ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಪೊಲೀಸರು ಬಡವರಿಗೊಂದು ರೂಲ್ಸ್ ಶ್ರೀಮಂತರಿಗೊಂದು ರೂಲ್ಸ್ ಎಂಬಂತೆ ವರ್ತನೆ ಮಾಡುತ್ತಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್ ಅಣೆಕಟ್ಟೆಯ ಮೇಲೆ ಸಂಚಾರಕ್ಕೆ ನಿರ್ಬಂಧ ಹೇರಿದ್ದರೂ ಪೊಲೀಸರು ತಮ್ಮ ಜೀಪ್‍ನ್ನು ನೀಡಿ ಡ್ಯಾಂ ಮೇಲೆ ಯುವಕನೋರ್ವನಿಗೆ ಚಲಾಯಿಸಲು ಅವಕಾಶ ನೀಡಿರುವುದು ಸಾಕಷ್ಟು ವಿವಾದಕ್ಕೆ ಎಡೆ ಮಾಡಿದೆ.
ಮಂಡ್ಯ ಜಿಲ್ಲೆಯ ಪೊಲೀಸರು ಬಡವರಿಗೊಂದು ಕಾನೂನು ಶ್ರೀಮಂತರಿಗೊಂದು ಕಾನೂನು ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ.
ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿ ತನ್ನ ಜೀಪ್ ಯುವಕನಿಗೆ ನೀಡಿದ್ದರಿಂದ ಡ್ಯಾಂ ಮೇಲೆ ಓಡಿಸಿದ್ದಾನೆ.
ಈ ಯುವಕ ಡ್ರೈವ್ ಮಾಡುವ ವೇಳೆ ಪೊಲೀಸ್ ಅಧಿಕಾರಿಯೇ ವೀಡಿಯೋ ಮಾಡಿದ್ದಾರೆ. ಯುವಕ ಈ ವಿಡಿಯೋಗೆ ಹೆಬ್ಬುಲಿ ಸಿನಿಮಾದ ಹಾಡು ಹಾಕಿ ವಾಟ್ಸಪ್‍ಗೆ ಹಾಕಿದ್ದಾನೆ.
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಜನ ಸಾಮಾನ್ಯರು ಪೊಲೀಸರ ಈ ನಡೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಡ ವ್ಯಾಪಾರಿ ಮೇಲೆ ಹಲ್ಲೆ
ಕೆಆರ್‍ಎಸ್ ಅಣೆಕಟ್ಟೆಯ ಭದ್ರತೆಯ ನೆಪದಲ್ಲಿ ಕೆಲವು ದಿನಗಳ ಹಿಂದೆ ಪೊಲೀಸ್ ಪೇದೆ ಹುಚ್ಚೇಗೌಡ, ಬೀದಿ ಬದಿ ವ್ಯಾಪಾರಿ ಮುದ್ದ ಎಂಬಾತನ ಮೇಲೆ ಹಲ್ಲೆ ನಡೆಸಿದ್ದರು.
ಬೃಂದಾವನದ ದ್ವಾರದ ಬಳಿ ಮುದ್ದ ವ್ಯಾಪಾರ ಮಾಡುವ ವೇಳೆ ಇಲ್ಲಿ ವ್ಯಾಪಾರ ಮಾಡಿದ್ದರೆ ಭದ್ರತೆಗೆ ಲೋಪವಾಗುತ್ತದೆ ಎಂದು ಹಲ್ಲೆ ಮಾಡಲಾಗಿತ್ತು. ವ್ಯಾಪಾರಿ ಮುದ್ದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
- ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು
- ಮುಖ್ಯಮಂತ್ರಿ ವಿರುದ್ಧ ಅಪಪ್ರಚಾರ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
- ₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ
More Stories
ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
ಮುಖ್ಯಮಂತ್ರಿ ವಿರುದ್ಧ ಅಪಪ್ರಚಾರ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