December 19, 2024

Newsnap Kannada

The World at your finger tips!

love,suicide,death

Youth suicides: Love jihad allegation

ಯುವತಿ ಆತ್ಮಹತ್ಯೆ : ಲವ್ ಜಿಹಾದ್ ಆರೋಪ- ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

Spread the love

ಕುಂದಾಪುರದ ಯುವತಿಯೊಬ್ಬಳನ್ನು ವಂಚಿಸಿದ ವಿವಾಹಿತ ಪುರುಷನ ಮೋಸ ಅರಿತು ಆ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ ಲವ್ ಜಿಹಾದ್ ಆರೋಪ ಕೇಳಿಬಂದಿದೆ.

ಕುಂದಾಪುರ ಬಳಿಯ ಉಪ್ಪಿನಕುದ್ರು ನಿವಾಸಿ ಶಿಲ್ಪಾ ಎಂಬ ಯುವತಿ ಮೂರು ದಿನಗಳ ಹಿಂದೆ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಳು.

ಇದನ್ನು ಓದಿ –ಹೊಟ್ಟೆ ನೋವು ಚಿಕಿತ್ಸೆಗೆ 10 ಕೋಟಿ ರು ಬಿಲ್! ಆದರೂ ಬದುಕಲಿಲ್ಲ ಆ ಮಹಿಳೆ – ದೂರು ದಾಖಲು

ವಿವಾಹವಾಗಿದ್ದ ಮುಡುಗೋಪಾಡಿ ಅಜೀಜ್ ಎಂಬಾತನ ಜತೆ ಎರಡು ಮೂರು ವರ್ಷಗಳಿಂದ ಸ್ನೇಹದಿಂದ ಇದ್ದ ಶಿಲ್ಪಾಳನ್ನು ನಂಬಿಸಿ ತನ್ನ ಫ್ಲಾಟ್ ಗೆ ಕರೆದೊಯ್ದು ಲೈಂಗಿಕವಾಗಿ ಬಳಸಿಕೊಂಡಿದ್ದ ಎಂಬ ಆರೋಪ ಕೇಳಿಬಂದಿದೆ.

ಆಕೆಯ ಕೆಲ ಖಾಸಗಿ ಫೋಟೋಗಳನ್ನು ಸೆರೆ ಹಿಡಿದಿದ್ದ ಅಜೀಜ್ ಬಳಿಕ ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದ. ಮದುವೆಯಾಗುವಂತೆ ಒತ್ತಾಯಿಸಿದ್ದನು. ಆತನ ಪತ್ನಿ ಕೂಡ ಅಜೀಜ್ ನನ್ನು ಮದುವೆಯಾಗಿ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಳು ಎನ್ನಲಾಗಿದೆ.

ಅಜೀಜ್ ನ ಬ್ಲಾಕ್ ಮೇಲ್, ಮತಾಂತರ ಯತ್ನ, ಕಿರುಕುಳಕ್ಕೆ ಬೇಸತ್ತು ಶಿಲ್ಪಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶಿಲ್ಪಾ ಸಾವಿನ ಹಿಂದೆ ಲವ್ ಜಿಹಾದ್ ಕೈವಾಡವಿದೆ ಎಂದು ಹಿಂದೂಪರ ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ. ಆರೋಪಿ ಅಜೀಜ್ ನನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಕರಣದ ಬಗ್ಗೆ ತನಿಖೆಯಾಗಬೇಕು ಎಂದು ಹಿಂದೂಪರ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!