‘ಸ್ವಾಭಿಮಾನಿ’ ಪದ ಬಳಕೆ ಹಕ್ಕು ನಿಮಗಿಲ್ಲ : ಸುಮಲತಾ ವಿರುದ್ಧ ರವೀಂದ್ರ ತರಾಟೆ

Team Newsnap
1 Min Read
You do not have the right to use the word 'self-respecting': Sumalatha vs Ravindra 'ಸ್ವಾಭಿಮಾನಿ' ಪದ ಬಳಕೆ ಹಕ್ಕು ನಿಮಗಿಲ್ಲ : ಸುಮಲತಾ ವಿರುದ್ಧ ರವೀಂದ್ರ ತರಾಟೆ

ಸ್ವಾಭಿಮಾನಿ ಈ ಪದ ಬಳಕೆ ಮಾಡುವ ಹಕ್ಕು ಕಳೆದುಕೊಂಡಿದ್ದೀರಿ, ನೀವು ಕೊಲೆಗಡುಕರಾಗಿದ್ದೀರಿ, ಕತ್ತು ಹಿಸುಕುದ್ದೀರಿ. ತಾವೂ ಬೆನ್ನಿಗೆ ಚೂರಿ ಹಾಕುವವರು ಎನ್ನುವ ಮೂಲಕ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ರವೀಂದ್ರ ವಾಗ್ದಾಳಿ ಮಾಡಿದ್ದಾರೆ.

ಸುಮಲತಾ ಬಿಜೆಪಿಗೆ ಬೆಂಬಲ ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ರವೀಂದ್ರ ಸುಮಲತಾ ಅವರಿಗೆ ಜಿಲ್ಲೆಯ ಅಸ್ಮಿತೆ, ಸ್ವಾಭಿಮಾನಕ್ಕಾಗಿ 249 ಕಿ.ಮೀ ಪಾದಯಾತ್ರೆ ಮಾಡಿದ್ದೆ. ಹಲವರ ಹೋರಾಟದಿಂದಾಗಿ ಸುಮಲತಾ ಅವರು ಗೆಲುವು ಸಾಧಿಸಿದ್ದಾರೆ. ಆದರೆ ಅವರು ಗೆಲುವು ಸಾಧಿಸಿದ ಬಳಿಕ ಜಿಲ್ಲೆಗೆ ಏನಾದರೂ ಅಭಿವೃದ್ಧಿ ಕೆಲಸವನ್ನು ಮಾಡಬೇಕು ಎನ್ನುವ ಪ್ರಯತ್ನವನ್ನು ಮಾಡಲಿಲ್ಲ ಎಂದಿದ್ದಾರೆ

ಸುಮಲತಾಗೆ ಮಾರ್ಗದರ್ಶಕರು ಗೊತ್ತಿಲ್ಲ, ಜಿಲ್ಲೆಯ ಬೆಳವಣಿಗೆಗೆ ಏನು ಬೇಕು ಎಂದು ನಮಗೆ ಹೇಳಬೇಕಿತ್ತು. ಆ ಯೋಗ್ಯತೆ ನಮಗಿಲ್ಲ ಅಂತಾ ಯಾಕೆ ಅನ್ಕೊಂಡರು ಎಂದು ಪ್ರಶ್ನೆ ಮಾಡಿದ್ದಾರೆ.

ಈ ದಿನ ಯಾಕೆ ಸ್ವಾಭಿಮಾನಿ ಅಂತಾ ಪದೇ ಪದೇ ಬಳಸುತ್ತಾರೆ. ಸ್ವಾಭಿಮಾನಕ್ಕೂ ಅವರಿಗೂ ಎಲ್ಲಿಂದೆಲ್ಲಿ ಸಂಬಂಧ ಯಾವ ಸ್ವಾಭಿಮಾನಿ ಕೆಲಸವನ್ನು ಅವರು ಮಾಡಿದ್ದಾರೆ. ಅವರು ಇವತ್ತು ಬರುತ್ತಾರೆ, ನಾಳೆ ಬರುತ್ತಾರೆ ಎಂದು ಕಾದಿದ್ದು ಒಂದೇ ಜಿಲ್ಲೆಗೆ ಭಾಗ್ಯ ಎಂದು ಕಿಡಿಕಾರಿದರು.ಟೋಲ್ ದರ ವಸೂಲಿ: KSRTC ಬಸ್​ ಟಿಕೆಟ್​ ​ದರ ಏರಿಕೆ? ಯಾವ ಬಸ್ ಗೆ ಎಷ್ಟು ದರ ? ಮಾಹಿತಿ ಇಲ್ಲಿದೆ

Share This Article
Leave a comment