನಿರಾಶೆ ಖಚಿತ. ಏಕೆಂದರೆ ಬ್ಲೂಮೂನ್ ಹೆಸರಿಗೆ ಮಾತ್ರವೇ ನೀಲಿ ಚಂದ್ರ. ನಾವು ನೋಡುವ ಮಾಮೂಲಿ ಹುಣ್ಣಿಮೆಗೂ ಇದಕ್ಕೂ ಯಾವ ವ್ಯತ್ಯಾಸವೂ ಇಲ್ಲ. ಆದರೆ, ಕೆಲವು ನಿರ್ದಿಷ್ಟ ವಾತಾವರಣ ಸನ್ನಿವೇಶಗಳಿಂದ ಬೆಳಕಿನ ವಕ್ರೀಭವನಗೊಂಡು ನೀಲಿ ಬಣ್ಣದಲ್ಲಿ ಚಂದ್ರ ಗೋಚರಿಸುವ ಸಾಧ್ಯತೆಗಳೂ ಇರುತ್ತದೆ.
ಬ್ಲೂಮೂನ್ ಎಂದು ಕರೆಯಲು ಹಿಂದಿರುವ ಕಾರಣ :
1983ರಲ್ಲಿ ಇಂಡೋನೇಷ್ಯಾದಲ್ಲಿ ಕ್ರಕೋಟಾ ಎಂಬ ಅಗ್ನಿಪರ್ವತ ಸ್ಫೋಟಗೊಂಡಿತ್ತು. ಅದರ ದಟ್ಟನೆಯ ಹೊಗೆ ಮೋಡಗಳು ಆಕಾಶಕ್ಕೆ ಚಿಮ್ಮಿತ್ತು. ಆ ಮೋಡದಲ್ಲಿದ್ದ ಕಣಗಳು ರಾತ್ರಿ ವೇಳೆ ಕೆಂಪು ಬೆಳಕನ್ನು ತೊಲಗಿಸಿ ಚಂದ್ರ ನೀಲಿ ಬಣ್ಣದಲ್ಲಿ ಕಾಣುವಂತೆ ಮಾಡಿತ್ತು. ಅಂದು ಅದು ಅತಿ ಅಪರೂಪದ ವಿದ್ಯಮಾನವಾಗಿತ್ತು . ಆಗಿನ ಚಂದ್ರ ಹೀಗೆ ಹೆಚ್ಚುವರಿ ಅವಧಿಯಲ್ಲಿ ಸಂಪೂರ್ಣವಾಗಿ ಕಾಣಿಸಿಕೊಂಡಿದ್ದ ಕಾರಣದಿಂದ “ನೀಲಿ ಚಂದ್ರ” ಎಂಬ ಉಪಮೆಯನ್ನು ಪಡೆದುಕೊಂಡ.
ಸಾಮಾನ್ಯವಾಗಿ ತಿಂಗಳಿಗೆ ಒಮ್ಮೆ ಹುಣ್ಣಿಮೆ ಬರುತ್ತದೆ. ಆದರೆ ಬ್ಲೂ ಮೂನ್ ಕಾಣಿಸಿಕೊಂಡಾಗ ಎರಡು ಬಾರಿ ಹುಣ್ಣಿಮೆ ಇರುತ್ತದೆ. ಬ್ಲೂ ಮೂನ್‌ನಲ್ಲಿ ಎರಡು ವಿಧಗಳಿವೆ. ಆದರೆ ಬ್ಲೂ ಮೂನ್ ಹೆಸರಿಗೂ ಚಂದ್ರನ ಬಣ್ಣಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಗಮನದಲ್ಲಿ ಇರಿಸಿಕೊಳ್ಳಬೇಕು.
ನಾಸಾದ ಪ್ರಕಾರ, ಈ ವರ್ಷ ನಾಲ್ಕು ಬಾರಿ ಬ್ಲೂ ಮೂನ್ ಸಂಭವಿಸಲಿದೆ. ನಾಳೆ ಅಂದರೆ ಆಗಸ್ಟ್ 30 ರಂದು ಕಾಣಿಸುವುದು ಮೂರನೇ ಬ್ಲೂ ಮೂನ್ ಆಗಿದೆ. ಈ ತಿಂಗಳು ಎರಡು ದಿನ ಚಂದ್ರನು ಪೂರ್ಣ ಆಕಾರದಲ್ಲಿ ಆಗಸದಲ್ಲಿ ಉದಯಿಸಲಿದ್ದಾನೆ.
