ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೆಸರಿನಲ್ಲಿ ವಂಚನೆ ಮಾಡಿದ ಕಾಂಗ್ರೆಸ್ ನಾಯಕಿ ಪೂರ್ಣಿಮಾ

Team Newsnap
1 Min Read

ಹುಬ್ಬಳ್ಳಿಯ ಕಾಂಗ್ರೆಸ್ ನಾಯಕಿ ಯೊಬ್ಬರು ಜನರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ರವರ ಕಪ್ಪು ಹಣವನ್ನು ಸಾಲವಾಗಿ ನೀಡುತ್ತೇನೆಂದು ಹೇಳಿ ಕಾಂಗ್ರೆಸ್ ನಾಯಕನ ಹೆಸರಲ್ಲೇ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಸವದತ್ತಿ ಡಿ.ಕೆ ಶಿವಕುಮಾರ್​ರವರ ಕಪ್ಪು ಹಣದಿಂದ ಕಡಿಮೆ ಬಡ್ಡಿಯಲ್ಲಿ ಸಾಲವನ್ನು ನೀಡುತ್ತೇನೆಂದು ಜನರಿಗೆ ನಂಬಿಸಿ ಲಕ್ಷ ಲಕ್ಷ ಹಣವನ್ನು ವಸೂಲಿ ಮಾಡಿ ಎಸ್ಕೇಪ್ ಆಗಿದ್ದಾರೆಂದು ಗೊತ್ತಾಗಿದೆ.

ನಾನು ಕೆಪಿಸಿಸಿ ಕಚೇರಿಯಿಂದ ಕರೆ ಮಾಡುತ್ತಿದ್ದೇನೆ. ನನಗೆ 10,000 ಸಾವಿರ ಹಣವನ್ನು ನೀಡಿದರೆ ಡಿಕೆಶಿಯವರ ಕಪ್ಪು ಹಣದಿಂದ ನಿಮಗೆ ಸಾಲವನ್ನು ಕೊಡುತ್ತೇವೆ ಎಂದು ಹೇಳಿ ಲಕ್ಷ ಲಕ್ಷ ಹಣ ವಸೂಲಿ ಮಾಡಿ ಸುಮಾರು 35ಕ್ಕೂ ಹೆಚ್ಚು ಜನರಿಗೆ ಮಹಾಮೋಸ ಮಾಡಿರುವ ಆರೋಪಗಳು ಕೇಳಿಬಂದಿವೆ.

ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಸವದತ್ತಿ ಡಿ.ಕೆ. ಶಿವಕುಮಾರ್ ಹೆಸರಿನ ಜೊತೆಗೆ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಹೆಸರು ಕೂಡಾ ಬಳಕೆ ಮಾಡಿ ಜನರಿಗೆ ವಂಚಿಸಿದ್ದಾರೆನ್ನಲಾಗಿದೆ.

ನನ್ನ ಮನೆಗೆ 5 ಲಕ್ಷ ಸಾಲಬೇಕಿತ್ತು. ಇದಕ್ಕೆ ಸಾಲ ನೀಡಬೇಕಾದರೆ 10 ಸಾವಿರ ರು. ಹಣವನ್ನು ನೀಡಿ ಎಂದು ಪೂರ್ಣಿಮಾ ಸವದತ್ತಿ ಹೇಳಿದ್ದರು.

ನಿಜವೆಂದು ನಂಬಿ ಕೇಳಿದಷ್ಟು ಹಣವನ್ನು ನೀಡಿದ್ದೆ. ಆದರೆ ಯಾವುದೇ ಹಣವನ್ನು ನೀಡದೇ ನಂಬಿಕೆಯ ದ್ರೋಹ ಮಾಡಿದ್ದಾರೆಂದು ಮೋಸ ಹೋದ ಅಕಾಶ್ ದೂರಿನಲ್ಲಿ ತಿಳಿಸಿದ್ದಾರೆ.

ಸಾಲವನ್ನು ಕೊಡಿ ಎಂದು ಕೇಳಿದರೆ ನನಗೆ ನೀವು ಹಣವನ್ನೇ ನೀಡಿಲ್ಲ ಎಂದು ಹೇಳಿದ್ದ ಪೂರ್ಣಿಮಾ ಇದೀಗ ಪರಾರಿಯಾಗಿದ್ದಾರೆ. ಹಣವನ್ನು ನೀಡಿ ಎರಡು ವರ್ಷವಾದರೂ ಸಾಲವನ್ನು ಪಡೆಯದ ಜನರು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪೂರ್ಣಿಮಾ ಸವದತ್ತಿ ವಿರುದ್ಧ ದೂರನ್ನು ದಾಖಲಿಸಿದ್ದಾರೆ.

Share This Article
Leave a comment