ಸಮಯ ಹಾಗೂ ದಿನಾಂಕದ ಆಧಾರದ ಮೇಲೆ ಈ ಬಾರಿ ಉದಯಿಸುವ ಬ್ಲೂ ಮೂನ್ ಅನ್ನು ಎರಡನೇ ಬ್ಲೂ ಮೂನ್ ಎಂದು ಅಂದಾಜಿಸಲಾಗಿದೆ. ಚಂದ್ರನ ಹಂತಗಳು ಸರಾಸರಿ 29.5 ದಿನಗಳವರೆಗೆ ಇರುವುದರಿಂದ 12 ಚಂದ್ರನ ಚಕ್ರಗಳನ್ನು ನಿಜವಾಗಿಯೂ 354 ದಿನಗಳಲ್ಲಿ ಪೂರ್ಣಗೊಳಿಸಬಹುದು. ಹೀಗಾಗಿ 13ನೇ ಹುಣ್ಣಿಮೆಯು ಪ್ರತಿ 2.5 ವರ್ಷಗಳಿಗೊಮ್ಮೆ ಅಥವಾ ನಿರ್ದಿಷ್ಟ ವರ್ಷದಲ್ಲಿ ಗೋಚರಿಸುತ್ತದೆ. 13ನೇ ಹುಣ್ಣಿಮೆಗೆ ಬ್ಲೂ ಮೂನ್ ಎಂದು ಕರೆಯುಲಾಗುತ್ತದೆ.
1948ರಲ್ಲಿ ಚಂದ್ರ ಭೂಮಿಯ ತುಂಬ ಹತ್ತಿರ ಬಂದು ಸುಂದರವಾದ ಸೂಪರ್ ಮೂನ್ ಕಾಣಿಸಿಕೊಂಡಿತ್ತು. ಆನಂತರ 2018ರಲ್ಲಿ ಕೂಡ ಎರಡು ಬ್ಲೂ
ಮೂನ್ ಉಂಟಾಗಿತ್ತು. ಇನ್ನು ಇಂತಹ ಒಂದು ಘಟನೆ ನೋಡಲು 2034 ಇಸವಿ ತನಕ ಕಾಯಬೇಕು .
ಬ್ಲೂ ಸೂಪರ್ ಮೂನ್ ನೋಡಲು ಉತ್ತಮ ಸಮಯ :
ಮುಸ್ಸಂಜೆ ವೇಳೆ, ಸೂರ್ಯಾಸ್ತದ ನಂತರ ಸೂಪರ್ ಬ್ಲೂ ಮೂನ್ ವೀಕ್ಷಣೆಗೆ ಉತ್ತಮ ಸಮಯ. ಆಗಸ್ಟ್ 30, 2023 ರ ರಾತ್ರಿ 9.36ಕ್ಕೆ ಸರಿಯಾಗಿ ಬ್ಲೂ ಮೂನ್ ಗರಿಷ್ಠ ಪ್ರಕಾಶಮಾನದಲ್ಲಿ ಕಾಣಿಸುತ್ತದೆ. ವಿವಿಧ ದೇಶಗಳಲ್ಲಿ ವಿವಿಧ ವಿವಿಧ ಸಮಯಕ್ಕೆ ಈ ಅದ್ಭುತವನ್ನು ವೀಕ್ಷಣೆ ಮಾಡಬಹುದಾಗಿದೆ.
ಪೂರ್ಣ ಚಂದಿರನನ್ನು ನೋಡುವುದು ಎಷ್ಟೋ ಜನರಿಗೆ ಮನಸಿಗೆ ಮುದ ನೀಡುವ ಸಂಗತಿ. ಕತ್ತಲಿನ ನಡುವೆ ಬೆಳಕು ಯಾವಾಗಲೂ ಹಿತಕರ ಅನುಭೂತಿ ನೀಡುತ್ತದೆ. ಹೀಗಾಗಿ ‘ನೀಲಿ’ ಬಣ್ಣದ ಕಲ್ಪನೆಯನ್ನು ಬದಿಗಿಟ್ಟು ಪೂರ್ಣ ಚಂದ್ರನ ಸೊಬಗನ್ನು ಕಣ್ತುಂಬಿಕೊಳ್ಳಬಹುದು. ಅಂದ ಹಾಗೆ ಚಂದ್ರನ ಪಕ್ಕದಲ್ಲಿಯೇ ತೀಕ್ಷ್ಣವಾಗಿ ಪ್ರಜ್ವಲಿಸುವ ಕೆಂಪು ಬಣ್ಣದ ನಕ್ಷತ್ರದಂತಹ ವಸ್ತುವನ್ನು ನೋಡಲು ಮರೆಯದಿರಿ. ಅದು ನಕ್ಷತ್ರವಲ್ಲ, ನಮ್ಮ ನೆರೆಹೊರೆಯ ಗೆಳೆಯ ಮಂಗಳ.ಮೈಸೂರು: ಮನೆ ಯಜಮಾನಿಗೆ ಮಾಸಿಕ 2,000 ರು : ಗೃಹಲಕ್ಷ್ಮೀ ಯೋಜನೆಗೆ ಖರ್ಗೆ , ರಾಹುಲ್ ಚಾಲನೆ
ಹುಣ್ಣಿಮೆಯ ಚಂದ್ರನಿಗೆ ಪ್ರತಿ ದೇಶ, ಪ್ರದೇಶ, ಭಾಷೆಗಳಲ್ಲಿ ವಿಭಿನ್ನ ಹೆಸರುಗಳಿವೆ. ತಿಂಗಳ ಚಂದ್ರನಿಗೆ ನಮ್ಮ ಹಿರಿಯರು ಅನೇಕ ರೀತಿ ನಾಮಕರಣಗಳನ್ನು ಮಾಡಿದ್ದಾರೆ. ವಿಜ್ಞಾನಿಗಳೂ ಆಧುನಿಕ ಹೆಸರುಗಳನ್ನು ನೀಡಿ ಖುಷಿ ಪಟ್ಟಿದ್ದಾರೆ. ‘ಬ್ಲೂಮೂನ್’ ಎನ್ನುವುದು ವಿಶೇಷವಲ್ಲದಿದ್ದರೂ ಜಗತ್ತಿನ ಸೃಷ್ಟಿಯ ಚಟುವಟಿಕೆಯಲ್ಲಿ ವಿಶೇಷವಂತೂ ಹೌದು…. ನೀಲಿ ಚಂದ್ರಮನನ್ನು ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ…..
- ಮೈಸೂರಿನಲ್ಲಿ ಚಲಿಸುತ್ತಿದ್ದ KSRTC ಬಸ್ಗೆ ಬೆಂಕಿ: 50 ಕ್ಕೂ ಹೆಚ್ಚು ಪ್ರಯಾಣಿಕರು ರಕ್ಷಣೆ
- ಪಿ.ವಿ ಸಿಂಧು ಡಿ.22 ರಂದು ಹಸೆಮಣೆ ಏರಲಿದ್ದಾರೆ
- ವಿಧಾನ ಪರಿಷತ್ ಸಚಿವಾಲಯದಲ್ಲಿ ನೇಮಕಾತಿ: ಹುದ್ದೆಗಳ ವಿವರ, ವೇತನ ಮತ್ತು ಅರ್ಜಿ ದಿನಾಂಕ
- ಅಕ್ರಮ ಆಸ್ತಿ ಆರೋಪ: ಇಂದು ಲೋಕಾಯುಕ್ತ ಮುಂದೆ ಹಾಜರಾಗುವಾರಾ ಸಚಿವ ಜಮೀರ್ ಅಹ್ಮದ್?
- ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಡಿ.3 ರಂದು ಶಾಲೆ, ಅಂಗನವಾಡಿ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ
- ಮಂಡ್ಯ ಎಡಿಸಿ ಸನ್ಯಾಸ ದೀಕ್ಷೆ ಸ್ವೀಕರಿಸಲು ನಿರ್ಧಾರ
More Stories
ಮೈಸೂರಿನಲ್ಲಿ ಚಲಿಸುತ್ತಿದ್ದ KSRTC ಬಸ್ಗೆ ಬೆಂಕಿ: 50 ಕ್ಕೂ ಹೆಚ್ಚು ಪ್ರಯಾಣಿಕರು ರಕ್ಷಣೆ
ಪಿ.ವಿ ಸಿಂಧು ಡಿ.22 ರಂದು ಹಸೆಮಣೆ ಏರಲಿದ್ದಾರೆ
ವಿಧಾನ ಪರಿಷತ್ ಸಚಿವಾಲಯದಲ್ಲಿ ನೇಮಕಾತಿ: ಹುದ್ದೆಗಳ ವಿವರ, ವೇತನ ಮತ್ತು ಅರ್ಜಿ ದಿನಾಂಕ